Neer Dose Karnataka
Take a fresh look at your lifestyle.

ಮಿಸ್ ಆಗಿ ಬಿಡುಗಡೆ ಆಯಿತು ಬಿಗ್ ಬಾಸ್ ಗೆ ಹೋಗುತ್ತಿರುವವರ ಪಟ್ಟಿ: ಸೀಸನ್ 9 ಕ್ಕೆ ಹೋಗುತ್ತಿರುವ ಕಲಾವಿದರು ಯಾರ್ಯಾರು ಗೊತ್ತೇ??

39,864

ಬಿಗ್ ಬಾಸ್ ಓಟಿಟಿ ಸೀಸನ್ ಮುಗಿದು ಬಿಗ್ ಬಾಸ್ ಟಿವಿ ಶೋ ಶುರುವಾಗಲು ಇನ್ನೇನು ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಉಳಿದಿದೆ. ಸೆಪ್ಟೆಂಬರ್ 24ರಂದು ಬಿಗ್ ಬಾಸ್ ಕನ್ನಡ ಸೀಸನ್ 9 ಶುರುವಾಗಲಿದ್ದು, ಬಿಗ್ ಬಾಸ್ ಓಟಿಟಿ ಸೀಸನ್ ಇಂದ ನಾಲ್ವರು ಸ್ಪರ್ಧಿಗಳು ಟಿವಿ ಸೀಸನ್ ಗೆ ಆಯ್ಕೆಯಾಗಿದ್ದಾರೆ, ಹಾಗೂ ಹಳೆಯ ಸ್ಪರ್ಧಿಗಳು 5 ಜನ ಬಿಗ್ ಬಾಸ್ ಗೆ ಬರಲಿದ್ದು, ಇನ್ನು 6 ಜನ ಹೊಸ ಸ್ಪರ್ಧಿಗಳು ಇರಲಿದ್ದಾರಂತೆ, ಇದೀಗ ಬಿಗ್ ಬಾಸ್ ಮನೆಗೆ ಹೋಗುವ ಹಿಂದಿನ ಸೀಸನ್ ಸ್ಪರ್ಧಿಗಳು ಹಾಗೂ ಹೊಸ ಸ್ಪರ್ಧಿಗಳು ಯಾರು ಎಂದು ಕುತೂಹಲ ಹೆಚ್ಚಾಗಿದ್ದು, ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಯಾರೆಲ್ಲಾ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎಂದು ತಿಳಿಸುತ್ತೇವೆ ನೋಡಿ..

ನಟಿ ಪ್ರೇಮ :- ಕೆಲ ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿರುವ ನಟಿ ಪ್ರೇಮಾ, ಇತ್ತೀಚೆಗೆ ವೆಡ್ಡಿಂಗ್ ಗಿಫ್ಟ್ ಸಿನಿಮಾ ಮೂಲಕ ರೀಎಂಟ್ರಿ ಕೊಟ್ಟರು. ಆಗಿನ ಕಾಲದ ಸ್ಟಾರ್ ನಟಿಯಾಗಿದ್ದಾ ಪ್ರೇಮ ಅವರು ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎನ್ನಲಾಗುತ್ತಿದೆ.
ನವೀನ್ ಕೃಷ್ಣ :- ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯನಟ ಶ್ರೀನಿವಾಸ್ ಮೂರ್ತಿ ಅವರ ಮಗ ನವೀನ್ ಕೃಷ್ಣ, ಚಿತ್ರರಂಗದಲ್ಲಿ ನಟನಾಗಿ ಮತ್ತು ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಇವರು ಬಿಗ್ ಬಾಸ್ ಮನೆಗೆ ಬರಬಹುದು ಎನ್ನಲಾಗುತ್ತಿದೆ.

ತರುಣ್ ಚಂದ್ರ :- ಸ್ಯಾಂಡಲ್ ವುಡ್ ಇಂದ ಸ್ವಲ್ಪ ದೂರ್ಸ್ ಉಳಿದಿರುವ ನಟ ತರುಣ್ ಚಂದ್ರ ಬಿಗ್ ಬಾಸ್ ಮನೆಗೆ ಬರುತ್ತಾರೆ ಎನ್ನಲಾಗಿದೆ.
ವಿನಯ್ ಕುಮಾರ್ :- ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿನೋದ್ ಕುಮಾರ್ ಅವರು ಬಿಗ್ ಬಾಸ್ ಮನೆಗೆ ಬರುತ್ತಾರೆ ಎನ್ನಲಾಗುತ್ತಿದೆ. ಇವರು ಬಿಗ್ ಬಾಸ್ ಗೆ ಬಂದರೆ, ಎಂಟರ್ಟೈನ್ಮೆಂಟ್ ಗ್ಯಾರಂಟಿ ಎನ್ನುತ್ತಿದ್ದಾರೆ ವೀಕ್ಷಕರು.
ಭೂಮಿಕಾ ಬಸವರಾಜ್ :- ಸೋಷಿಯಲ್ ಮೀಡಿಯಾ ಮೂಲಕ ಫೇಮಸ್ ಆಗಿರುವ ಭೂಮಿಕಾ ಬಸವರಾಜ್ ಈ ಬಾರಿ ಬಿಗ್ ನಾ ಶೋಗೆ ಬರಲಿದ್ದಾರಂತೆ.

