Neer Dose Karnataka
Take a fresh look at your lifestyle.

ಇನ್ನು ನಿಮ್ಮ ಅದೃಷ್ಟ ಸೂರ್ಯನಷ್ಟು ಪ್ರಕಾಶಮಾನವಾಗಿ ಹೊಳೆಯುತ್ತದೆ, ಮೂವತ್ತು ದಿನಗಳಲ್ಲಿ ನೀವೇ ಕಿಂಗ್. ಯಾವ್ಯಾವ ರಾಶಿಗಳಿಗೆ ಅದೃಷ್ಟ ಗೊತ್ತೇ??

1,321

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಗ್ರಹವು ಪ್ರತಿತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತದೆ. ಸೂರ್ಯದೇವರು ಒಬ್ಬ ವ್ಯಕ್ತಿಯ ಶಕ್ತಿ, ಯಶಸ್ಸು, ಆತ್ಮವಿಶ್ವಾಸ ಮತ್ತು ಮಾರ್ಗದರ್ಶನದ ಪ್ರತೀಕ ಆಗಿದ್ದಾನೆ. ಆಕ್ಟೊಬರ್ 17ರಂದು ಸೂರ್ಯನು ತುಲಾ ರಾಶಿಗೆ ಪ್ರವೇಶ ಮಾಡಲಿದ್ದು, ತುಲಾ ರಾಶಿಯಲ್ಲಿ ಸೂರ್ಯಸಂಕ್ರಮಣ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ, ಶುಕ್ರನು ಸಂತೋಷ ಮತ್ತು ಪ್ರೀತಿಯ ಗ್ರಹ ಆಗಿದ್ದು, ಶುಕ್ರ ಅಧಿಪತಿ ಆಗಿರುವ ರಾಶಿಗೆ ಸೂರ್ಯನ ಪ್ರವೇಶ ಆಗುತ್ತಿರುವುದರಿಂದ 5 ರಾಶಿಗಳಿಗೆ ಶುಭಫಲ ಸಿಗುತ್ತಿದೆ. ಆ ಐದು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ತುಲಾ ರಾಶಿಗೆ ಸೂರ್ಯನ ಆಗಮನದಿಂದ ವೃಷಭ ರಾಶಿಯವರಿಗೆ ಹೆಚ್ಚಿನ ಲಾಭವಾಗುತ್ತದೆ, ಅದೃಷ್ಟ ನಿಮಗೆ ಸಾಥ್ ಕೊಡುತ್ತದೆ. ಶುರು ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತೀರಿ. ಕೆಲಸ ಹುಡುಕುತ್ತಿರುವವರಿಗೆ ಹೊಸ ಕೆಲಸ ಸಿಗುತ್ತದೆ, ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ.

ಸಿಂಹ ರಾಶಿ :- ಸೂರ್ಯದೇವನ ಸ್ಥಾನ ಬದಲಾವಣೆ, ಸಿಂಹ ರಾಶಿಯವರ ಉದ್ಯೋಗದ ಮೇಲೆ ಹೆಚ್ಚಿನ ಪರಿಣಾಮ ಉಂಟು ಮಾಡುತ್ತದೆ. ನಿಂತಿರುವ ಕೆಲಸಗಳು ಮತ್ತೆ ಹೆಚ್ಚಿನ ವೇಗದಲ್ಲಿ ಶುರುವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಕೆಲಸದಿಂದ ಒತ್ತಡ ಉಂಟಾದರು ಸಹ, ಅದರಿಂದ ಸಿಗುವ ಯಶಸ್ಸು ಸಂತೋಷ ತಂದುಕೊಡುತ್ತದೆ.

ಧನು ರಾಶಿ :- ಸೂರ್ಯದೇವ ತುಲಾ ರಾಶಿಗೆ ಪ್ರವೇಶ ಮಾಡುತ್ತಿರುವ ಕಾರಣ ಅನುಕೂಲಕರವಾದ ಫಲಿತಾಂಶ ತರುತ್ತದೆ. ಕೆಲಸಕ್ಕೆ ಸಂಬಂಧಿಸಿದ ಹಾಗೆ ಒಳ್ಳೆಯ ವಿಚಾರ ತಿಳಿದುಬರುತ್ತದೆ. ಬಡ್ತಿ ಅಥವಾ ಹೊಸ ಜವಾಬ್ದಾರಿ ಪಡೆದುಕೊಳ್ಳುತ್ತೀರಿ. ದಿಢೀರ್ ಧನಲಾಭ ಆಗಬಹುದು. ನಿಮ್ಮ ಸಂಬಳ ಹೆಚ್ಚಾಗಬಹುದು. ಬ್ಯುಸಿನೆಸ್ ನಲ್ಲಿ ಲಾಭ ಗಳಿಸುತ್ತೀರಿ.

ಮಕರ ರಾಶಿ :- ಸೂರ್ಯದೇವ ತುಲಾ ರಾಶಿಗೆ ಪ್ರವೇಶ ಮಾಡುತ್ತಿರುವುದರಿಂದ ಮಕರ ರಾಶಿಯವರಿಗೆ ಲಾಭವಾಗುತ್ತದೆ. ವೃತ್ತಿಜೀವನದಲ್ಲಿ ನೀವು ಮಾಡುವ ಕೆಲಸಕ್ಕೆ ಮೆಚ್ಚುಗೆ ಸಿಗುತ್ತದೆ. ಧಾರ್ಮಿಕ ಪ್ರವಾಸಕ್ಕೆ ಹೋಗುವ ಅವಕಾಶ ಸಿಗಬಹುದು. ಆರ್ಥಿಕವಾಗಿ ಲಾಭವಾಗುತ್ತದೆ ಮತ್ತು ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.

ಮೀನ ರಾಶಿ :- ಸೂರ್ಯದೇವನ ಸ್ಥಾನ ಬದಲಾವಣೆ ಮೀನ ರಾಶಿಯವರಿಗೆ ಶುಭ ಸಮಯ ತರುತ್ತದೆ, ಈ ಜನರಿಗೆ ಅದೃಷ್ಟದ ಬೆಂಬಲ ಸಿಗುತ್ತದೆ. ಇವರು ಶುರು ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತಾರೆ.

Leave A Reply

Your email address will not be published.