Neer Dose Karnataka
Take a fresh look at your lifestyle.

ಕಾಂತಾರ ಸಿನಿಮಾ ನೋಡಿದವರು ಕಾಂತಾರ ಸಿನಿಮಾದಲ್ಲಿ ಆಗಿರುವ ಈ ಮಹಾ ಎಡವಟ್ಟನ್ನು ನೀವು ಗಮನಿಸಿದ್ದೀರಾ? ಯಾರು ಇದರ ಬಗ್ಗೆ ಮಾತನಾಡುತ್ತಿಲ್ಲವೇಕೆ??

ಇತ್ತೀಚಿನ ವರ್ಷದಲ್ಲಿ ಥಿಯೇಟರ್ ಗಳ ಪರಿಸ್ಥಿತಿ ಬಹಳ ದಾರುಣವಾಗಿದೆ. ಕೆಲ ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಬೇರೆಯೇ ಇತ್ತು. ಥಿಯೇಟರ್ ನಲ್ಲಿ ಸಿನಿಮಾಗಳು ಬಹಳ ದಿನಗಳವರೆಗೂ ಇರುತ್ತಿದ್ದವು ಜೊತೆಗೆ ಒಳ್ಳೆಯ ಹಣಗಳಿಕೆ ಸಹ ಮಾಡುತ್ತಿದ್ದವು. ಆದರೆ ಈಗ ಸಿನಿಮಾಗಳು ಹೆಚ್ಚು ಕಾಲ ಥಿಯೇಟರ್ ನಲ್ಲಿ ನಿಲ್ಲುತ್ತಿಲ್ಲ. ಕೆಲವೇ ಕೆಲವು ಸಿನಿಮಾಗಳು ಮಾತ್ರ ಜನರು ಥಿಯೇಟರ್ ಗೆ ಬರುವ ಹಾಗೆ ಮಾಡುತ್ತಿದೆ. ಹೈ ಬಜೆಟ್, ಅದ್ಧೂರಿ ವಿ.ಎಫ್.ಎಕ್ಸ್ ಎಫೆಕ್ಟ್ಸ್ ಗಳು ಇದ್ದರೆ ಮಾತ್ರ ಸಿನಿಮಾ ಗೆಲ್ಲುತ್ತದೆ, ಹೆಚ್ಚು ಜನರಿಗೆ ಇಷ್ಟವಾಗುತ್ತದೆ ಎನ್ನುವ ಮಾತು ಸಹ ಕೇಳಿಬರುತ್ತಿದೆ. ಈ ಮಾತುಗಳನ್ನು ಸುಳ್ಳು ಮಾಡಿದ್ದು ಕಾಂತಾರ ಸಿನಿಮಾ. ಕನ್ನಡದ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು.. ದಕ್ಷಿಣ ಭಾರತದ ಸ್ಟಾರ್ ಕಲಾವಿದರು ಕಾಂತಾರ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದರು, ಆ ಕಾರಣದಿಂದ ಎಲ್ಲರೂ ಕಾಂತಾರ ಸಿನಿಮಾ ಕಡೆಗೆ ನೋಡಿದರು.

