Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ರವಿ ಚಂದ್ರನ್ ರವರಿಗೆ ಮಾರಿದ ಮನೆ ವಾಪಸ್ಸಾಗುವುದು ಫಿಕ್ಸ್. ಹೇಗೆ ಗೊತ್ತೇ?? ಇದಪ್ಪ ಅದೃಷ್ಟ ಅಂದ್ರೆ.

76

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕನ್ನಡ ಚಿತ್ರರಂಗದ ಕನಸುಗಾರ ಎಂದು ಹೆಸರು ಮಾಡಿರುವವರು..80ರ ದಶಕದಲ್ಲಿ ಪ್ರೇಮಲೋಕ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದವರು ನಟ ರವಿಚಂದ್ರನ್. ಇಂದಿಗೂ ಪ್ರೇಮಲೋಕ ಮತ್ತು ರಣಧೀರ ಸಿನಿಮಾ ಕ್ರೇಜ್ ಕಡಿಮೆ ಆಗಿಲ್ಲ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ತಂತ್ರಜ್ಞರಾಗಿ, ಸಂಗೀತಗಾರನಾಗಿ, ಅಪಾರವಾದ ಕೊಡುಗೆ ನೀಡಿದ್ದಾರೆ ನಟ ರವಿಚಂದ್ರನ್. ಆದರೆ ಇಂದು ರವಿಚಂದ್ರನ್ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

35 ವರ್ಷಕ್ಕಿಂತ ಹೆಚ್ಚಿನ ಸಮಯದಲ್ಲಿ ರವಿಚಂದ್ರನ್ ಅವರು ಕೆಲಸ ಮಾಡಿದ್ದು ಸಿನಿಮಾಗಾಗಿ ಮಾತ್ರ, ತಮ್ಮ ಕುಟುಂಬ ಮಕ್ಕಳಿಗಿಂತ ಹೆಚ್ಚಾಗಿ, ಒಳ್ಳೆಯ ಸಿನಿಮಾ ತಯಾರಿಸಿ ಜನರಿಗೆ ನೀಡಬೇಕು, ಜನರು ತಮ್ಮ ಸಿನಿಮಾ ನೋಡಿ ಸಂತೋಷಪಡಬೇಕು ಎಂದು ಭಾವಿಸುತ್ತಿದ್ದರು ಕ್ರೇಜಿಸ್ಟಾರ್. ಜನರು ಸಹ ರವಿಚಂದ್ರನ್ ಅವರ ಸಿನಿಮಗಳನ್ನು ಇಷ್ಟಪಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ರವಿಚಂದ್ರನ್ ಅವರ ಸಿನಿಮಾಗಳು ಅಂದುಕೊಂಡ ಹಾಗೆ ಯಶಸ್ಸು ಪಡೆಯಲಿಲ್ಲ, ರವಿಚಂದ್ರನ್ ಅವರು ನಟಿಸಿ ನಿರ್ಮಾಣ ಮಾಡಿದ ರಾಜೇಂದ್ರ ಪೊನ್ನಪ್ಪ ಸಿನಿಮಾ ಫ್ಲಾಪ್ ಆಯಿತು.

ಈ ಸಿನಿಮಾವನ್ನು ಜನರು ಇಷ್ಟಪಡುತ್ತಾರೆ ಎಂದು ಭಾವಿಸಿದ್ದರು ಕ್ರೇಜಿಸ್ಟಾರ್. ಆದರೆ ರವಿಚಂದ್ರನ್ ಅವರ ಸಿನಿಮಾಗಳು ಜನರಿಗೆ ಇಷ್ಟವಾಗುತ್ತಿಲ್ಲ. ಈ ಸಿನಿಮಾಗಾಗಿ ರವಿಚಂದ್ರನ್ ಅವರು ಬಹಳಷ್ಟು ಹಣ ಖರ್ಚು ಮಾಡಿದ್ದರು, ರಾಜೇಂದ್ರ ಪೊನ್ನಪ್ಪ ಸಿನಿಮಾಗಾಗಿ ಸಾಲ ಮಾಡಿಕೊಂಡಿದ್ದರು, ತಮ್ಮ ಬಳಿ ಇದ್ದ BMW ಕಾರ್ ಸಹ ಮಾರಿದ್ದರು. ಆದರೆ ಅದೆಲ್ಲವೂ ಈಗ ನಷ್ಟಕ್ಕೆ ಈಡು ಮಾಡಿದೆ. ಇದರಿಂದಾಗಿ ರವಿಚಂದ್ರನ್ ಅವರು ತಮ್ಮ ತಂದೆ ತಾಯಿ ಬಾಳಿ ಬದುಕಿದ ಮನೆಯನ್ನೇ ಖಾಲಿ ಮಾಡುವ ಹಾಗಾಯಿತು. ಪ್ರಸ್ತುತ ಮನೆಯನ್ನು ಖಾಲಿ ಮಾಡಿ, ಬೇರೆ ಫ್ಲ್ಯಾಟ್ ನಲ್ಲಿದ್ದಾರೆ ಕ್ರೇಜಿಸ್ಟಾರ್.

