Neer Dose Karnataka
Take a fresh look at your lifestyle.

ಖ್ಯಾತ ನಟಿಯಾಗಿ ಬೆಳೆದಿದ್ದ ಸೌಂದರ್ಯ ರವರು ಸಿನೆಮಾಗಳಲ್ಲಿ ಯಾಕೆ ಎಕ್ಸ್‌ಪೋಸ್ ಮಾಡುತ್ತಿರಲಿಲ್ಲ ಗೊತ್ತೇ??

ಕನ್ನಡನಾಡಲ್ಲಿ ಹುಟ್ಟಿ ಬೆಳೆದ ಈ ನಟಿ, ಮುಂದೊಂದು ದಿನ ಇಡೀ ಭಾರತ ಚಿತ್ರರಂಗದಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಳ್ಳುತ್ತಾರೆ ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ಸೌಮ್ಯ ಕೆ.ಎಸ್ ನಾಮಧೇಯದಲ್ಲಿ ಹುಟ್ಟಿ ಸೌಂದರ್ಯ ಹೆಸರಿನಲ್ಲಿ ಜಗತ್ಪ್ರಸಿದ್ಧರಾದರು. ಮೂಲ ಹೆಸರು “ಸೌಮ್ಯ” ಈ ನಟಿಯ ಅವರ ಆಂತರಿಕ ಸೌಂದರ್ಯವನ್ನು ಬಿಂಬಿಸಿದರೆ, ತೆರೆಯ ಮೇಲಿನ ಹೆಸರು “ಸೌಂದರ್ಯ” ಅವರ ಬಾಹ್ಯ ಸೌಂದರ್ಯವನ್ನು ಬಿಂಬಿಸುವ ಹಾಗಿತ್ತು.

ಇವರ ನಟನಾ ಚಾತುರ್ಯತೆಗೆ ಮಾರುಹೋಗದವರಿಲ್ಲ. ಅಪ್ಪಟ ಕನ್ನಡತಿ, ಕನ್ನಡ ಮಣ್ಣಿನ ದೇಸಿ ಪ್ರತಿಭೆ ಸೌಂದರ್ಯ ಅವರು ಗಂಧರ್ವ ಹೆಸರಿನ ಕನ್ನಡ ಸಿನಿಮಾ ಮೂಲಕ ಸಿನಿಪಯಣ ಆರಂಭಿಸಿ, ಕನ್ನಡ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಭಾರತದ ಎಲ್ಲಾ ಭಾಷೆಗಳಲ್ಲೂ ಅಭಿನಯಿಸಿ ತಮ್ಮ ಪ್ರತಿಭೆಯನ್ನು ಭಾರತದ ಗಡಿಯಾಚೆಗೂ ತಲುಪಿಸಿದವರು.
ಇವರ ನಟನಾ ಪ್ರತಿಭೆಗೆ ಸಿಕ್ಕ ಪ್ರಶಸ್ತಿಗಳು ಹಲವಾರು. ರಾಷ್ಟ್ರಪ್ರಶಸ್ತಿ, ರಾಜ್ಯ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳು ಲಭಿಸಿದೆ.

ಸೌಂದರ್ಯ ಅವರು ನಿರ್ಮಾಪಕಿ ಕೂಡ ಹೌದು. ಅವರು ನಟಿಸಿ ನಿರ್ಮಿಸಿದ ‘ದ್ವೀಪ’ಕ್ಕೆ ರಾಷ್ಟ್ರಪ್ರಶಸ್ತಿ ಬಂದಿತು. ಅವರ ಸಮಕಾಲೀನ ನಟಿಯರೆಲ್ಲ ನಟನೆಯತ್ತ ಮಾತ್ರ ಗಮನ ಹರಿಸಿದವರಾದರು, ಆದರೆ ಸೌಂದರ್ಯ ಅವರು ಮಾತ್ರ ಅವರೆಲ್ಲರಿಗಿಂತ ಭಿನ್ನವಾಗಿದ್ದರು. ಬೆಂಗಳೂರಿನಲ್ಲಿ ಒಂದು ಶಾಲೆಯನ್ನು ದತ್ತು ಪಡೆದಿದ್ದರು. ಅವರ ಹುಟ್ಟೂರಾದ ಕೋಲಾರದ ಸಮೀಪವಿರುವ ಗಂಜಿಗುಂಟೆಯಲ್ಲಿನ ಜನರಿಗೆ ಕೃಷಿ ಕೆಲಸಕ್ಕೆ, ಸಾಮೂಹಿಕ ವಿವಾಹಗಳಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಬಹಳ ಸಹಾಯ ಮಾಡಿದ್ದಾರೆ ನಟಿ ಸೌಂದರ್ಯ.

