Neer Dose Karnataka
Take a fresh look at your lifestyle.

ನಿಮ್ಮ ಪತ್ನಿಗೂ ಕೂಡ ಹೇಳಬಾರದ ವಿಷಯಗಳು ಯಾವ್ಯಾವು ಗೊತ್ತೇ?? ಅಪ್ಪಿ ತಪ್ಪಿಯೂ ಇವುಗಳನ್ನು ಬಾಯ್ಬಿಡಬೇಡಿ.

ಗಂಡ ಹೆಂಡತಿಯ ಸಂಬಂಧ ಬಹಳ ವಿಶೇಷವಾದದ್ದು. ಎರಡು ಜೀವಗಳು ಜೊತೆಗಿರುವ, ಒಬ್ಬರಿಗೊಬ್ಬರು ಇರುವ ಸಂಬಂಧ ಅದು. ಹಲವರು ಗಂಡ ಹೆಂಡತಿಯ ನಡುವೆ ಯಾವುದೇ ಮುಚ್ಚುಮರೆ ಇರಬಾರದು ಎನ್ನುವ ಮಾತುಗಳನ್ನು ಹೇಳುತ್ತಾರೆ. ಆದರೆ ಗಂಡಂದಿರು ಕೆಲವು ವಿಚಾರಗಳನ್ನು ತಮ್ಮ ಹೆಂಡತಿಯರ ಬಳಿ ಹೇಳಿಕೊಳ್ಳಬಾರದು. ಇದರ ಬಗ್ಗೆ ಆಚಾರ್ಯ ಚಾಣಕ್ಯರು, ತಮ್ಮ ಚಾಣಕ್ಯ ನೀತಿ ಪುಸ್ತಕದಲ್ಲಿ ತಿಳಿಸಿದ್ದಾರೆ. ಆಚಾರ್ಯ ಚಾಣಕ್ಯ ಜ್ಞಾನಿಗಳು, ಅರ್ಥಶಾಸ್ತ್ರಜ್ಞರು, ಹಾಗೂ ರಾಜತಾಂತ್ರಿಕರಾಗಿದ್ದರು. ಇವರು ತಿಳಿಸಿರುವ ವಿಷಯಗಳನ್ನು ಫಾಲೋ ಮಾಡಿದರೆ ಜೇವನದಲ್ಲಿ ಯಶಸ್ಸು ಸಂತೋಷ ಖಂಡಿತ. ಹಾಗಿದ್ದಲ್ಲಿ ಗಂಡಂದಿರು ಹೆಂಡತಿಯ ಜೊತೆಗೆ ಹೇಳಿಕೊಳ್ಳಬಾರದು ಎನ್ನಲಾಗಿರುವ ಆ ವಿಷಯಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

*ಒಂದು ವೇಳೆ ನೀವು ಯಾವುದಾದರೂ ಸಮಯದಲ್ಲಿ ಅವಮಾನ ಎದುರಿಸಿದರೆ ಅದರ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಬೇಡಿ. ಪತ್ನಿಯೊಂದಿಗೆ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವ ಗಂಡಂದಿರು ಅವಮಾನ ಆಗಿದ್ದರ ಬಗ್ಗೆ ಹೆಂಡತಿಯ ಜೊತೆಗೂ ಹೇಳಿಕೊಳ್ಳಬಾರದು. ಮುಂದೆ ಒಂದು ದಿನ ಜಗಳ ಅಥವಾ ಬೇರೆ ಸಂದರ್ಭಗಳು ಬಂದಾಗ, ಹೆಂಡತಿಯರು ಆ ಸಂದರ್ಭದ ಬಗ್ಗೆ ಮಾತನಾಡಿ, ನಿಮಗೆ ವಿರುದ್ಧವಾಗಿ ಹೇಳುವ ಸಾಧ್ಯತೆ ಇದೆ.
*ಚಾಣಕ್ಯರು ನೀತಿಶಾಸ್ತ್ರದಲ್ಲಿ ಹೇಳಿರುವ ಹಾಗೆ ಒಬ್ಬ ವ್ಯಕ್ತಿ ತಮ್ಮ ದೌರ್ಬಲ್ಯವನ್ನು ಯಾರ ಜೊತೆಗೂ ಹೇಳಿಕೊಳ್ಳಬಾರದು. ಜನರ ದೌರ್ಬಲ್ಯದ ಲಾಭ ಪಡೆಯುವ ಪ್ರಯತ್ನ ಮಾಡುವ ಸಾಕಷ್ಟು ಜನರಿದ್ದಾರೆ. ಹಾಗಾಗಿ ಅವು ನಿಮ್ಮ ವಿರುದ್ಧವೇ ತಿರುಗಬಹುದು. ಈ ಕಾರಣದಿಂದ, ನಿಮ್ಮ ದೌರ್ಬಲ್ಯದ ಬಗ್ಗೆ ಯಾರೊಂದಿಗೂ ಹೇಳಿಕೊಳ್ಳಬೇಡಿ.

*ನೀವು ಯಾವುದೇ ಸಮಯದಲ್ಲಿ ದಾನ ಮಾಡಿದ ವಿಷಯದ ಬಗ್ಗೆ ಯಾರ್ ಜೊತೆಗೂ ಹೇಳಿಕೊಳ್ಳಬೇಡಿ. ವಿಶೇಷವಾಗಿ ನಿಮ್ಮ ಹೆಂಡತಿಯ ಜೊತೆಗೆ ಕೂಡ ಹೇಳಿಕೊಳ್ಳಬಾರದು. ಚಾಣಕ್ಯ ನೀತಿಯಲ್ಲಿ ತಿಳಿಸಿರುವ ಪ್ರಕಾರ, ನೀವು ದಾನವನ್ನು ರಹಸ್ಯವಾಗಿ ಇಡುವುದೇ ಒಳ್ಳೆಯದು. ಒಂದು ವೇಳೆ ಅದು ಹೊರಗೆ ಬಂದರೆ, ದಾನದ ಮಹತ್ವ ಕಡಿಮೆ ಆಗುತ್ತದೆ.
*ನೀವು ಹಣಗಳಿಕೆ ಮಾಡುವ ಬಗ್ಗೆ ನಿಮ್ಮ ಹೆಂಡತಿಗೆ ಹೇಳಬೇಡಿ. ನಿಮ್ಮ ಆದಾಯ ಎಷ್ಟು? ಯಾವ ಮೂಲಗಳಿಂದ ಆದಾಯ ಸಿಗುತ್ತದೆ ಇದೆಲ್ಲವನ್ನು ಹೆಂಡತಿಗೆ ಹೇಳಬೇಡಿ. ಎಲ್ಲವನ್ನು ಹೇಳುವುದರಿಂದ ಪೂರ್ತಿ ಹಣ ಪಡೆಯಲು ಆಕೆ ಪ್ರಯತ್ನ ಮಾಡಬಹುದು. ಅಷ್ಟೇ ಅಲ್ಲದೆ, ನಿಮ್ಮ ಖರ್ಚಿಗೆ ಹಣ ಇಲ್ಲದ ಹಾಗೆ ಆಗಬಹುದು. ಹಾಗಾಗಿ ಗಳಿಕೆಯ ವಿಷಯ ಹೇಳಬೇಡಿ.

Comments are closed.