ಕನ್ನಡದಲ್ಲಿ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆ ಪಡೆದ ಕಾಂತಾರ ಸಿನಿಮಾ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಬಾಷೆಗೆ ಡಬ್ ಆಗಿ, ಎಲ್ಲಾ ಭಾಷೆಗಳಲ್ಲೂ ಬ್ಲಾಕ್ ಬಸ್ಟರ್ ಎನ್ನಿಸಿಕೊಂಡಿದೆ. 16 ಕೋಟಿ ಬಜೆಟ್ ನಲ್ಲಿ ತಯಾರಾದ ಕಾಂತಾರ ಅತಿದೊಡ್ಡ ಮಟ್ಟದಲ್ಲಿ ಹಣಗಳಿಕೆ ಮಾಡಿ, ದಾಖಲೆ ಬರೆಯುತ್ತಿದೆ. ಸಿನಿಪ್ರಿಯರಿಗೆ ಹೊಸ ಅನುಭವ ನೀಡುತ್ತಿರುವ ಕಾಂತಾರ ಸಿನಿಮಾ, ನಟನೆ ಮತ್ತು ಕಥೆಗೆ ಫುಲ್ ಮಾರ್ಕ್ಸ್ ಪಡೆದುಕೊಂಡಿದೆ. ಆದರೆ ಈ ಸಿನಿಮಾದಲ್ಲಿ ಒಂದು ಲಾಜಿಕ್ ಜನರಿಗೆ ಸರಿಯಾಗಿ ಅರ್ಥವಾಗಿಲ್ಲ. ಸಿನಿಮಾದಲ್ಲಿ ನಾಯಕ ಶಿವ ಮತ್ತು ಅವನ ತಂದೆ ಇಬ್ಬರು ಕೂಡ ಕೋಲ ಕಟ್ಟುತ್ತಾರೆ, ಹಾಗೆಯೇ ಮಾಯವಾಗಿಬಿಡುತ್ತಾರೆ ಎಂದು ಎಲ್ಲರಿಗೂ ಗೊತ್ತಿದೆ. ನಾಯಕನ ವಂಶದವರು ವರ್ಷಕ್ಕೆ ಒಂದು ಸಾರಿ ಕೋಲ ಕಟ್ಟಬೇಕು. ಶಿವನ ತಂದೆ ಕೋಲ ಕಟ್ಟಿದ ಬಳಿಕ ಕಾಡಿಗೆ ಓಡುವರು, ಬಳಿಕ ಎಷ್ಟು ವರ್ಷಗಳ ಕಾಲ ಕೋಲ ಕಟ್ಟಿದರು ಕೂಡ ಹಿಂದಿರುಗಿ ಬರುವುದಿಲ್ಲ.

ಶಿವನ ತಂದೆ ಮಾಯವಾದ್ ಬಳಿಕ ಶಿವನ ಗುರುವಾ ಕೋಲ ಕಟ್ಟಲು ಶುರು ಮಾಡುತ್ತಾನೆ. ಹಲವು ವರ್ಷಗಳ ಕಾಲ ಗುರುವಾ ಕೋಲ ಕಟ್ಟುತ್ತಾನೆ, ಆದರೆ ಗುರುವಾ ಕಾಡಿನಲ್ಲಿ ಮಾಯ ಅಗುವುದಿಲ್ಲ. ಗುರುವ ಮೃತನಾದ ಬಳಿಕ ಶಿವ ಒಂದು ಸಾರಿ ಕೋಲ ಕಟ್ಟುತ್ತಾನೆ. ಕ್ಲೈಮ್ಯಾಕ್ಸ್ ನಲ್ಲಿ ಶಿವ ಕೂಡ ಮಾಯ ಆಗುತ್ತಾನೆ. ಆದರೆ ಗುರುವಾ ಯಾಕೆ ಮಾಯ ಆಗಲಿಲ್ಲ? ಶಿವನ ತಂದೆ ಕೂಡ ಮೊದಲ ಸಾರಿ ಕೋಲ ಕಟ್ಟಿದಾಗಲೇ ಮಾಯ ಆಗುವುದಿಲ್ಲ. ನಂತರ ಮಾಯ ಆಗುತ್ತಾರೆ. ಹಾಗಿದ್ದಾಗ, ಶಿವ ಯಾಕೆ ಒಂದೇ ಸಾರಿಗೆ ಮಾಯವಾಗಿ ಬಿಡುತ್ತಾನೆ? ಈ ದೃಶ್ಯವನ್ನು ಸಿನಿಮಾದಲ್ಲಿ ತೋರಿಸಿಯು ಇಲ್ಲ. ಈ ಲಾಜಿಕ್ ಕೆಲ ಜನರಿಗೆ ಅರ್ಥ ಆಗುತ್ತಿಲ್ಲ, ಇದಕ್ಕೆ ಉತ್ತರವನ್ನು ನಿರ್ದೇಶಕರು ಕೊಡುತ್ತಾರಾ ಎಂದು ಕಾದು ನೋಡಬೇಕಿದೆ.

Comments are closed.