Neer Dose Karnataka
Take a fresh look at your lifestyle.

Kannada News: ಬನಾರಸ್ ಸಿನಿಮಾ ಸೋಲುತ್ತಿರುವ ಬೆನ್ನಲ್ಲೇ ಪ್ರಮೋಷನ್ ಮಾಡಿದ ಡಿ ಬಾಸ್ ಬಗ್ಗೆ ನಟಿ ಸೋನಲ್ ಏನು ಹೇಳಿದ್ದಾರೆ ಗೊತ್ತೇ??

10,005

ಕಳೆದ ಶುಕ್ರವಾರ ಕನ್ನಡ ಚಿತ್ರರಂಗದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆ ಆಗಿದೆ, ಅದು ಜೈದ್ ಖಾನ್ ಮತ್ತು ಸೋನಲ್ ಮೊಂಟೆರೋ ಅವರು ನಟಿಸಿರುವ ಬನಾರಸ್ ಸಿನಿಮಾ. ಜೈದ್ ಖಾನ್ ಅವರು ಖ್ಯಾತ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮಗ. ಈ ಯುವನಟನಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಪೋರ್ಟ್ ಇದೆ. ದರ್ಶನ್ ಅವರು ಬನಾರಸ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಲ್ಲಿ ಪಾಲ್ಗೊಂಡು ಬನಾರಸ್ ಸಿನಿಮಾಗೆ ಸಪೋರ್ಟ್ ಮಾಡಿದರು.

ಬನಾರಸ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ನೀರಿಕ್ಷೆಯ ಮಟ್ಟಕ್ಕೆ ಸದ್ದು ಮಾಡುತ್ತಿಲ್ಲ, ಇದರ ಬೆನ್ನಲ್ಲೇ ಸಿನಿಮಾ ನಾಯಕಿ ಸೋನಲ್ ಅವರು ಡಿಬಾಸ್ ದರ್ಶನ್ ಅವರ ಬಗ್ಗೆ ಮಾತನಾಡಿದ್ದಾರೆ, ಸಂದರ್ಶನ ಒಂದರಲ್ಲಿ ಮಾತನಾಡಿರುವ ಸೋನಲ್ ಅವರು, ರಾಬರ್ಟ್ ಸಿನಿಮಾ ಚಿತ್ರೀಕರಣದಲ್ಲಿ ಆದ ಘಟನೆ ನೆನೆಪು ಮಾಡಿಕೊಂಡಿದ್ದಾರೆ, “ರಾಬರ್ಟ್ ಸೆಟ್ ನಲ್ಲಿ ನಾನೊಬ್ಬಳೇ ಹೊಸಬಳು, ಅಂತಹ ದೊಡ್ಡ ಕಲಾವಿದರ ಜೊತೆಗೆ ಅಭಿನಯಿಸುತ್ತಾ ಇದ್ದೀನಿ ಅನ್ನೋದೇ ನನಗೇ ದೊಡ್ಡ ವಿಷಯ ಆಗಿತ್ತು. ತುಂಬಾ ಟೆನ್ಷನ್ ಆಗಿತ್ತು, ಡೈಲಾಗ್ ಹೇಳೊದಕ್ಕೂ ಬರ್ತ ಇರ್ಲಿಲ್ಲ. ಆಗ ದರ್ಶನ್ ಸರ್ ನನ್ನ ಜೊತೆ ಮಾತನಾಡಿ, ಕಾಮ್ ಆಗುವ ಹಾಗೆ ಮಾಡಿ, ನೀನೇನು ವರಿ ಮಾಡಬೇಡಮ್ಮ, ನೀನು ಆಕ್ಟ್ ಮಾಡೋದರ ಕಡೆ ಗಮನ ಇಡು..

ಇನ್ನೇನು ಯೋಚನೆ ಮಾಡಬೇಡ. ಚೆನ್ನಾಗಿ ಆಕ್ಟ್ ಮಾಡು ಅಂತ ಹೇಳಿದ್ರು..” ಎಂದಿದ್ದಾರೆ ಸೋನಲ್. ಅಷ್ಟೇ ಅಲ್ಲದೆ, ಚಿತ್ರರಂಗದಲ್ಲಿ ಯಾರು ನಿಮ್ಮ ಇನ್ಸ್ಪಿರೇಷನ್ ಎಂದು ಪ್ರಶ್ನೆ ಕೇಳಿದ್ದು, ಅದಕ್ಕೆ ಉತ್ತರ ಕೊಟ್ಟಿರು ಸೋನಲ್ ಅವರು, “ನಾನು ದರ್ಶನ್ ಸರ್ ಅವರನ್ನ ನನ್ನ ಇನ್ಸ್ಪಿರೇಷನ್ ಆಗಿ ನೋಡುತ್ತೇನೆ. ಅವರನ್ನ ಅವರು ಹೇಗೆ ಕ್ಯಾರಿ ಮಾಡ್ತಾರೆ, ಎಲ್ಲರ ಜೊತೆ ಹೇಗಿರ್ತಾರೆ ಅನ್ನೋದು ನನಗೆ ತುಂಬಾ ಇಷ್ಟ. ಅಷ್ಟು ದೊಡ್ಡ ನಟ, ಇಡೀ ಕರ್ನಾಟಕ ಅವರ ಅಭಿಮಾನಿಗಳು ಆದರೆ ಎಷ್ಟು ಸಿಂಪಲ್ ಆಗಿರುತ್ತಾರೆ. ಅದು ನನಗೆ ಸ್ಪೂರ್ತಿ ಕೊಡುತ್ತದೆ..”ಎಂದು ದರ್ಶನ್ ಅವರ ಬಗ್ಗೆ ಹೇಳಿದ್ದಾರೆ ಸೋನಲ್.

Leave A Reply

Your email address will not be published.