ಕಾಂತಾರ ವಿರುದ್ಧ ಗೆದ್ದ ಕೇರಳ ಸಿನಿಮಾ ತಂಡ: ಹಾಡು ಕಾಪಿ ಮಾಡಿದ್ದು ಎಂದು ತಿಳಿದಾಗ ಬೇಡಿಕೆ ಇಟ್ಟದ್ದು ಏನು ಗೊತ್ತೇ??
ಕಾಂತಾರ ಸಿನಿಮಾ ಈಗ ಭಾರತ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾ ಯಶಸ್ಸು ಪಡೆಯುತ್ತಿರುವ ಸಿನಿಮಾ. ಕನ್ನಡದಲ್ಲಿ ಬಿಡುಗಡೆಯಾದ ಸಿನಿಮಾಗೆ ಬಂದ ರೆಸ್ಪಾನ್ಸ್ ಇಂದ, ಬೇರೆ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಯಿತು. ಎಲ್ಲಾ ಭಾಷೆಗಳಲ್ಲಿ ಇಂದಿಗೂ ಸಹ, ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು. ಸಿನಿಮಾದ ಗಳಿಕೆ ಬರೋಬ್ಬರಿ 300 ಕೋಟಿ ರೂಪಾಯಿಗೆ ಬರುವ ಹತ್ತಿರದಲ್ಲಿದೆ. ಸಿನಿಮಾ ಭರ್ಜರಿಯಾಗಿ ಯಶಸ್ಸಿನಲ್ಲಿದ್ದಾಗ, ನಟ ಚೇತನ್ ಅವರು ಈ ಆಚರಣೆಗಳು ಹಿಂದೂ ಧರ್ಮದ್ದಲ್ಲ ಎಂದು ಹೇಳಿದರು. ಬಳಿಕ ಕೇರಳದ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ನವರು ವರಾಹ ರೂಪಂ ಹಾಡಿನ ಮೇಲೆ ಕಾಪಿ ರೈಟ್ ಕೇಸ್ ಹಾಕಿದರು. ಇದಕ್ಕಿಂತ ಮೊದಲೇ ಹಾಡು ಕಾಪಿ ಎಂದು ಟ್ರೋಲ್ ಮಾಡಲಾಗುತ್ತಿತ್ತು.
ನಂತರ ತೈಕ್ಕುಡಂ ಬ್ರಿಡ್ಜ್ ಕೇರಳ ಕೋರ್ಟ್ ನಲ್ಲಿ ಕೇಸ್ ಹಾಕಿತು, ವರಾಹ ರೂಪಂ ಹಾಡನ್ನು ಸಿನಿಮಾ ಇಂದ ತೆಗೆದುಹಾಕಬೇಕು ಎಂದು ಕೇರಳ ಕೋರ್ಟ್ ತೀರ್ಪು ನೀಡಿದ ಮೇಲು ಸಹ ಹಾಡು ಥಿಯೇಟರ್ ನಲ್ಲಿ ಪ್ರಸಾರವಾಗುತ್ತಿದ್ದು, ಇದರ ಬಗ್ಗೆ ತೈಕ್ಕುಡಂ ಬ್ರಿಡ್ಜ್ ನ ವಿಯಾನ್ ಫರ್ನಾಂಡಿಸ್ ಅವರು ಪ್ರತಿಕ್ರಿಯೆ ನೀಡಿದ್ದು, ತಮ್ಮ ಬ್ಯಾಂಡ್ ಹಣಕ್ಕಾಗಿ ಕೇಸ್ ಹಾಕಿಲ್ಲ ಎಂದು ಹೇಳಿದ್ದಾರೆ.. ಹಾಡಿಗೆ ಸ್ಪೂರ್ತಿ ಪಡೆದಿದ್ದೇವೆ ಎಂದು ನಮ್ಮ ಬ್ಯಾಂಡ್ ಹೆಸರು ಹಾಕಿ, ಪ್ರದರ್ಶನ ಮಾಡಿದರ್ರ್ ನಮಗೆ ಈಗಲೂ ಯಾವುದೇ ಸಮಸ್ಯೆ ಇಲ್ಲ. ನಾವು ಹಣಕ್ಕಾಗಿ ಕೇಸ್ ಹಾಕಿಲ್ಲ. ಒಂದು ದೊಡ್ಡ್ ಪ್ರೊಡಕ್ಷನ್ ಕಂಪನಿ ವಿರುದ್ಧ ಒಂದು ಸಣ್ಣ ಬ್ಯಾಂಡ್ ಹೋರಾಡುತ್ತಿರುವುದು ಇದೇ ಮೊದಲು, ಅವರು ದುಡ್ಡಿನಿಂದ ಪಾರಾಗಬಹುದು ಎಂದುಕೊಂಡಿದ್ದರೆ ಅದು ನಡೆಯುವುದಿಲ್ಲ..

ನಾವು ಸಂಗೀತಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಅವರು ಗೆದ್ದರು ಸೋತರು, ನಾವು ಹೋರಾಟ ಮಾಡಿದ್ವಿ ಅಂತ ನಮಗೆ ತೃಪ್ತಿ ಇರುತ್ತದೆ..ಎಂದು ಹೇಳಿದ್ದಾರೆ. ಆರಂಭದಲ್ಲಿ ಇಲ್ಲದೆ ಈಗ ಯಾಕೆ ಕೇಸ್ ಹಾಕಿದ್ದು ಎಂದು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದು.. ಮೊದಲಿಗೆ ನಾವು ಸುಮ್ಮನೆ ಇದ್ವಿ, ಯೂಟ್ಯೂಬ್ ನಲ್ಲಿ ಸಾವಿರಾರು ಕಮೆಂಟ್ಸ್ ಗಳನ್ನು ಡಿಲೀಟ್ ಮಾಡಲಾಯಿತು, ನಾವು ಅವರಿಗೆ ವಾರ್ನಿಂಗ್ ಕೊಟ್ಟ ನಂತರ ಹಾಡಿನ ಒಂದು ವಿಡಿಯೋ ಡಿಲೀಟ್ ಮಾಡಲಾಯಿತು, ಅಜನೀಶ್ ಲೋಕನಾಥ್ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಇದೆ ಆದರೆ ಕಮೆಂಟ್ಸ್ ಗಳನ್ನು ಡಿಸೇಬಲ್ ಮಾಡಿದ್ದಾರೆ. ನಂತರ ಹಲವು ಜನರು ಫೋನ್ ಮಾಡಲು ಮೆಸೇಜ್ ಮಾಡಲು ಶುರು ಮಾಡಿದರು. ಆ ಕಾರಣದಿಂದಲೇ ಕೇಸ್ ಹಾಕಿದೆವು ಎಂದು ಉತ್ತರ ನೀಡಿದ್ದಾರೆ. ಈ ವಿಷಯಕ್ಕೆ ಹೊಂಬಾಳೆ ಸಂಸ್ಥೆ ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.