Neer Dose Karnataka
Take a fresh look at your lifestyle.

ಬಿಗ್ ಬಾಸ್: ಸೋನು ನಂತರ ದೀಪಿಕಾ ದಾಸ್ ಹಿಂದೆ ಬೀಳಲು ಸಿದ್ದವಾದ ರಾಕೇಶ್. ಆದರೆ ದೀಪಿಕಾ ದಾಸ್ ಹಾಕಿದ ಷರತ್ತು ಏನು ಗೊತ್ತೇ??

4,907

ದೀಪಿಕಾ ದಾಸ್ ಅವರು ಈಗ ಬಾಸ್ ಮನೆಯಲ್ಲಿ ಬಹಳ ಫೇಮಸ್. ಮೊದಲ ಸಾರಿ ಬಿಗ್ ಬಾಸ್ ಗೆ ಹೋಗಿದ್ದಾಗ ಬಹಳ ರಿಸರ್ವ್ಡ್ ಆಗಿದ್ದ ದೀಪಿಕಾ ಅವರು, ಬಹಳ ಸ್ಟ್ರಾಂಗ್ ಮೈಂಡ್ ಸೆಟ್ ಇರುವ ಹುಡುಗಿ, ತಾವಾಯಿತು ತಮ್ಮ ಪಾಡಾಯಿತು ಎಂದು ಇರುವ ದೀಪಿಕಾ, ಟಾಸ್ಕ್ ಗಳಲ್ಲಿ ತುಂಬಾ ಚೆನ್ನಾಗಿ ಪರ್ಫಾರ್ಮ್ ಮಾಡುತ್ತಾರೆ. ಅನಗತ್ಯವಾಗಿ ಎಲ್ಲರ ಜೊತೆಗೆ ಮಾತನಾಡುವುದಿಲ್ಲ, ಜಗಳದಿಂದ ದೂರವೇ ಇರುತ್ತಾರೆ. ವಾದ ವಿವಾದಗಳನ್ನು ಮಾಡಿಕೊಳ್ಳುವುದಿಲ್ಲ. ದೀಪಿಕಾ ದಾಸ್ ಅವರು ತಮ್ಮ ಜೊತೆಗೆ ಕನೆಕ್ಟ್ ಆಗುವವರ ಜೊತೆಗೆ ಮಾತ್ರ ಮಾತನಾಡುತ್ತಾ ಇರುತ್ತಾರೆ.

ಇದೀಗ ಎರಡನೇ ಬಾರಿ ಬಿಗ್ ಬಾಸ್ ಮನೆಗೆ ಹೋದಾಗಲು ಸಹ ಅದೇ ರೀತಿ ಇದ್ದಾರೆ. ಈ. ಸಾರಿ ಕ್ಯಾಪ್ಟನ್ ಆಗಿ ಎಲ್ಲರ ಗಮನ ಸೆಳೆದಿದ್ದರು ದೀಪಿಕಾ ದಾಸ್. ಇನ್ನು ಬಿಗ್ ಬಾಸ್ ಮನೆಯಲ್ಲಿ ಬಹಳ ಫೇಮಸ್ ಆಗಿರುವ ಮತ್ತೊಬ್ಬ ಸ್ಪರ್ಧಿ ರಾಕೇಶ್ ಅಡಿಗ. ಮನೆಯಲ್ಲಿರುವ ಎಲ್ಲಾ ಮಹಿಳಾ ಸ್ಪರ್ಧಿಗಳ ಜೊತೆಗೆ ಫ್ಲರ್ಟ್ ಮಾಡುತ್ತಾರೆ ರಾಕೇಶ್. ದೀಪಿಕಾ ದಾಸ್ ಅವರು ಇಂಥವುಗಳಿಂದ ದೂರವೇ ಇರುತ್ತಾರೆ. ಆದರೆ ಇದೀಗ ರಾಕೇಶ್ ಅವರು ದೀಪಿಕಾ ಅವರ ಜೊತೆಗೆ ಫ್ಲರ್ಟ್ ಮಾಡುತ್ತಿದ್ದಾರೆ.

ದೀಪಿಕಾ ಅವರು ರಾಕೇಶ್ ಗೆ ಒಂದು ಸವಾಲು ಕೂಡ ಹಾಕಿದ್ದಾರೆ. “ನೀನು ನನಗೆ ಲೈನ್ ಹೊಡೀಬೇಕು ಅಂದ್ರೆ ಬಜರ್ ಪ್ರೆಸ್ ಮಾಡು..” ಎಂದು ಹೇಳಿದ್ದಾರೆ. ಆಗ ರಾಕೇಶ್, ಬಜರ್ ಹೊಡಿಯೋದೇನು, ಬಜರ್ ನೇ ನಿನ್ನ ಪಕ್ಕ ತಂದು ಇಡ್ತೀನಿ ಎಂದಿದ್ದಾರೆ. ಆ ಮಾತು ಕೇಳಿದ ದೀಪಿಕಾ, ರಾಕೇಶ್ ಇನ್ ಡೈರೆಕ್ಟ್ ಆಗಿ ಫ್ಲರ್ಟ್ ಮಾಡ್ತಾ ಇದ್ದಾನೆ ಎನ್ನುತ್ತಾರೆ. ಆಗ ರಾಕೇಶ್ ಪರೋಕ್ಷವಾಗಿ ಅಲ್ಲ, ನೇರವಾಗಿಯೇ ಫ್ಲರ್ಟ್ ಮಾಡ್ತಾ ಇದ್ದೀನಿ ಎಂದು ನಕ್ಕಿದ್ದಾರೆ. ಒಟ್ಟಿನಲ್ಲಿ ದೀಪಿಕಾ ದಾಸ್ ಅವರನ್ನು ಬಿಟ್ಟಿಲ್ಲ ರಾಕೇಶ್.

Leave A Reply

Your email address will not be published.