Neer Dose Karnataka
Take a fresh look at your lifestyle.

ರಮ್ಯಾ ಹೊರ ಹೋದ ತಕ್ಷಣವೇ ರಮ್ಯಾ ಸ್ಥಾನಕ್ಕೆ ಬೇರೆ ನಟಿಯರನ್ನು ಕರೆತಂದ ರಾಜ್ ಬಿ ಶೆಟ್ಟಿ ತಂಡ. ಇವರು ಹೋದರೇನೋ, ಮತ್ತೊಬ್ಬರು ಬಂದರು.

157

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಈಗ ನಾಯಕಿ ಮಾತ್ರವಲ್ಲ, ಅವರು ಪ್ರೊಡ್ಯುಸರ್ ಸಹ ಹೌದು, ಆಪಲ್ ಬಾಕ್ಸ್ ಹೆಸರಿನಲ್ಲಿ ಹೊಸ ನಿರ್ಮಾಣ ಸಂಸ್ಥೆ ಶುರು ಮಾಡಿರುವ ರಮ್ಯಾ ಅವರು ಈಗಾಗಲೇ ತಮ್ಮ ಪ್ರೊಡಕ್ಷನ್ ನ ಹೊಸ ಸಿನಿಮಾವನ್ನು ಸಹ ಅನೌನ್ಸ್ ಮಾಡಿದ್ದಾರೆ, ಟೈಟಲ್ ಇಂದಲೇ ಈ ಸಿನಿಮಾ ಸದ್ದು ಮಾಡುತ್ತಿದೆ. ಸಿನಿಮಾದ ಹೆಸರು ಸ್ವಾತಿ ಮುತ್ತಿನ ಮಳೆಹನಿಯೇ.. ಕನ್ನಡ ಎವರ್ ಗ್ರೀನ್ ಹಾಡಿನ ಮೊದಲ ಸಾಲು ಇದು.

ದಸರಾ ಹಬ್ಬದ ವಿಶೇಷದ ದಿನ ಈ ಪ್ರಾಜೆಕ್ಟ್ ಅನೌನ್ಸ್ ಮಾಡಿದರು ರಮ್ಯಾ, ರಾಜ್ ಬಿ ಶೆಟ್ಟಿ ಅವರು ಸಿನಿಮಾದ ಕಥೆ ಮತ್ತು ನಿರ್ದೇಶನದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಲೈಟರ್ ಬುದ್ಧ ಸಂಸ್ಥೆಯ ಜೊತೆ ಸೇರಿ ರಮ್ಯಾ ಅವರು ಈ ಸಿನಿಮಾ ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲರೆ, ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾ ಮೂಲಕ, ರಮ್ಯಾ ಅವರು ಕಂಬ್ಯಾಕ್ ಮಾಡುವ ಸಿಹಿ ಸುದ್ದಿಯನ್ನು ಸಹ ನೀಡಿದ್ದರು.

ಆದರೆ ಈಗ, ರಮ್ಯಾ ಅವರು ನಟನೆಯಿಂದ ಹಿಂದೆ ಸರಿದಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಸ್ವಲ್ಪ ಬೇಸರವನ್ನೇ ತರಿಸಿದೆ ಏಕೆಂದರೆ ರಮ್ಯಾ ಅವರು ಈ ಸಿನಿಮಾ ಮೂಲಕ ಕಂಬ್ಯಾಕ್ ಮಾಡುತ್ತಾರೆ ಎಂದು ಅಭಿಮಾನಿಗಳು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ರಮ್ಯಾ ಅವರು ಈ ಪ್ರಾಜೆಕ್ಟ್ ಇಂದ ನಟನೆಯಲ್ಲಿ ಹಿಂದೆ ಸರಿಯುವುದಕ್ಕೆ ಕಾರಣವನ್ನು ಸಹ ತಿಳಿಸಿದ್ದಾರೆ..

ರಮ್ಯಾ ಅವರ ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು, ಹೊಸ ರೀತಿಯ ಸಿನಿಮಾಗಳನ್ನು ಚಂದನವನದ ಅಭಿಮಾನಿಗಳಿಗೆ ನೀಡಬೇಕು ಎಂದು ರಮ್ಯಾ ಅವರು ಆಪಲ್ ಸಂಸ್ಥೆಯನ್ನು ಶುರು ಮಾಡಿದ್ದಾರೆ. ಜೊತೆಗೆ ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾದ ಪಾತ್ರಕ್ಕೆ ರಮ್ಯಾ ಅವರಿಗಿಂತ ಹೊಸ ನಟಿ, ಹೊಸ ಪ್ರತಿಭೆ ನಟಿಸಿದರೆ ಚೆನ್ನಾಗಿರುತ್ತದೆ ಎನ್ನುವುದು ರಮ್ಯಾ ಅವರ ಅಭಿಪ್ರಾಯ ಆಗಿರುವ ಕಾರಣ, ಅವರೇ ನಟನೆಯಿಂದ ಹಿಂದೆ ಸರಿದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

