Puneeth News: ಕರ್ನಾಟಕ ಭಾವುಟದಲ್ಲಿ ಪುನೀತ್ ಫೋಟೋ ಹಾಕಿದಕ್ಕೆ ಫುಲ್ ಜಗಳ ಮಾಡಿದ್ದ ಮಹಿಳೆ ಈಗ ಏನು ಮಾಡಿದ್ದಾರೆ ಗೊತ್ತೇ??
ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಮಹಿಳೆಯೊಬ್ಬರು, ಕರ್ನಾಟಕ ಬಾವುಟದಲ್ಲಿ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರ ಇದ್ದ ಕಾರಣ, ಅದನ್ನು ವಿರೋಧಿಸಿ ಮಾತನಾಡಿದ್ದರು. ಹಲವು ಕನ್ನಡಾಭಿಮಾನಿಗಳು ಕನ್ನಡ ನಾಡಿನ ಬಾವುಟದಲ್ಲಿ ಅಪ್ಪು ಅವರ ಫೋಟೋ ಹಾಕಿಸಿದ್ದರು, ಇದನ್ನು ನೋಡಿದ ಮಹಿಳೆಯೊಬ್ಬರು, ನವೆಂಬರ್ 3ರಂದು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಮಾತನಾಡಿ, “ಕರ್ನಾಟಕ ಧ್ವಜದ ಮೇಲೆ ನಮ್ಮ ಫೋಟೋ ಯಾಕಿಲ್ಲ? ಪುನೀತ್ ಅಂದ್ರೆ ಕನ್ನಡ ಮಾತೇ ಅಲ್ಲ, ಪುನೀತ್ ಫೋಟೋ ಕನ್ನಡ ಬಾವುಟದ ಮೇಲೆ ಇರಬಾರದು..” ಎಂದು ಹೇಳಿಕೆ ನೀಡಿದ್ದರು.
ಈ ವಿಷಯಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಕರ್ನಾಟಕದ ಪ್ರತಿ ಮನೆಯಲ್ಲೂ ಪುನೀತ್ ರಾಜ್ ಕುಮಾರ್ ಅವಾರ್ಸ್ ಫೋಟೋ ಇಟ್ಟು ಪೂಜೆ ಮಾಡುತ್ತಿದ್ದಾರೆ. ಬಾವುಟದಲ್ಲಿ ಅವರ ಫೋಟೋ ಇದ್ದರೆ ತಪ್ಪೇನು? ಪುನೀತ್ ಅವರ ಬಗ್ಗೆ ಈ ರೀತಿ ಹೇಳಿಕೆ ನೀಡಿದ ಮಹಿಳೆ ಎಲ್ಲರ ಎದುರು ಕ್ಷಮೆ ಕೇಳಲೇಬೇಕು ಎಂದು ಪುನೀತ್ ಅವರ ಅಭಿಮಾನಿಗಳು ಆಗ್ರಹಿಸಿದ್ದರು, ಲೈವ್ ನಲ್ಲಿ ಕೂಡ ಮಾತನಾಡಿದ್ದರು. ಅದೇ ರೀತಿ ಈಗ, ಆ ಮಹಿಳೆ ಪುನೀತ್ ಅವರ ಫೋಟೋ ಎದುರೇ ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ದು, ತಾವು ಆ ರೀತಿ ಹೇಳಿದ್ದು ಯಾಕೆ ಎಂದು ವಿವರಿಸಿದ್ದಾರೆ.

“ನಾನು ಕನ್ನಡದವಳು, ಕರ್ನಾಟಕದ ಬಗ್ಗೆ ನನಗೆ ಹೆಮ್ಮೆ ಇದೆ, ನಾನು ಡಾ.ರಾಜ್ ಕುಮಾರ್ ಅವರ ಅಭಿಮಾನಿ. ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ನಾನು ತಪ್ಪಾಗಿ ಹೇಳಲಿಲ್ಲ. ನಮ್ಮ ಕರ್ನಾಟಕದ ಬಾವುಟ ವ್ಯಕ್ತಿಗತವಾಗಬಾರದು ಅಂತ ಹೇಳಿದ್ದೆ., ಅದು ನನ್ನ ಅಭಿಪ್ರಾಯವಾಗಿತ್ತು. ಬಾವುಟದಲ್ಲಿ ಪುನೀತ್ ಅವರ ಫೋಟೋ ಇದ್ದಿದ್ದಕ್ಕೆ ಅವರ ಹೆಸರು ಬಂದಿತು. ಇದನ್ನು ಅಭಿಮಾನಿಗಳು ತಪ್ಪಾಗಿ ಭಾವಿಸಿದ್ದರೆ, ಇದರಿಂದ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ಇದೆ ಉತ್ಸಾಹವನ್ನು ಕನ್ನಡದ ಮತ್ತು ಕರ್ನಾಟಕದ ಅಭಿವೃದ್ಧಿ ಕಡೆಗೆ ತೋರಿಸಿ ಎನ್ನುವುದು ನಮ್ಮ್ ಆಶಯ..”ಎಂದು ಅಪ್ಪು ಅವರ ಫೋಟೋಗೆ ಹೂ ಹಾಕಿ, ಕೈಮುಗಿದು ಕ್ಷಮೆ ಕೇಳಿದ್ದಾರೆ.