Neer Dose Karnataka
Take a fresh look at your lifestyle.

ಕಾಂತರಾದ ಲೀಲಾ ಸಾಮಾನ್ಯ ಹುಡುಗಿಯಲ್ಲಿ, ಇವರ ಬ್ಯಾಕ್ ಗ್ರೌಂಡ್ ಕೇಳಿದರೇ ಶಾಕ್ ಆಗ್ತೀರಿ. ಇವರ ತಂದೆ ಅದೆಷ್ಟು ಪವರ್ ಫುಲ್ ಗೊತ್ತೇ??

62,655

ಕಾಂತಾರ ಸಿನಿಮಾದಲ್ಲಿ ನಾಯಕಿ ಲೀಲಾ ಪಾತ್ರದ ಮೂಲಕ ಮಿಂಚಿರುವವರು ನಟಿ ಸಪ್ತಮಿ ಗೌಡ. ಇವರು ತಮಗೆ ಕೊಟ್ಟ ಪಾತ್ರವನ್ನು ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ, ಲೀಲಾ ಪಾತ್ರವನ್ನು ನೋಡಿದ ಹುಡುಗರು ತಮಗೂ ಅದೇ ರೀತಿ ಗರ್ಲ್ ಫ್ರೆಂಡ್ ಬೇಕು ಎಂದು ಬಯಸುತ್ತಿದ್ದಾರೆ. ಪಕ್ಕಾ ಹಳ್ಳಿ ಹುಡುಗಿ ಆಗಿ, ಫಾರೆಸ್ಟ್ ಗಾರ್ಡ್ ಆಗಿ ಸುಂದರವಾಗಿ, ರಿಷಬ್ ಶೆಟ್ಟಿ ಅವರಿಗೆ ಸಮವಾಗಿ ಅಭಿನಯಿಸಿದ್ದಾರೆ ಸಪ್ತಮಿ ಗೌಡ. ಸಪ್ತಮಿ ಎನ್ನುವುದಕ್ಕಿಂತ ಹೆಚ್ಚಾಗಿ ಲೀಲಾ ಎಂದೇ ಜನರು ಇವರನ್ನು ಗುರುತಿಸುತ್ತಿರುವ ಇವರ ಹಿನ್ನಲೆ ಏನು ? ಇವರ ತಂದೆ ಯಾರು ಗೊತ್ತಾ? ಇಂದು ತಿಳಿಸುತ್ತೇವೆ ನೋಡಿ..

ಸಪ್ತಮಿ ಗೌಡ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 2020ರಲ್ಲಿ, ಧನಂಜಯ್ ಅವರು ಅಭಿನಯಿಸಿದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ್ದರು, ಆ ಸಿನಿಮಾದಲ್ಲಿ ಸಪ್ತಮಿ ಗೌಡ ಅವರದ್ದು ಬಹಳ ರಗಡ್ ಆದ ಮಾಸ್ ಆದ ಪಾತ್ರ ಆಗಿತ್ತು. ಹುಡುಗರಿಗೆ ಬಹಳ ಇಷ್ಟವಾಗಿತ್ತು ಸಪ್ತಮಿ ಅವರ ಪಾತ್ರ, ಮೊದಲ ಸಿನಿಮಾದಲ್ಲೇ ಉತ್ತಮವಾಗಿ ಅಭಿನಯಿಸಿದ್ದರು. ಪಾಪ್ ಕಾರ್ನ್ ಮಂಕಿ ಟೈಗರ್ ಬಳಿಕ ಸಪ್ತಮಿ ಅವರಿಗೆ ಹಲವು ಸಿನಿಮಾ ಆಫರ್ ಗಳು ಬಂದರು ಸಹ ಅವುಗಳನ್ನು ಒಪ್ಪಿಕೊಂಡಿರಲಿಲ್ಲ, ಪಾತ್ರದ ಆಯ್ಕೆಯಲ್ಲಿ ಬಹಳ ಚೂಸಿ ಆಗಿದ್ದಾರೆ ಸಪ್ತಮಿ. ತಮ್ಮದೇ ಆದ ಡಿಸಿಪ್ಲಿನ್ ಹೊಂದಿದ್ದಾರೆ. ಎಕೆಂದರೆ ಸಪ್ತಮಿ ಅವರ ತಂದೆ ಅಂತಹ ವ್ಯಕ್ತಿ. ಕರ್ನಾಟಕದಲ್ಲಿ ಖಡಕ್ ಪೊಲೀಸ್ ಆಫೀಸರ್ ಎಂದೇ ಹೆಸರು ಮಾಡಿರುವ ಎಸ್.ಕೆ.ಉಮೇಶ್ ಅವರ ಮಗಳು ಸಪ್ತಮಿ ಗೌಡ.

ಸಪ್ತಮಿ ಅವರು ಕಾಂತಾರ ಸಿನಿಮಾಗೆ ಆಯ್ಕೆಯಾಗಿದ್ದರ ಹಿಂದೆ ಒಂದು ಕಥೆ ಇದೆ. ಸಪ್ತಮಿ ಅವರ ಸೀರೆಯ ಫೋಟೋ ಒಂದನ್ನು ಇನ್ಸ್ಟಾಗ್ರಾಮ್ ನಲ್ಲಿ ನೋಡಿದ ರಿಷಬ್ ಅವರು ಲೀಲಾ ಪಾತ್ರಕ್ಕೆ ಇವರೇ ಸೂಕ್ತ ಎಂದು ಕರೆಸಿ ಆಡಿಷನ್ ಮಾಡಿಸಿದರಂತೆ, ಆಡಿಷನ್ ನಲ್ಲಿ ಚೆನ್ನಾಗಿ ಅಭಿನಯಿಸಿದ ಕಾರಣ ಕಾಂತಾರ ಸಿನಿಮಾಗೆ ಆಯ್ಕೆಯಾದರು ಸಪ್ತಮಿ. ಕಾಂತಾರ ಸಿನಿಮಾ ಯಶಸ್ಸಿನಲ್ಲಿರುವ ಸಪ್ತಮಿ ಅವರು ಅದಕ್ಕಿಂತ ಮೊದಲು ಬೇರೆ ಫೀಲ್ಡ್ ನಲ್ಲಿ ದೊಡ್ಡ ಸಾಧನೆಗಳನ್ನು ಮಾಡಿದ್ದಾರೆ, ಸಪ್ತಮಿ ಅವರು ನ್ಯಾಷನಲ್ ಲೆವೆಲ್ ಸ್ವಿಮ್ಮರ್ ಆಗಿದ್ದಾರೆ. ಚಿಕ್ಕ ವಯಸ್ಸಿನಿಂದಲು ಸ್ವಿಮಿಂಗ್ ಕಲಿಯುತ್ತಿರುವ ಸಪ್ತಮಿ ಅವರು, ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Leave A Reply

Your email address will not be published.