ಸ್ವಲ್ಪವೂ ಏಕ್ಸ್ಪೋಸ್ ಮಾಡದೆ, ಸಂಪೂರ್ಣವಾಗಿ ತಮ್ಮ ಪ್ರತಿಭೆಯಿಂದಲೇ ಎಲ್ಲರನ್ನು ಮೆಚ್ಚಿಸಿ, ಯಶಸ್ಸಿನ ಉತ್ತುಂಗಕ್ಕೆ ಏರಿದ ಏಕೈಕ ನಟಿ ಸೌಂದರ್ಯ ಎಂದರೆ ತಪ್ಪಾಗಲಾರದು. ಇವರು ನಟಿಸಿದ ಬಹುತೇಕ ಪಾತ್ರಗಳಲ್ಲಿ ಸೀರೆ ಧರಿಸಿ ಅಥವಾ, ಲಂಗಾ ದಾವಣಿ ಇಂಥಾ ಉಡುಪುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೇ ಹೊರತು, ಗ್ಲಾಮರಸ್ ಆಗಿ ಎಕ್ಸ್ಪೋಸ್ ಮಾಡಿಯೇ ಇಲ್ಲ, ಅಂಥಾ ಪಾತ್ರಗಳನ್ನು ಅವರು ಒಪ್ಪಿಕೊಳ್ಳುತ್ತಲು ಇರಲಿಲ್ಲ. ಸೌಂದರ್ಯ ಅಬರು ಗ್ಲಾಮರಸ್ ಆಗಿ ಯಾಕೆ ಕಾಣಿಸಿಕೊಳ್ಳುತ್ತಿರಲಿಲ್ಲ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ.

ಈ ವಿಚಾರದ ಬಗ್ಗೆ ಸ್ನೇಹಿತೆ ನಟಿ ಆಮನಿ ಅವರೊಡನೆ ಹೇಳಿಕೊಂಡಿದ್ದರಂತೆ ಸೌಂದರ್ಯ. ಈಕೆ ಬಹಳ ಅಪರೂಪದ ನಟಿ, ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ ಸೌಂದರ್ಯ ಅವರನ್ನು ಅಭಿನವ ಸಾವಿತ್ರಿ ಎಂದು ಕರೆಯುತ್ತಿದ್ದರು. ಸೌಂದರ್ಯ ಅವರು ಅಗಲಿ 18 ವರ್ಷ ಕಳೆದಿದ್ದರು ಕೂಡ ಇಂದಿಗೂ ಅವರನ್ನು ಅಭಿಮಾನಿಗಳು ಮರೆತಿಲ್ಲ. ಅವರ ಸಿನಿಮಾ ಮತ್ತು ಹಾಡುಗಳನ್ನು ಬಹಳ ಇಷ್ಟಪಟ್ಟು ಕೇಳುತ್ತಾರೆ. ಸೌಂದರ್ಯ ಅವರು ಮತ್ತು ನಟಿ ಆಮನಿ ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಆಮನಿ ಅವರು ಕೂಡ ಬೆಂಗಳೂರಿನವರೆ.

