Neer Dose Karnataka
Take a fresh look at your lifestyle.

ಬಿಗ್ ಬಾಸ್ ನಲ್ಲಿ ಸಾನ್ಯ ಹಾಗೂ ರೂಪೇಶ್ ಶೆಟ್ಟಿ ಲವ್ ಗೇಮ್ ಬಗ್ಗೆ ರೋಚಕ ಸತ್ಯವೊಂದು ಬಿಚ್ಚಿಟ್ಟ ನವಾಜ್. ಹೇಳಿದ್ದೇನು ಗೊತ್ತೇ??

1,149

ಬಿಗ್ ಬಾಸ್ ಮನೆ ಸದಸ್ಯರು ಈಗ ಎರಡು ವಾರಗಳ ಪಯಣ ಮುಗಿಸಿ ಮೂರನೇ ವಾರಕ್ಕೆ ಕಾಲಿಟ್ಟಿದ್ದಾರೆ. ಇಂದು ಮೂರನೆಯ ಎಲಿಮಿನೇಶನ್ ನಡೆಯಲಿದ್ದು, ಮನೆಯಿಂದ ಹೊರಬರುವ ಸದಸ್ಯರು ಯಾರು ಎಂದು ಕಿರುತೆರೆ ವೀಕ್ಷಕರಿಗೆ ಕುತೂಹಲ ಇದೆ. ಕಳೆದ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದವರು ಸಿನಿಮಾ ರಿವ್ಯೂಗಳ ಮೂಲಕ ಫೇಮಸ್ ಆಗಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿರುವ ನವಾಜ್ ಅವರು. ಮನೆಯಲ್ಲಿದ್ದ ಎರಡು ವಾರಗಳ ಕಾಲ ನವಾಜ್ ಹೇಳಿಕೊಳ್ಳುವ ಹಾಗೆ ಏನನ್ನು ಮಾಡಲಿಲ್ಲ..

ಮೊದಲ ವಾರವೇ ಬೆದರಿಕೆಯ ರೀತಿಯಲ್ಲಿ ಮಾತನಾಡುವ ಮೂಲಕ ಸುದೀಪ್ ಅವರಿಂದ ಬುದ್ಧಿಮಾತುಗಳನ್ನು ಖಾರವಾಗಿ ಪಡೆದಿದ್ದರು. ಮೊದಲ ವಾರ ಅರುಣ್ ಸಾಗರ್ ಅವರ ಜೋಡಿಯಾಗಿದ್ದ ನವಾಜ್ ಟಾಸ್ಕ್ ನಲ್ಲಿ ಅಷ್ಟೇನು ಚೆನ್ನಾಗಿ ಪರ್ಫಾರ್ಮ್ ಮಾಡಲಿಲ್ಲ. ಸುದೀಪ್ ಅವರಿಂದ ಬುದ್ಧಿವಾದ ಕೇಳಿದ ಬಳಿಕ ನವಾಜ್ ಅವರು ತಮ್ಮನ್ನು ತಾವು ತಿದ್ದುಕೊಂಡು ಸೈಲೆಂಟ್ ಆಗಿದ್ದು, ಎಲ್ಲರ ಜೊತೆಗೆ ಮಿಂಗಲ್ ಆಗುವ ಪ್ರಯತ್ನ ಮಾಡುತ್ತಿದ್ದರು. ಆದರೆ ಎರಡನೇ ವಾರ ದೀಪಿಕಾ ದಾಸ್ ಅವರ ತಂಡದಲ್ಲಿದ್ದ ನವಾಜ್ ಅವರಿಗೆ ಟಾಸ್ಕ್ ಗಳಲ್ಲಿ ಆಡಲು ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಜೊತೆಗೆ ಮನೆಯ ಕೆಲಸಗಳಲ್ಲೂ ಇವರು ಹೆಚ್ಚಾಗಿ ಭಾಗವಹಿಸುತ್ತಿರಲಿಲ್ಲ.

ಈ ಎಲ್ಲಾ ಕಾರಣಗಳಿಂದ ಎರಡನೇ ವಾರ ಮನೆಯಿಂದ ಹೊರಬಂದ ನವಾಜ್ ಅವರು,ಈಗ ಹಲವು ಯೂಟ್ಯೂಬ್ ಚಾನಲ್ ಗಳಿಗೆ ಟಿವಿ ಚಾನೆಲ್ ಗಳಿಗೆ ಇಂಟರ್ವ್ಯೂಗಳನ್ನು ಕೊಡುತ್ತಿದ್ದಾರೆ. ಈ ಮೂಲಕ ನವಾಜ್ ಅವರು, ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿದ್ದ ಹಲವು ವಿಚಾರಗಳನ್ನು ತಿಳಿಸಿದ್ದಾರೆ. ಹಾಗೆ ಒಂದು ಸಂದರ್ಶನದಲ್ಲಿ ನವಾಜ್ ಅವರಿಗೆ ಸಾನ್ಯಾ ಮತ್ತು ರೂಪೇಶ್ ಫ್ರೆಂಡ್ಶಿಪ್ ಬಗ್ಗೆ ಕೇಳಿದ್ದು, ಅದಕ್ಕೆ ಉತ್ತರ ಕೊಟ್ಟಿರುವ ನವಾಜ್, ನಾನು ಅವರಿಬ್ಬರನ್ನ ಡೈರೆಕ್ಟ್ ಆಗಿ ಕೇಳಿದೆ, ನಿಮ್ಮಿಬ್ಬರದ್ದು ಫ್ರೆಂಡ್ಶಿಪ್ ಹಾ ಅಥವಾ ಲವ್ ಮಾಡ್ತಿದ್ದೀರಾ ಅಂತ. ಅದಕ್ಕೆ ಇಬ್ಬರು, ಬೇರೆಯವರು ಹೇಗೆ ಅಂದುಕೊಳ್ತಾ ಇದ್ದಾರೆ ಗೊತ್ತಿಲ್ಲ.. ನಮ್ಮಿಬ್ಬರದ್ದು ಪ್ಯೂರ್ ಫ್ರೆಂಡ್ಶಿಪ್ ಅಂತ ಹೇಳಿದ್ರು. ಆದರೆ ಅವರಿಬ್ಬರ ಮನಸ್ಸಲ್ಲಿ ಏನಿದೆ ಅಂತ ನನಗೆ ಗೊತ್ತಿಲ್ಲ..ಎಂದಿದ್ದಾರೆ ನವಾಜ್.

Leave A Reply

Your email address will not be published.