ದಿಲೀಪ್ ರಾಜ್ :- ಹಿಟ್ಲರ್ ಕಲ್ಯಾಣ ಧಾರವಾಹಿ ಮೂಲಕ ಹೊಸ ಕ್ರೇಜ್ ಸೃಷ್ಟಿಸಿಕೊಂಡಿರುವ ನಟ ದಿಲೀಪ್, ಕನ್ನಡ ಚಿತ್ರರಂಗದಲ್ಲೂ ಸಕ್ರಿಯರಾಗಿದ್ದವರು, ಇವರು ಕೂಡ ಬಿಗ್ ಬಾಸ್ ಮನೆಗೆ ಬರುತ್ತಾರೆ ಎನ್ನಲಾಗುತ್ತಿದೆ.
ಮಿಮಿಕ್ರಿ ಗೋಪಿ :- ಸಿಕ್ಕಾಪಟ್ಟೆ ಮನರಂಜನೆ ನೀಡುವ ಮಿಮಿಕ್ರಿ ಗೋಪಿ ಅವರು ಬಿಗ್ ಬಾಸ್ ಮನೆಗೆ ಬರುತ್ತಾರಂತೆ.
ನಮ್ರತಾ ಗೌಡ :- ಪುಟ್ಟಗೌರಿ ಮದುವೆ ಹಾಗೂ ನಾಗಿಣಿ2 ಧಾರವಾಹಿಯಿಂದ ಹೆಸರು ಮಾಡಿರುವ ನಟಿ ನಮ್ರತಾ ಗೌಡ ಬಿಗ್ ಬಾಸ್ ಗೆ ಬರುತ್ತಾರಂತೆ.

ಟೆನ್ನಿಸ್ ಕೃಷ್ಣ :- ಚಂದನವನದ ಖ್ಯಾತ ಹಾಸ್ಯನಟ ಟೆನ್ನಿಸ್ ಕೃಷ್ಣ ಅವರು ಸಹ ಬಿಗ್ ಬಾಸ್ ಮನೆಗೆ ಬರುತ್ತಾರೆ ಎನ್ನಲಾಗುತ್ತಿದೆ.
ಅನುಪಮಾ ಗೌಡ :- ಕಿರುತೆರೆಯಲ್ಲಿ ನಟಿಯಾಗಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಪಮಾ ಗೌಡ ಅವರು, ಬಿಬಿಕೆ5 ನಲ್ಲಿ ಸಹ ಸ್ಪರ್ಧಿಸಿದ್ದರು, ಇವರು ಸಹ ಸೀಸನ್ 9ರಲ್ಲಿ ಇರಲಿದ್ದಾರೆ.
ದೀಪಿಕಾ ದಾಸ್ :- ನಾಗಿಣಿ ಧಾರವಾಹಿ ಮೂಲಕ ಇವರಿಗೆ ಭಾರಿ ಕ್ರೇಜ್ ಇತ್ತು. ದೀಪಿಕಾ ಅವರು ಸಹ ಬಿಬಿಕೆ9 ಗೆ ಎಂಟ್ರಿ ಕೊಡಲಿದ್ದಾರೆ. ಇವರು ಬಿಬಿಕೆ7ನಲ್ಲಿ ಸ್ಪರ್ಧಿಸಿದ್ದರು.
ಪ್ರಶಾಂತ್ ಸಂಬರ್ಗಿ :- ಚಿಂತಕ ಪ್ರಶಾಂತ್ ಸಂಬರ್ಗಿ, ಬಿಬಿಕೆ7 ನಲ್ಲಿ ಸ್ಪರ್ಧಿಸಿದ್ದರು, ಇವರು ಸಹ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎನ್ನಲಾಗುತ್ತಿದೆ.

ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಓಟಿಟಿ ಸೀಸನ್ ಇಂದ ನಾಲ್ವರು ಸ್ಪರ್ಧಿಗಳು ಬರುತ್ತಿದ್ದು, ಆರ್ಯವರ್ಧನ್ ಗುರೂಜಿ ಸೀಸನ್ 9 ಕ್ಕೆ ಪ್ರವೇಶ ಪಡೆದಿದ್ದಾರೆ. ನಟ ಹಾಗೂ ಕನ್ನಡ ರಾಪರ್ ರಾಕೇಶ್ ಅಡಿಗ, ನಟ ನಿರ್ದೇಶಕ ಹಾಗೂ ಆರ್.ಜೆ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್, ಈ ನಾಲ್ವರು ಸ್ಪರ್ಧಿಳು ಬಿಬಿಕೆ9 ಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಟಿವಿ ಸೀಸನ್ ನಲ್ಲಿ ಇವರಿಂದ ಮನರಂಜನೆ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.