ಆದರೆ ಇಬ್ಬರು ಹೆಚ್ಚಾಗಿ ಗುರುತಿಸಿಕೊಂಡಿದ್ದು ತೆಲುಗು ಚಿತ್ರರಂಗದಲ್ಲಿ, ಆಮನಿ ಅವರು ಕೂಡ ಡಾ.ವಿಷ್ಣುವರ್ಧನ್ ಅವರೊಡನೆ ನಾಯಕಿಯಾಗಿ ಅಪ್ಪಾಜಿ ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗಿನ ಅಮ್ಮದೊಂಗ ಎನ್ನುವ ಸಿನಿಮಾದಲ್ಲಿ ಸೌಂದರ್ಯ ಅವರು ಮತ್ತು ಆಮನಿ ಅವರು ಜೊತೆಯಾಗಿ ನಟಿಸಿದ್ದಾರೆ. ಸೌಂದರ್ಯ ಅವರ ಬಗ್ಗೆ ತೆಲುಗು ಸಂದರ್ಶನದಲ್ಲಿ ಮಾತನಾಡಿರುವ ಆಮನಿ ಅವರು, ನಾವಿಬ್ಬರು ಕನ್ನಡದಲ್ಲೇ ಮಾತನಾಡುತ್ತಿದ್ದೆವು, ಕನ್ನಡದ ಹಾಡುಗಳನ್ನು ಹಾಡುತ್ತಿದ್ದೆವು, ಕನ್ನಡದ ಮಾತನಾಡಿದರೆ ಸೌಂದರ್ಯ ತುಂಬಾ ಸಂತೋಷ ಪಡುತ್ತಾ ಇದ್ಲು..ಎಂದಿದ್ದಾರೆ.

ಒಂದು ಸಾರಿ ಆಮನಿ ಅವರು ಸೌಂದರ್ಯ ಅವರ ಬಳಿ, ನೀನು ಯಾಕೆ ಎಕ್ಸ್ಪೋಸ್ ಮಾಡಲು ಒಪ್ಪೋದಿಲ್ಲೆ ಎಂದು ಕೇಳಿದರಂತೆ. ಆಗ ಸೌಂದರ್ಯ ಅವರು, “ಎಕ್ಸ್ಪೋಸಿಂಗ್ ಯಾಕೆ ಮಾಡಬೇಕು.. ನಾಳೆ ನನಗೂ ಮದುವೆ ಆಗುತ್ತದೆ, ಗಂಡ ಬರುತ್ತಾರೆ, ಮಕ್ಕಳಾಗುತ್ತದೆ. ಇವತ್ತು ದುಡ್ಡಿಗಾಗಿ ಎಕ್ಸ್ಪೋಸಿಂಗ್ ಮಾಡಿದರೆ, ನಾಳೆ ನನ್ನ ಗಂಡ ಆ ಥರ ಯಾಕೆ ಮಾಡಿದೆ ಅಂತ ಕೇಳಿದ್ರೆ..ಏನು ಹೇಳೋಕಾಗುತ್ತೆ..”ಎಂದು ಹೇಳಿದ್ದರಂತೆ ಸೌಂದರ್ಯ. ಆಮನಿ ಅವರು ಹೇಳುವ ಹಾಗೆ, ಸೌಂದರ್ಯ ಅವರು ತುಂಬಾ ಎಥಿಕ್ಸ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು.

ಸಿನಿಮಾರಂಗದಲ್ಲಿ ಇದ್ದರು ಸಹ, ಅವರು ಅಪ್ಪಟ ನಮ್ಮ ಮನೆಯ ಮಗಳ ಹಾಗಿದ್ದರು. ಸೌಂದರ್ಯ ಅವರಿಗೆ ಕುಟುಂಬ, ಗಂಡ, ಮಕ್ಕಳು ಇರಬೇಕು ಎಂದು ಬಹಳ ಆಸೆ ಇತ್ತು. ಆ ದುರ್ಘಟನೆ ಸಂಭವಿಸುವ ಮೊದಲು ರಘು ಅವರೊಡನೆ ಮದುವೆಯಾಗಿದ್ದರು. ಮದುವೆಯಾಗಿ ಸಂತೋಷವಾಗಿದ್ದ ಸೌಂದರ್ಯ ಅವರು, ಮಕ್ಕಳಾಗಬೇಕು, ಗಂಡನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬಹಳ ಆವೆ ಇಟ್ಟುಕೊಂಡಿದ್ದರು. ಆದರೆ ಮದುವೆಯಾಗಿ ಒಂದು ವರ್ಷ ತುಂಬುವುದರ ಒಳಗೆ ವಿಮಾನ ಅಪಘಾತದಲ್ಲಿ ಮೃತರಾದರು.

Comments are closed.