Neer Dose Karnataka
Take a fresh look at your lifestyle.

Mahadeva: ಮಹಾದೇವನ ಆಶೀರ್ವಾದ ಪಡೆದು ಜೀವನವನ್ನೇ ಬದಲಾಯಿಸಿಕೊಳ್ಳಲು ಇದೊಂದು ಮಂತ್ರ ಪಟನೆ ಮಾಡಿ ಸಾಕು.

717

ಮಹಾದೇವನ ಆಶೀರ್ವಾದ ಪಡೆಯಲು ನೀವು ದೊಡ್ಡದಾಗಿ ಏನನ್ನು ಮಾಡಬೇಕಿಲ್ಲ, ಜಪಮಾಲೆ ಹಿಡಿದು, 108 ಸಾರಿ ಓಂ ನಮಃ ಶಿವಾಯ ಮಂತ್ರ ಪಠಣೆ ಮಾಡಿದರೆ ಸಾಕು, ಇದರಿಂದ ಮಹಾದೇವನ ವಿಶೇಷ ಅನುಗ್ರಹ ನಿಮಗೆ ಸಿಗುತ್ತದೆ. ಇದು ಬಹಳ ಶಕ್ತಿಶಾಲಿಯಾದ ಮತ್ತು ಅದ್ಭುತವಾದ ಮಂತ್ರ ಆಗಿದೆ. ಓಂ ನಮಃ ಶಿವಾಯ ಮಂತ್ರವನ್ನು ಪಠಣೆ ಮಾಡುವುದರಿಂದ ನಿಮ್ಮ ಜೀವನದ ಎಲ್ಲಾ ತೊಂದರೆಗಳಿಂದ ಮುಕ್ತಿ ಸಿಗುತ್ತದೆ, ನಿಮಗೆ ಎಲ್ಲಾ ರೀತಿಯ ಜ್ಞಾನ ಪ್ರಾಪ್ತಿಯಾಗುತ್ತದೆ..ಪುರಾಣಗಳಲ್ಲಿ ತಿಳಿಸಿರುವ ಹಾಗೆ ಒಂದು ಸಾರಿ ಪಾರ್ವತಿ ದೇವಿ, ಮಾಹಾದೇವನ ಬಳಿ ಒಂದು ವಿಚಾರ ಕೇಳಿದರು.

ಭೂಮಿಯಲ್ಲಿರುವ ಮನುಷ್ಯರು ತಮ್ಮ ಪಾಪಕರ್ಮಗಳಿಂದ ಮುಕ್ತಿ ಪಡೆಯಲು ಯಾವ ಮಂತ್ರ ಪಟನೆ ಮಾಡಬೇಕು ಎಂದು, ಅದಕ್ಕೆ ಉತ್ತರ ನೀಡಿದ ಮಹಾದೇವನು, 5 ಮುಖ ಇರುವ ಬ್ರಹ್ಮನಿಗೆ ಈ ಮಂತ್ರ ನೀಡಿದ ಮೊದಲಿಗರು ಎಂದು ಹೇಳುತ್ತಾರೆ. ಈ ಮಂತ್ರವನ್ನು ಸನಾತನ ಧರ್ಮದಲ್ಲಿ ಪಂಚಾಕ್ಷರ ಎಂದು ಕರೆಯುತ್ತಾರೆ. ಮಹಾದೇವನೇ ಈ ಮಂತ್ರದ ಅಧಿದೇವತೆ ಎಂದು ಪುರಾಣಗಳಲ್ಲಿ ಹೇಳುತ್ತಾರೆ. ಇದನ್ನು ಶರಣಾಕ್ಷರ ಮಂತ್ರ ಎಂದು ಕೂಡ ಕರೆಯುತ್ತಾರೆ. ಓಂ ನಮಃ ಶಿವಾಯ ಮಂತ್ರವನ್ನು ಪಠಣೆ ಮಾಡುವುದರಿಂದ ಜನರು ದ್ವೇಷ, ಮೋಹ, ಸ್ವಾರ್ಥ, ಲೋಭ, ಅಸೂಯೆ, ಕಾಮ, ಕ್ರೋಧ, ಮೋಹ, ಭ್ರಮೆ ಮತ್ತು ಹುಚ್ಚುತನ ಇವುಗಳಿಂದ ದೂರವಾಗಿ, ಸಂತೋಷ ಮತ್ತು ಪ್ರೀತಿಯ ಮೂಲಕ ದೇವರ ಆಶೀರ್ವಾದ ಪಡೆಯುತ್ತಾರೆ ಎಂದು ಅರ್ಥ.

ಈ ಮಂತ್ರ ಪಠಿಸಲು ಒಂದು ವಿಧಾನ ಇದೆ, ಮಹಾದೇವನ ದೇವಸ್ಥಾನದಲ್ಲಿ, ಮನೆಯಲ್ಲಿ, ಶಾಂತಿ ಇರುವ ಸ್ಥಳದಲ್ಲಿ, ಸ್ವಚ್ಛವಾಗಿರುವ ಏಕಾಂತವಾಗಿರುವ ಸ್ಥಳದಲ್ಲಿ ಈ ಮಂತ್ರವನ್ನು ಪಠಣೆ ಮಾಡಬೇಕು, ರುದ್ರಾಕ್ಷಿ ಜಪಮಾಲೆ ಹಿಡಿದು 108 ಸಾರಿ ಈ ಮಂತ್ರವನ್ನು ಪಠಣೆ ಮಾಡಬೇಕು. ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಯೋಗಸನದಲ್ಲಿ ಕುಳಿತು, ಈ ಮಂತ್ರ ಪಠಣೆ ಮಾಡಬೇಕು. ಶುಕ್ಲ ಪಕ್ಷದ ಪ್ರತಿಪದ ತಿಥಿಯಿಂದ ಕೃಷ್ಣ ಪಕ್ಷದ ಚತುರ್ದಶಿಯವರೆಗು ಪಠಿಸಿ. ಈ ವೇಳೆ ಊಟ, ಮಾತು ಮತ್ತು ಇಂದ್ರಿಯಗಳಲ್ಲಿ ವ್ಯಾಯಾಮ ಮಾಡಿ. ಸೂರ್ಯೊದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ ಈ ಮಂತ್ರ ಪಟನೆ ಮಾಡಿ, ಇದರಿಂದ ಮಹಾದೇವನಿಗೆ ಸಂತೋಷವಾಗಿ ಆಶೀರ್ವಾದ ನೀಡುತ್ತಾನೆ. ಈ ಮಂತ್ರದಿಂದ ಐಶ್ವರ್ಯ ವೃದ್ಧಿಯಾಗುತ್ತದೆ, ಶತ್ರುಗಳಿಂದ ವಿಜಯ ಸಾಧಿಸುತ್ತೀರಿ, ಎಲ್ಲಾ ತೊಂದರೆಗಳು ದೂರವಾಗುತ್ತದೆ.

Leave A Reply

Your email address will not be published.