Neer Dose Karnataka
Take a fresh look at your lifestyle.

ಕನ್ನಡ ಚಿತ್ರರಂಗವನ್ನು ಶೇಕ್ ಮಾಡಿರುವ ಗಂಧದ ಗುಡಿ ಸಿನಿಮಾಗಾಗಿ, ಒಟ್ಟು ಖರ್ಚು ಮಾಡಿರುವುದು ಎಷ್ಟು ಕೋಟಿ ಗೊತ್ತೆ??

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಹಳ ಪ್ರೀತಿಯಿಂದ ತಯಾರಿಸಿರುವ ಗಂಧದಗುಡಿ ಈ ಶುಕ್ರವಾರ ತೆರೆಕಂಡಿದೆ. ಗುರುವಾರ ಆಯೋಜಿಸಲಾಗಿದ್ದ ಪೇಯ್ಡ್ ಪ್ರೀಮಿಯರ್ ಶೋನ ಎಲ್ಲಾ ಟಿಕೆಟ್ಸ್ ಗಳು ಸೋಲ್ಡ್ ಔಟ್ ಆಗಿ, ಶುಕ್ರವಾರದ ಟಿಕೆಟ್ ಗಳಿಗೆ ದಾಖಲೆಯ ಬುಕಿಂಗ್ ನಡೆದಿದೆ. ವೀಕೆಂಡ್ ನಲ್ಲೂ ಗಂಧದಗುಡಿ ಅಬ್ಬರವನ್ನು ನಿಲ್ಲಿಸಲು ಆಗುವುದಿಲ್ಲ ಎನ್ನುವುದು ಪಕ್ಕ ಆಗಿದೆ. ಗಂಧದಗುಡಿ ನೋಡಿದ ಸಿನಿಪ್ರಿಯರು ಭಾವುಕರಾಗಿದ್ದಾರೆ. ಅಪ್ಪು ಅವರು ಮನುಷ್ಯಕುಲಕ್ಕೆ ಒಂದು ಅದ್ಭುತ ಸಂದೇಶ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಇನ್ನು ಸೆಲೆಬ್ರಿಟಿಗಳು ಸಹ ಗಂಧದಗುಡಿ ನೋಡಿ ಭಾವುಕರಾಗಿಗಿದ್ದಾರೆ..

ಮೂರು ದಿನಗಳ ಹಿಂದೆ ತೆರೆಕಂಡ ಸಿನಿಮಾ ಕರ್ನಾಟಕದ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಪ್ಪು ಅವರ ಅಭಿಮಾನಿಗಳು ಮತ್ತು ಇಡೀ ಕರ್ನಾಟಕದ ಜನತೆ ತಮ್ಮ ಕುಟುಂಬದ ಸಮೇತ ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಪ್ರತಿ ಶೋಗಳು ಕೂಡ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಗಂಧದಗುಡಿ ಸಿನಿಮಾ ಮೂಲಕ ಕರ್ನಾಟಕದ ಜನರಿಗೆ ನಮ್ಮ ರಾಜ್ಯದ ಸೊಬಗನ್ನು ನೋಡುವ ಅವಕಾಶ ಸಿಕ್ಕಿದೆ. ಇದೀಗ ಸಿನಿಮಾಗೆ ಖರ್ಚು ಮಾಡಿರುವ ಒಟ್ಟು ಹಣ ಎಷ್ಟು ಎನ್ನುವ ಚರ್ಚೆ ಈಗ ಶುರುವಾಗಿದೆ.

ಪ್ರಸ್ತುತ ಸಿಕ್ಕಿರುವ ಮಾಹಿತಿಯ ಪ್ರಕಾರ, ಗಂಧದಗುಡಿ ಚಿತ್ರೀಕರಣಕ್ಕೆ 1.5ಕೋಟಿ ರೂಪಾಯಿ ಹಣ ಖರ್ಚು ಮಾಡಲಾಗಿದ್ದು, ಸಿನಿಮಾದ ಫೈನಲ್ ಕೆಲಸಗಳಿಗೆ 60 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ, ಇನ್ನು ಸಿನಿಮಾದ ಪ್ರೊಮೋಷನ್ ಗಳು ಹಾಗೂ ಬೇರೆ ಹಲವು ಕಾರ್ಯಕ್ರಮಕ್ಕಾಗಿ ಬರೋಬ್ಬರಿ 7 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ಒಟ್ಟಾರೆಯಾಗಿ ಗಂಧದಗುಡಿ ಸಿನಿಮಾಗೆ 9 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಈ ಸಮಯದಲ್ಲಿ ಅಪ್ಪು ಅವರು ಅಂದುಕೊಳ್ಳುತ್ತಿರುವುದು ಒಂದೇ ಮಾತು, ಅಪ್ಪು ಅವರು ಇರಬೇಕಿತ್ತು ಎಂದು..

Comments are closed.