Neer Dose Karnataka
Take a fresh look at your lifestyle.

ಕೊನೆಗೂ ಸಿಕ್ತು ಸಮಂತಾ ಹೊರದೇಶಕ್ಕೆ ಹೋದ ಕಾರಣ. ಆ ಚಿಕಿತ್ಸೆ ಪಡೆಯಲು ಅಮೆರಿಕಾಗೆ ಹೋಗಿದ್ದಾರೆ, ಏನಾಗಿದೆ ಗೊತ್ತೇ??

ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟಿ ಸಮಂತಾ ಅವರಿಗೆ ಈಗ ದೇಶಾದ್ಯಂತ ಮನ್ನಣೆ ಇದೆ. ಕೆಲ ದಿನಗಳ ಹಿಂದೆ ಸಮಂತಾ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಈ ಕಾರಣದಿಂದ ಅವರು ಸಾರ್ವಜನಿಕವಾಗಿ ಎಲ್ಲಿಯು ಕಾಣಿಸಿಕೊಳ್ಳುತ್ತಿಲ್ಲ ಎಂದು ಮಾಹಿತಿ ಸಿಕ್ಕಿತ್ತು. ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಸಮಂತಾ ಅವರು ತಮ್ಮ ಆರೋಗ್ಯವನ್ನು ಸರಿಮಾಡಿಕೊಳ್ಳಲು ವಿದೇಶಕ್ಕೆ ಹೋಗುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ, ಆದರೆ ಇವರು ಯಾವ ದೇಶಕ್ಕೆ ಹೋಗುತ್ತಾರೆ ಎಂದು ಮಾಹಿತಿ ಸಿಕ್ಕಿಲ್ಲ. ಸಮಂತಾ ಅವರ ಟೀಮ್ ಈಗ ಆಕೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸಮಂತಾ ಅವರು ಬಹಳ ಪಾಪ್ಯುಲರ್ ಆಗಿರುವ ಕಾರಣ, ಹೊರಗೆ ಬಂದರೆ ಅವರ ಕೆರಿಯರ್ ಮಾತ್ರವಲ್ಲದೆ, ಪರ್ಸನಲ್ ಲೈಫ್ ಮತ್ತು ವಿಚ್ಛೇದನದ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಸಮಂತಾ ಅವರು ಇಷ್ಟು ದಿನಗಳಾದರು ಹೊರಗಡೆ ಎಲ್ಲು ಕಾಣಿಸಿಕೊಳ್ಳದೆ ಇರುವ ಕಾರಣ, ಜನರು ಆಕೆಯ ಆರೋಗ್ಯಕ್ಕೆ ಏನೋ ಸಮಸ್ಯೆ ಆಗಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅದರಲ್ಲು ಸಮಂತಾ ಅವರಿಗೆ ಸ್ಕಿನ್ ಮತ್ತು ಮುಖದ ಭಾಗಗಳಲ್ಲಿ ಅಲರ್ಜಿಕ್ ಸಮಸ್ಯೆಗಳು ಉಂಟಾಗಿರುವ ಕಾರಣ ಅವರು ಹೊರಗಡೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ಮಾತುಗಳು ಈಗ ಕೇಳಿಬರುತ್ತಿದೆ. ಮತ್ತೊಂದು ವರದಿಯ ಪ್ರಕಾರ, ಸಮಂತಾ ಅವರು ಸಾರ್ವಜನಿಕ ಜೀವನದಿಂದ ದೂರವಿರಬೇಕು ಎಂದು ಸಲಹೆ ನೀಡಲಾಗಿದೆಯಂತೆ.

ಮೀಡಿಯಗಳು ರಿಪೋರ್ಟ್ ಮಾಡಿರುವ ಹಾಗೆ ಸಮಂತಾ ಅವರು ಸ್ಕಿನ್ ಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯನ್ನು Polymorph Light Infection ಎಂದು ಕರೆಯಲಾಗುತ್ತದೆ. ಸೂರ್ಯನ ಕಿರಣ ನೇರವಾಗಿ ತ್ವಚೆಯ ಮೇಲೆ ಬೀಳುವುದರಿಂದ ಸಮಸ್ಯೆ ಉಂಟಾಗುತ್ತದೆ. ಈ ಕಾರಣದಿಂದ ಸಮಂತಾ ಅವರು ಯಾವುದೇ ಪಬ್ಲಿಕ್ ಇವೆಂಟ್ ಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಈಗ ಸಿಕ್ಕಿರುವ ಮಾಹಿತಿ ಪ್ರಕಾರ, ಖುಷಿ ಸಿನಿಮಾದ ಚಿತ್ರೀಕರಣದ ಶೆಡ್ಯೂಲ್ ಅನ್ನು ಸಹ ಮುಂದೂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಶೀಘ್ರದಲ್ಲೇ ಸಮಂತಾ ಅವರು ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆಯುತ್ತಾರೆ ಎಂದು ಸಹ ಮಾಹಿತಿ ಸಿಕ್ಕಿದೆ. ಸಮಂತಾ ಅವರ ಬಾಲಿವುಡ್ ಎಂಟ್ರಿಗಾಗಿ ಸಹ ಅಭಿಮಾನಿಗಳು ಕಾಯುತ್ತಿದ್ದಾರೆ.

Comments are closed.