Neer Dose Karnataka
Take a fresh look at your lifestyle.

ಖ್ಯಾತ ನಟಿ ದಿವ್ಯ ರವರ ಪ್ರಕಾರಕ್ಕೆ ಮತ್ತೊಂದು ಟ್ವಿಸ್ಟ್: ಷಾಕಿಂಗ್ ವಿಡಿಯೋ ಬಿಡುಗಡೆ ಮಾಡಿದ ಗಂಡ ಅಮ್ಜದ್ ಖಾನ್. ವಿಡಿಯೋ ದಲ್ಲಿ ಏನಿದೆ ಗೊತ್ತೇ??

ಕರ್ನಾಟಕ ಮೂಲದ ನಟಿ, ಕನ್ನಡದಲ್ಲಿ ಆಕಾಶ ದೀಪ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ದಿವ್ಯ ಶ್ರೀಧರ್ ಅವರ ವೈಯಕ್ತಿಕ ಜೀವನ ಈಗ ಹೀನಾಯ ಸ್ಥಿತಿಗೆ ತಲುಪಿದೆ. ದಿವ್ಯ ಅವರು ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ಆಕಾಶದೀಪ ಧಾರವಾಹಿಯಲ್ಲಿ ನಟಿಸಿದ್ದರು, ಈ ಧಾರವಾಹಿ ಯಶಸ್ಸಿನಿಂದ ತಮಿಳು ಧಾರವಾಹಿಯಲ್ಲಿ ನಟಿಸುವ ಅವಕಾಶ ಪಡೆದರು. ಬಳಿಕ ದಿವ್ಯ ಅವರು ಹಲವು ಧಾರವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ನಟಿಸುತ್ತಿದ್ದ ಸಮಯದಲ್ಲಿ ತಮ್ಮ ಸಹ ನಟ ಅಮ್ಜದ್ ಖಾನ್ ಅವರ ಪರಿಚಯವಾಗಿ, ಪ್ರೀತಿಯಾಗಿ ಇಬ್ಬರು 5 ವರ್ಷಗಳ ಕಾಲ ಲಿವ್ ಇನ್ ರಿಲೇಶನ್ಷಿಪ್ ನಲ್ಲಿದ್ದರು.

5 ವರ್ಷಗಳ ಕಾಲ ಲಿವಿನ್ ರಿಲೇಶನ್ಷಿಪ್ ನಲ್ಲಿದ್ದ ಬಳಿಕ, ಈ ವರ್ಷದ ಶುರುವಿನಲ್ಲಿ ದಿವ್ಯ ಹಾಗು ಅಮ್ಜದ್ ಖಾನ್ ಮದುವೆ ಮಾಡಿಕೊಂಡರು. ನಂತರ ದಿವ್ಯ ಅವರು ಗರ್ಭಿಣಿ ಆಗಿರುವ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡಿದ್ದರು. ಆದರೆ ಈಗ ಒಂದೆರಡು ದಿನಗಳ ಹಿಂದೆ ದಿವ್ಯ ಅವರು ತಮ್ಮ ಪತಿಯಿಂದ ತಮ್ಮ ಮೇಲೆ ಹಲ್ಲೆ ಆಗಿದೆ ಎಂದು ಹೇಳಿ, ತಾನು ಈಗ ಆಸ್ಪತ್ರೆಯಲ್ಲಿ ಇರುವುದಾಗಿಯೂ ತನಗೆ ಗರ್ಭಪಾತ ಆಗಬಹುದು ಎಂದು ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದರು. ಈ ವಿಚಾರಕ್ಕೆ ಈಗ ಕರ್ನಾಟಕ ಮಹಿಳಾ ಆಯೋಗ ಎಂಟ್ರಿ ಕೊಟ್ಟಿದೆ, ಮಹಿಳಾ ಆಯೋಗದ ಅಧಿಕಾರಿಗಳು ದಿವ್ಯ ಅವರು ತಮಿಳುನಾಡಿನಲ್ಲಿ ಇರುವ ಕಾರಣ ದಿವ್ಯ ಅವರಿಗೆ ರಕ್ಷಣೆ ಕೊಡಬೇಕು ಎಂದು ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ನಿನ್ನೆ ದಿವ್ಯ ಅವರಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ನೇರವಾಗಿ ಗಂಡ ಅಮ್ಜದ್ ಖಾನ್ ಮನೆಗೆ ಹೋಗಿರುವ ದಿವ್ಯ, ನನಗೆ ಯಾಕೆ ಮೋಸ ಮಾಡಿದೆ ಎಂದು ಗಂಡನ ಮನೆಯಲ್ಲಿ ರಂಪ ಮಾಡಿದ್ದಾರೆ. ಇದನ್ನು ಅವರ ಗಂಡ ಅಮ್ಜದ್ ಖಾನ್ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಇಬ್ಬರು ಸಹ, ನೀನು ಮೋಸ ಮಾಡಿದೆ ಎಂದು ಜಗಳ ಆಡಿದ್ದು, ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇವರಿಬ್ಬರ ಪರ ವಿರೋಧ ಚರ್ಚೆಗಳು ಸಹ ಜೋರಾಗಿಯೇ ನಡೆಯುತ್ತಿದೆ. ಈ ಪ್ರಕರಣಕ್ಕೆ ಯಾವ ರೀತಿಯ ಅಂತ್ಯ ಸಿಗುತ್ತದೆ ಎಂದು ಕಾದು ನೋಡಬೇಕಿದೆ.

Comments are closed.