ಇನ್ನು ರಮ್ಯಾ ಅವರ ಪಾತ್ರಕ್ಕೆ ಆಯ್ಕೆ ಆಗುವುದು ಯಾರು ಎನ್ನುವ ಪ್ರಶ್ನೆ ಸಹ ಕೇಳಿಬಂದಿದ್ದು, ಅದಕ್ಕೆ ಸ್ವತಃ ರಮ್ಯಾ ಅವರ ಕಡೆಯಿಂದಲೇ ಉತ್ತರ ಸಿಕ್ಕಿದೆ. ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾದ ನಾಯಕಿಯ ಪಾತ್ರಕ್ಕೆ ಸಿರಿ ರವಿಕುಮಾರ್ ಅವರು ಆಯ್ಕೆಯಾಗಿದ್ದಾರೆ. ಹೊಸ ಪ್ರತಿಭೆ ಸಿರಿ ರವಿಕುಮಾರ್ ಅವರು ಈ ಪಾತ್ರಕ್ಕೆ ಸೂಟ್ ಆಗುತ್ತಾರೆ ಎನ್ನಲಾಗಿದೆ. ಹಾಗೂ ಸಿನಿಮಾ ತಂಡಕ್ಕೆ ಸೇರ್ಪಡೆ ಆಗಿರುವ ಕಲಾವಿದರನ್ನು ಪರಿಚಯ ಮಾಡಿ ಸ್ವಾಗತ ಮಾಡಿರುವ ಫೋಟೋಗಳನ್ನು ಆಪಲ್ ಬಾಕ್ಸ್ ಸಂಸ್ಥೆ ಶೇರ್ ಮಾಡಿದೆ.

ಇದು ರಮ್ಯಾ ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ ಎಂದು ಗೊತ್ತಿದ್ದು, ಅಭಿಮಾನಿಗಳಿಗೂ ಸಹ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ರಮ್ಯಾ ಅವರು ಶೀಘ್ರದಲ್ಲೇ ಮತ್ತೊಂದು ಸಿನಿಮಾ ಮೂಲಕ, ಚಂದನವನಕ್ಕೆ ಕಂಬ್ಯಾಕ್ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ರಮ್ಯಾ ಅವರು ಅಭಿನಯಿಸುವ ಹೊಸ ಸಿನಿಮಾದ ಬಗೆಗಿನ ಅನೌನ್ಸ್ಮೆಂಟ್ ನವೆಂಬರ್ ತಿಂಗಳಿನಲ್ಲಿ ಆಗಬಹುದು ಎಂದು ಅವರ ಸಂಸ್ಥೆಯ ಮೂಲಕ ತಿಳಿದುಬಂದಿದೆ.

ಈ ವಿಚಾರ ಕೇಳಿ ಅಭಿಮಾನಿಗಳಿಗೆ ಕೊಂಚ ನೆಮ್ಮದಿ ಆಗಿದೆ ಎಂದರೆ ತಪ್ಪಾಗುವುದಿಲ್ಲ. ರಮ್ಯಾ ಅವರು 2 ದಶಕಗಳಿಂದ ಚಿತ್ರರಂಗದಲ್ಲಿದ್ದು, ಇಲ್ಲಿಯವರೆಗೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ, ರಾಜಕೀಯದಲ್ಲಿ ಕೂಡ ಸಕ್ರಿಯರಾಗಿದ್ದರು. ಕನ್ನಡದಲ್ಲಿ ಮಾತ್ರವಲ್ಲದೆ ರಮ್ಯಾ ಅವರಿಗೆ ತಮಿಳು ಚಿತ್ರರಂಗದಲ್ಲಿ ಸಹ ಭಾರಿ ಬೇಡಿಕೆ ಇತ್ತು. ಕನ್ನಡ ಮತ್ತು ತಮಿಳಿನ ಸೂಪರ್ ಸ್ಟಾರ್ ಗಳ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ ರಮ್ಯಾ.

ರಮ್ಯಾ ಅವರು ಸಿನಿಮಾ ಇಂದ ದೂರವಾಗಿ 5 ವರ್ಷಕ್ಕಿಂತ ಹೆಚ್ಚಿನ ಸಮಯ ಆಗಿತ್ತು, ಇವರು ಸಿನಿಮಾ ಇಂದ ದೂರವಿದ್ದರು ಇವರಿಗೆ ಇರುವ ಬೇಡಿಕೆ ಮತ್ತು ಜನರ ಪ್ರೀತಿ ಸ್ವಲ್ಪವು ಕಡಿಮೆ ಆಗಿರಲಿಲ್ಲ. ಅದಕ್ಕೆ ಸಾಕ್ಷಿ ಅಭಿಮಾನಿಗಳು ಈಗಲೂ ಇವರ ಮೇಲೆ ಇಟ್ಟುಕೊಂಡಿರುವ ಪ್ರೀತಿ. ಸಧ್ಯಕ್ಕೆ ಅಭಿಮಾನಿಗಳು ರಮ್ಯಾ ಅವರ ಹೊಸ ಸಿನಿಮಾ ಅನೌನ್ಸ್ಮೆಂಟ್ ಗಾಗಿ ಕಾಯುತ್ತಿದ್ದಾರೆ.

Leave A Reply

Your email address will not be published.