Neer Dose Karnataka
Take a fresh look at your lifestyle.

T20 World Cup: ಭಾರತಕ್ಕೆ ಮತ್ತೊಂದು ಬಿಗ್ ಶಾಕ್: ಕೊನೆ ಕ್ಷಣದಲ್ಲಿ ಭಾರತ ತಂಡಕ್ಕೆ ಬಿಗ್ ಶಾಕ್ ಕೊಟ್ಟ ವಿರಾಟ್ ಕೊಹ್ಲಿ. ಏನು ಗೊತ್ತೇ??

ಭಾರತ ತಂಡಕ್ಕೆ ಒಂದಾದ ಮೇಲೆ ಮತ್ತೊಂದು ಆಘಾತಗಳು ಎದುರಾಗುತ್ತಲೇ ಇದೆ. ಮೊನ್ನೆಯಷ್ಟೇ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ನೆಟ್ಸ್ ನಲ್ಲಿ ಪ್ರಾಕ್ಟೀಸ್ ಮಾಡುವಾಗ ಗಾಯಗೊಂಡಿದ್ದರು. ರೋಹಿತ್ ಅವರ ಬೆರಳಿಗೆ ಗಾಯವಾಗಿತ್ತು. ಈಗ ನಮ್ಮ ಭಾರತ ತಂಡದ ಸ್ಟಾರ್ ಪ್ಲೇಯರ್ ವಿರಾಟ್ ಕೋಹ್ಲಿ ಅವರಿಗೆ ಗಾಯವಾಗಿದೆ. ನಾಳೆ ನಡೆಯಲಿರುವ ಭಾರತ ವರ್ಸಸ್ ಇಂಗ್ಲೆಂಡ್ ಪಂದ್ಯಕ್ಕಾಗಿ ನೆಟ್ಸ್ ನಲ್ಲಿ ಪ್ರಾಕ್ಟೀಸ್ ಮಾಡುವಾಗ, ವಿರಾಟ್ ಕೋಹ್ಲಿ ಅವರಿಗೆ ಇಂಜುರಿ ಆಗಿದೆ. ಇದು ಭಾರತ ತಂಡಕ್ಕೆ ಆಘಾತ ತರುವ ವಿಚಾರ ಆಗಿದೆ.

ವಿರಾಟ್ ಕೋಹ್ಲಿ ಅವರು ಅಡಿಲೇಡ್ ನಲ್ಲಿ, ಪ್ರಾಕ್ಟೀಸ್ ಮಾಡುವಾಗ, ಹರ್ಷಲ್ ಪಟೇಲ್ ಅವರು ಬೌಲಿಂಗ್ ಮಾಡುತ್ತಿದ್ದು, ಅವರು ವೇಗವಾಗಿ ಎಸೆದ ಬಾಲ್ ವಿರಾಟ್ ಅವರ ತೊಡೆ ಸಂದಿಗೆ ಬಡಿದು ಗಾಯವಾಗಿದೆ ಎಂದು ಮಾಹಿತಿ ಸಿಕ್ಕಿದೆ. ಬಹಳ ನೋವಿದ್ದ ಕಾರಣ, ವಿರಾಟ್ ಕೋಹ್ಲಿ ಅವರು ತಕ್ಷಣವೇ ಮೈದಾನ ಬಿಟ್ಟು ಹೊರನಡೆದಿದ್ದಾರಂತೆ. ವಿರಾಟ್ ಅವರಿಗೆ ಆಗಿರುವ ಗಾಯ ಬಹಳ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ವಿರಾಟ್ ಕೋಹ್ಲಿ ಅವರ ಆರೋಗ್ಯದ ಬಗ್ಗೆ ಬಿಸಿಸಿಐ ಇನ್ನು ರಿಪೋರ್ಟ್ ನೀಡಿಲ್ಲ, ಕ್ರಿಕೆಟ್ ಪ್ರಿಯರು ಮತ್ತು ಕ್ರಿಕೆಟ್ ತಜ್ಞರು ಎಲ್ಲರೂ ಸಹ, ಇದಕ್ಕಾಗಿ ಕಾಯುತ್ತಿದ್ದಾರೆ.

ಟಿ20 ವಿಶ್ವಕಪ್ ಪಂದ್ಯಗಳು ಅಂತಿಮ ಹಂತದಲ್ಲಿದ್ದಾಗ, ಕೋಹ್ಲಿ ಅವರಿಗೆ ಹೀಗಾಗಿರುವುದು ಭಾರತ ತಂಡಕ್ಕೆ ಭಾರಿ ಹಿನ್ನಡೆ ಆಗಿದೆ. ವಿಶ್ವಕಪ್ ನಲ್ಲಿ ಅತಿಹೆಚ್ಚು ರನ್ಸ್ ಗಳಿಸಿದ ಬ್ಯಾಟ್ಸ್ಮನ್ ಆಗಿದ್ದವರು ಕೋಹ್ಲಿ, ಇಂಥಹ ಆಟಗಾರನಿಗೆ ಈಗ ಹೀಗೆ ಆಗಿರುವುದು ಎಲ್ಲರ ಆತಂಕ ಹೆಚ್ಚಿಸಿದೆ. ಈ ಸೀಸನ್ ನಲ್ಲಿ ದಾಖಲೆಗಳನ್ನು ಬರೆದಿದ್ದ ಕೋಹ್ಲಿ ಅವರಿಗೆ ಈಗ ಇಂಜುರಿ ಆಗಿದೆ. ನಾಳಿನ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರು ಆಡುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಇನ್ನುಮುಂದೆ ಮಾಹಿತಿ ಸಿಗಬೇಕಿದೆ.

Comments are closed.