Neer Dose Karnataka
Take a fresh look at your lifestyle.

ಹೀರೊಯಿನ್ ಅನ್ನು ವಿಲ್ಲನ್ ಆಗಿ ಕರೆತರಲು, ವೈಷ್ಣವಿ ರವರಿಗೆ ದಾಖಲೆ ಸಂಭಾವನೆ: ಕಿರುತೆರೆ ದಾಖಲೆಗಳು ಉಡೀಸ್. ಒಂದು ಎಪಿಸೋಡಿಗೆ ಎಷ್ಟು ಗೊತ್ತೇ??

ಲಕ್ಷಣ ಧಾರವಾಹಿ ಈಗ ರೋಚಕ ಘಟ್ಟದಲ್ಲಿ ಸಾಗುತ್ತಿದೆ. ಡೆವಿಲ್ ವಿಲ್ಲನ್ ಚಂದ್ರಶೇಖರ್ ಮನೆಯಲ್ಲೇ ಇರುವ ಭಾರ್ಗವಿ ಎಂದು ವೀಕ್ಷಕರಿಗೆ ಗೊತ್ತಾಗಿದೆ, ಆದರೆ ಧಾರವಾಹಿಯಲ್ಲಿ ಯಾರಿಗೂ ಇದರ ಬಗ್ಗೆ ಗೊತ್ತಾಗಿಲ್ಲ. ಭಾರ್ಗವಿ ಚಂದ್ರಶೇಖರ್ ಅನ್ನು ನಿರ್ನಾಮ ಮಾಡಲು ಹೊಂಚು ಹಾಕುತ್ತಿದ್ದಾಳೆ, ಮಗಳು ಮಿಲಿ ಕೂಡ ಭಾರ್ಗವಿಗೆ ಸಪೋರ್ಟ್ ಮಾಡುತ್ತಿದ್ದಾಳೆ. ಇತ್ತ ನಕ್ಷತ್ರ ಗೆ ಆಗಾಗ ಕರೆಮಾಡಿ ವಾರ್ನಿಂಗ್ ಮತ್ತು ಬೆದರಿಕೆ ನೀಡುತ್ತಿದ್ದಾಳೆ ಭಾರ್ಗವಿ. ಚಂದ್ರಶೇಖರ್ ಈ ಡೆವಿಲ್ ಲೇಡಿ ಯಾರೆಂದು ತಲೆಕೆಡಿಸಿಕೊಂಡಿದ್ದಾರೆ.

ಇದೆಲ್ಲವೂ ಒಂದು ಕಡೆ ನಡೆಯುತ್ತಿರುವಾಗ ಭೂಪತಿ ಮನೆಗೆ ಹೊಸ ಪಾತ್ರದ ಎಂಟ್ರಿ ಆಗಿದೆ. ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಗೌಡ ವಿಲ್ಲನ್ ಪಾತ್ರ ವೈಷ್ಣವಿ ಮೂಲಕ ಲಕ್ಷಣ ಮೂಲಕ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ವೈಷ್ಣವಿ ಅವರ ಎಂಟ್ರಿಗೆ ಕಿರುತೆಗೆ ವೀಕ್ಷಕರು ಭಾರಿ ಸರ್ಪ್ರೈಸ್ ಆದರು, ಮೊದಲ ಎಪಿಸೋಡ್ ನಲ್ಲೇ ಭೂಪತಿ ಇನ್ಮೇಲೆ ನನ್ನ ಗಂಡ ಎಂದು ಹೇಳಿ ನಕ್ಷತ್ರಾಗೆ ಶಾಕ್ ಕೊಟ್ಟರು ವೈಷ್ಣವಿ. ಈಕೆಯನ್ನು ನೋಡಿ ಶ್ವೇತಾ ಸಹ ಶಾಕ್ ಆಗಿದ್ದಾಳೆ. ಬರುವಾಗಲೇ ಖಡಕ್ ಆಗಿ ಬಂದಿರುವ ಈ ಪಾತ್ರ ಕಿರುತೆರೆ ವೀಕ್ಷಕರಿಗೆ ಹೊಸದಾಗಿ ಆಸಕ್ತಿ ತರಿಸುತ್ತಿದೆ ಎಂದು ಹೇಳಬಹುದು.

ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಬಹಳ ಸಾಫ್ಟ್ ಆಗಿ ಕಾಣಿಸಿಕೊಂಡಿದ್ದ ವೈಷ್ಣವಿ ಅವರು ಬಳಿಕ ಸಿನಿಮಾಗಳಲ್ಲಿ ನಟಿಸಿದರು, ಹಾಗೆಯೇ ಬಿಗ್ ಬಾಸ್ ಮನೆಗೆ ಸಹ ಎಂಟ್ರಿ ಕೊಟ್ಟು ಫಿನಾಲೆವರೆಗೂ ತಲುಪಿದ್ದರು. ನಿಜ ಜೀವನದಲ್ಲಿ ಕೂಡ ಬಹಳ ಸಾಫ್ಟ್ ಆಗಿರುವ ವೈಷ್ಣವಿ ಅವರು ಮೊದಲಿಗೆ ವಿಲ್ಲನ್ ಪಾತ್ರ ಮಾಡಲು ಒಪ್ಪಿಕೊಳ್ಳಲಿಲ್ಲವಂತೆ. ಜನರು ತಮ್ಮನ್ನು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎನ್ನುವ ಆತಂಕ ಕೂಡ ವೈಷ್ಣವಿ ಅವಲ್ಲಿ ಇತ್ತು. ಆದರೆ ವೈಷ್ಣವಿ ಅವರಿಗೆ ಈ ಪಾತ್ರ ಹಿಟ್ ಆಗುತ್ತದೆ ಎಂದು ಮನವೊಲಿಸುವುದರ ಜೊತೆಗೆ ಅವರಿಗೆ ಅತಿಹೆಚ್ಚು ಸಂಭಾವನೆ ನೀಡುವುದಾಗಿ ಹೇಳಿ, ವೈಷ್ಣವಿ ಅವರನ್ನು ಕರೆತರಲಾಗಿದೆ, ಲಕ್ಷಣ ಧಾರವಾಹಿಗೆ ವೈಷ್ಣವಿ ಅವರಿಗೆ ಒಂದು ಎಪಿಸೋಡ್ ಬರೋಬ್ಬರಿ 80 ಸಾವಿರ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ.

Comments are closed.