ಈ ಕಷ್ಟದ ಸಂದರ್ಭದ ಬಗ್ಗೆ ರವಿಚಂದ್ರನ್ ಅವರು ಕಾರ್ಯಕ್ರಮ ಒಂದರಲ್ಲಿ ಹೇಳಿಕೊಂಡರು. ಜನರಿಗಾಗಿ ಇಷ್ಟೆಲ್ಲಾ ಮಾಡಿದೆ, ಮನೆಯನ್ನು ಖಾಲಿ ಮಾಡಿದೆ, ಅವರನ್ನ ಮೆಚ್ಚಿಸೋದಕ್ಕೆ ನನ್ನಿಂದ ಆಗಲಿಲ್ಲ ಅಂತ ಬೇಸರ ಇದೆ, ವಾಪಸ್ ಬರ್ತೀನಿ ಜನರಿಗೆ ಇಷ್ಟ ಆಗುವಂತ ಸಿನಿಮಾವನ್ನು ಮಾಡೆ ಮಾಡ್ತೀನಿ ಎಂದು ನೋವಿನಿಂದ ಮಾತನಾಡಿದ್ದರು. ಈ ಮಾತು ಕೇಳಿ ಅಂದು ಕಾರ್ಯಕ್ರಮದಲ್ಲಿದ್ದ ಎಲ್ಲರು ಭಾವುಕರಾಗಿದ್ದರು. ರವಿಚಂದ್ರನ್ ಅವರಿಗೆ ಇಂಥದ್ದೊಂದು ಕಷ್ಟ ಬಂದಿದೆ ಎಂದು ತಿಳಿದು ಕನ್ನಡ ಚಿತ್ರರಂಗ ಸಹ ಅವರತ್ತ ಧಾವಿಸಿ ಬಂದಿತು.

ನಟ ಸುದೀಪ್ ಅವರು, ದರ್ಶನ್ ಅವರು, ಶಿವ ರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು, ಮೇಘನಾ ರಾಜ್ ಅವರು, ಇನ್ನು ಹಲವು ಕಲಾವಿದರು ರವಿಚಂದ್ರನ್ ಅವರಿಗೆ ಧೈರ್ಯ ತುಂಬಿ, ನಿಮ್ಮ ಜೊತೆ ನಾವಿದ್ದೇವೆ, ನಿಮಗೆ ಕಷ್ಟ ಎಂದರೆ ನಮ್ಮೆಲ್ಲರಿಗೂ ಅದು ಕಷ್ಟವೇ, ಕರ್ನಾಟಕದ ಜನರು ನಿಮ್ಮನ್ನು ಕೈಬಿಡುವುದಿಲ್ಲ, ಎಲ್ಲರೂ ಸರಿ ಹೋಗುತ್ತದೆ ಎಂದು ಚಂದನವನದ ಕಲಾವಿದರು ರವಿಚಂದ್ರನ್ ಅವರಿಗೆ ಭರವಸೆ ನೀಡಿದ್ದರು. ಆ ಮಾತು ಈಗ ನಿಜ ಆಗುವ ಸಮಯ ಬಂದಿದೆ. ರವಿಚಂದ್ರನ್ ಅವರ ಕಷ್ಟಕಾಲಗಳು ಮುಗಿಯುವ ಸಮಯ ಹತ್ತಿರ ಬಂದಿದೆ.

ಚಂದನವನದ ಕಲಾವಿದರಾದ ನಟ ದರ್ಶನ್, ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಸುದೀಪ್ ಅವರು, ಯಶ್ ಅವರು ಈ ಎಲ್ಲಾ ಟಾಪ್ ನಟರು ರವಿಚಂದ್ರನ್ ರವರ ಸಹಾಯಕ್ಕೆ ನಿಂತಿದ್ದು, ಇದರಿಂದಾಗಿ ಶಿವಣ್ಣ ರವರ ನೇತೃತ್ವದಲ್ಲಿ ಬಹುತೇಕ ಸಿನಿಮಾಗಳಲ್ಲಿ ರವಿಚಂದ್ರನ್ ರವರಿಗೆ ಪಾತ್ರ ನೀಡಲು ನಿರ್ಧಾರ ಮಾಡಲಾಗಿದೆ. ಅಷ್ಟೇ ಅಲ್ಲದೆ, ರವಿಚಂದ್ರನ್ ರವರು ನಿರ್ದೇಶನ ಮಾಡುವ, ನಿರ್ಮಾಣ ಮಾಡುವ ಎಲ್ಲಾ ಸಿನಿಮಾಗಳಿಗೆ ಉಚಿತ ಪ್ರಚಾರ ಮಾಡಿಕೊಡಲು ಕನ್ನಡ ಚಿತ್ರರಂಗ ಒಟ್ಟಾಗಿ ನಿಂತಿದೆ. ಈ ಮೂಲಕ ರವಿಚಂದ್ರನ್ ರವರ ಬೆಂಬಲಕ್ಕೆ ನಿಲ್ಲಲು ಕನ್ನಡ ಚಿತ್ರರಂಗ ಒಗ್ಗಟ್ಟು ತೋರಿದೆ. ಎಲ್ಲರು ಒಂದಾಗಿರುವಾಗ ರವಿಚಂದ್ರನ್ ಅವರ ಸಮಸ್ಯೆಗಳು ದೂರಗುವುದು ಖಂಡಿತ.

Leave A Reply

Your email address will not be published.