Neer Dose Karnataka
Take a fresh look at your lifestyle.

ಬಿಗ್ ಬಾಸ್ ಮನೆಯಿಂದ ಹೊರಬಂದ ಸಾನಿಯಾ: ನೇರವಾಗಿ ಹೋಗಿದ್ದು ಎಲ್ಲಿಗೆ ಗೊತ್ತೇ?? ಅಸಲಿ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್.

ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಪುಟ್ಟಗೌರಿಯ ಬಾಲ್ಯದ ಪಾತ್ರ ನಿರ್ವಹಿಸಿದ್ದ ಬಾಲ ಕಲಾವಿದೆಯ ಹೆಸರು ಸಾನ್ಯಾ ಅಯ್ಯರ್. ಬಾಲಕಲಾವಿದೆಯಾಗಿ ಹಲವಾರು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ ಸಾನ್ಯಾ ಅಯ್ಯರ್. 2010 ರಲ್ಲಿ ದೀಪಾ ಅಯ್ಯರ್ ಅವರು ನಿರ್ದೇಶಿಸಿದ ಮುಖಪುಟ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದರು ಸಾನ್ಯಾ, ಈ ಸಿನಿಮಾ ಅವಾರ್ಡ್ ಗಳನ್ನು ಗೆದ್ದಿತ್ತು. ನಂತರ 2012 ರಲ್ಲಿ 7ನೇ ತರಗತಿ ಓದುವಾಗ ಪುತ್ಯಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿ ಬಹಳ ಜನಪ್ರಿಯತೆ ಪಡೆದರು ಸಾನ್ಯಾ ಆಯ್ಯರ್.

ಪುಟ್ಟಗೌರಿ ಮದುವೆ ನಂತರ ಇವರು ಹೆಚ್ಚಾಗಿ ಸಿನಿಮಾ ಅಥವಾ ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು ಸಾನ್ಯಾ ಅಯ್ಯರ್. ಜೊತೆಗೆ ಸೂಪರ್ ಮಿನಿಟ್ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ್ದರು. ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯ ಮತ್ತೊಂದು ಡ್ಯಾನ್ಸ್ ಶೋ ನಲ್ಲಿ ಕಾಣಿಸಿಕೊಂಡಿದ್ದ ಸಾನ್ಯಾ, ಬಿಗ್ ಬಾಸ್ ಓಟಿಟಿ ಸೀಸನ್ ನಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಓಟಿಟಿ ಸೀಸನ್ ನಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಜೊತೆಗೆ ರೂಪೇಶ್ ರಾಜಣ್ಣ ಅವರ ಬೆಸ್ಟ್ ರರೆಂಡ್ ಆಗಿ ಗುರುತಿಸಿಕೊಂಡಿದ್ದರು. ಜೊತೆಗೆ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಎಂಟ್ರಿ ಕೊಟ್ಟರು..

ಟಿವಿ ಸೀಸನ್ ನಲ್ಲಿ ಕೂಡ ಸ್ಟ್ರಾಂಗ್ ಸ್ಪರ್ಧಿಯಾಗಿ ಟಾಸ್ಕ್ ಗಳನ್ನು ಚೆನ್ನಾಗಿ ಆಡುತ್ತಿದ್ದ ಸಾನ್ಯಾ ಅಯ್ಯರ್, ಹಾಡುಗಳನ್ನು ಚೆನ್ನಾಗಿ ಬರೆಯುತ್ತಿದ್ದರು. ರೂಪೇಶ್ ಶೆಟ್ಟಿ ಅವರ ಜೊತೆಗೆ ಹೆಚ್ಚಾಗಿ ಕಾಣಿಸಿಕೊಂಡಿದ್ದ ಸಾನ್ಯಾ, 6ನೇ ವಾರ ಈ ವೀಕೆಂಡ್ ನಲ್ಲಿ ಎಲಿಮಿನೇಟ್ ಆಗಿದ್ದಾರೆ. ಆದರೆ ಸಾನ್ಯಾ ಅವರು ಎಲಿಮಿನೇಟ್ ಆಗಿ ಮನೆಯೊಳಗೆ ಹೋಗಿಲ್ಲ, ಬದಲಾಗಿ, ಸೀಕ್ರೆಟ್ ರೂಮ್ ಗೆ ಹೋಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಒಟ್ಟಿನಲ್ಲಿ ಬಿಗ್ ಬಾಸ್ ಈಗ ಬಿಗ್ ಟ್ವಿಸ್ಟ್ ಅನ್ನೇ ನೀಡಿದ್ದಾರೆ.

Comments are closed.