Neer Dose Karnataka
Take a fresh look at your lifestyle.

ತನ್ನನ್ನು ತಾನು ನೇರವಾಗಿ ಡಿ ಬಾಸ್ ಜೊತೆ ಹೋಲಿಸಿಕೊಂಡ ಸೋನು ಶ್ರೀನಿವಾಸ್ ಗೌಡ: ಹೇಳಿದ್ದೇನು ಗೊತ್ತೇ??

ಡಿಬಾಸ್ ದರ್ಶನ್ ಅವರ ಬಗ್ಗೆ ಮತ್ತು ಅವರಿಗೆ ಇರುವ ಫ್ಯಾನ್ ಬೇಸ್ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ, ದರ್ಶನ್ ಅವರ ಸಿನಿಮಾ ವಿಚಾರಗಳು ಮಾತ್ರವಲ್ಲ, ಅವರಿಗೆ ಇರುವ ಒಳ್ಳೆಯತನ ಸಹಾಯ ಮನೋಭಾವ ಇವುಗಳಿಂದ ದರ್ಶನ್ ಅವರಿಗೆ ಕರ್ನಾಟಕದಲ್ಲಿ ಕೋಟ್ಯಾಂತರ ಅಭಿಮಾನಿ ಬಳಗ ಇದೆ. ದರ್ಶನ್ ಅವರು ಹೊರಗಡೆ ಕಾಣಿಸಿಕೊಂಡರೆ ಅಭಿಮಾನಿಗಳು ಹುಚ್ಚೆದ್ದು ಸಂಭ್ರಮ ಪಡುತ್ತಾರೆ ಅವರೊಡನೆ ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಕಾಯುತ್ತಾರೆ. ಇಂತಹ ಡಿಬಾಸ್ ಅವರಿಗೆ ತಮ್ಮನ್ನು ತಾವು ಹೋಲಿಕೆ ಮಾಡಿಕೊಂಡಿದ್ದಾರೆ ಬಿಗ್ ಬಾಸ್ ಸೋನು ಶ್ರೀನಿವಾಸ್ ಗೌಡ.

ಸೋಷಿಯಲ್ ಮೀಡಿಯಾದಲ್ಲಿ ಕೆಲವು ವಿಚಾರಗಳಿಂದ ಸೋನು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಬಿಗ್ ಬಾಸ್ ಮನೆಗೆ ಹೋದ ಬಳಿಕ ತಾನು ಯಾರಿಗು ಕೇರ್ ಮಾಡುವುದಿಲ್ಲ, ತಾನು ಇರುವುದೇ ಹೀಗೆ ಎಂದು ತೋರಿಸಿಕೊಂಡಿದ್ದ ಸೋನು, ಫಿನಾಲೆಯಲ್ಲಿ ಬಿಗ್ ಬಾಸ್ ಮನೆಯಿಂದ ಟಾಪ್ 5ನೇ ಸ್ಪರ್ಧಿಯಾಗಿ ಹೊರಬಂದರು, ಬಿಗ್ ಬಾಸ್ ಮುಗಿದ ಬಳಿಕ ಸಂದರ್ಶನಗಳಲ್ಲಿ ಪಾಲ್ಗೊಳ್ಳುತ್ತಿರುವ ಸೋನು ಅವರಿಗೆ ಜನರು ನೇರವಾದ ಪ್ರಶ್ನೆ ಕೇಳುವ ಮೂಲಕ, ಇನ್ನಷ್ಟು ಟ್ರೋಲ್ ಮಾಡುತ್ತಿದ್ದಾರೆ. ಇಂತಹ ಕೆಲಸ ಮಾಡಿ ನೀನು ಬಿಗ್ ಬಾಸ್ ಗೆ ಹೋಗಿದ್ದು ಎಂದಿದ್ದಾರೆ, ಆಗಿದ್ದು ಆಗಿದೆ ಇನ್ನು ಮುಂದೆ ಆದರೂ ಒಳ್ಳೆಯ ಬುದ್ಧಿ ಕಲಿತುಕೊ ಎಂದು ಕೂಡ ಕೆಲವರು ಹೇಳಿದ್ದಾರೆ.

ಇತ್ತ ಸೋನು ಮಾತ್ರ, ತಾನು ಯಾರಿಗು ತಲೆಕೆಡಿಸಿಕೊಳ್ಳುವುದಿಲ್ಲ. ಇರುವುದೇ ಹೀಗೆ ಎನ್ನುತ್ತಿದ್ದು ಇತ್ತೀಚಿನ ಸಂದರ್ಶನದಲ್ಲಿ ತಾನು ದರ್ಶನ್ ಅವರ ದೊಡ್ಡ ಅಭಿಮಾನಿ, ಅವರೊಡನೆ ಒಂದು ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಬೇಕು ಎನ್ನುವುದು ನನ್ಮ ದೊಡ್ಡ ಆಸೆ ಎಂದಿದ್ದಾರೆ, ಜೊತೆಗೆ ಡಿಬಾಸ್ ಗೆ ತಮ್ಮನ್ನು ಹೋಲಿಕೆ ಮಾಡಿಕೊಂಡಿದ್ದಾರೆ, ಡಿಬಾಸ್ ದರ್ಶನ್ ಅವರು ಯಾರ ಮಾತಿಗು ಕೇರ್ ಮಾಡಲ್ಲ ತಮಗೆ ಇಷ್ಟವಾದ ಹಾಗೆ ಇರುತ್ತಾರೆ, ನೇರವಾಗಿ ಮಾತನಾಡುತ್ತಾರೆ, ನಾನು ಡಿಬಾಸ್ ಅವರ ಥರಾನೇ ನನಗೆ ಇಷ್ಟಬಂದ ಹಾಗೆ ಇರ್ತೀನಿ, ಯಾರ ಬಗ್ಗೆನು ಯೋಚನೆ ಮಾಡಲ್ಲ ಎಂದಿದ್ದಾರೆ. ಇದೀಗ ಈ ವಿಚಾರಕ್ಕೆ ದರ್ಶನ್ ಅವರ ಫ್ಯಾನ್ ಗಳು ಸಿಟ್ಟಾಗಿ ಸೋನು ಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಡಿಬಾಸ್ ಮುಂದೆ ನೀನು ಯಾವ ಲೆಕ್ಕ, ಸಾಧ್ಯ ಆದ್ರೆ ನಿನ್ನ ಮೇಲಿರೋ ನಗಟಿವ್ ಟಾಕ್ ನಿಲ್ಲುವ ಹಾಗೆ ಮಾಡಿ ಎಂದರೆ, ಇನ್ನು ಕೆಲವರು ಪಾಸಿಟಿವ್ ಆಗಿ ಕೂಡಾ ಹೇಳುತ್ತಿದ್ದಾರೆ.

Comments are closed.