Neer Dose Karnataka
Take a fresh look at your lifestyle.

Biggboss Kannada: ಯಾರು ಊಹಿಸದ ರೀತಿ ಮನೆಯಿಂದ ಹೊರಬಂದ ದೀಪಿಕಾ ರವರಿಗೆ ಬಿಗ್ ಬಾಸ್ ಕೊಟ್ಟ ಸಂಭಾವನೆ ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ?

3,549

Biggboss Kannada: ಕನ್ನಡ ಕಿರುತೆರೆಯ ಬಹುಬೇಡಿಕೆಯ ಮತ್ತು ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟಿಯರಲ್ಲಿ ಒಬ್ಬರು ದೀಪಿಕಾ ದಾಸ್ (Deepika Das). ನಾಗಿಣಿ (Nagini) ಧಾರಾವಾಹಿಯಲ್ಲಿ ಇವರ ಅಭಿನಯ ಮರೆಯಲು ಅಸಾಧ್ಯ. ದೀಪಿಕಾ ಅವರು ನಾಗಿಣಿ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದ್ದರು. ದೀಪಿಕಾ ಧರಿಸುತ್ತಿದ್ದ ಕಾಸ್ಟ್ಯೂಮ್ ಗಳು ಅದಕ್ಕೆ ತಕ್ಕ ಆಭರಣಗಳು, ಓಲೆಗಳು ಎಲ್ಲವೂ ಬಹಳ ಸುಂದರವಾಗಿ ಇರುತ್ತಿದ್ದವು. ನಾಗಿಣಿ ಮಾತ್ರವಲ್ಲದೆ ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಪಾಲ್ಗೊಂಡ ದೀಪಿಕಾ ದಾಸ್ ಬಹಳ ಫೇಮಸ್ ಆಗಿದ್ದರು. ಈ ಶೋ ಮೂಲಕ ಅವರ ಡ್ಯಾನ್ಸ್ ಸ್ಕಿಲ್ಸ್ ಅನ್ನು ಸಹ ಪ್ರದರ್ಶಸಿ, ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿಕೊಂಡಿದ್ದರು.

ದೀಪಿಕಾ ದಾಸ್ ನಟನೆ ಜೊತೆಗೆ ಡ್ಯಾನ್ಸ್ ಕೂಡ ಚೆನ್ನಾಗಿ ಮಾಡಬಲ್ಲರು ಎನ್ನುವುದನ್ನು ಸಾಬೀತು ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ದೀಪಿಕಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಬಿಗ್ ಬಾಸ್ ಕನ್ನಡ ಸೀಸನ್ 7ರಲ್ಲಿ ಬಿಗ್ ಮನೆಗೆ ಸ್ಪರ್ಧಿಯಾಗಿ ಬಂದಿದ್ದ ದೀಪಿಕಾ ದಾಸ್, ಫಿನಾಲೆ ವರೆಗೂ ತಲುಪಿದ್ದರು. ಬಿಗ್ ಬಾಸ್ ಮನೆಯಲ್ಲಿ ಬಹಳ ಸ್ಟ್ರಿಕ್ಟ್ ಆಗಿ ಜೊತೆಗೆ ಸ್ವಲ್ಪ ಸ್ವೀಟ್ ಆಗಿಯೂ ಇರುತ್ತಿದ್ದರು. ತಮ್ಮಷ್ಟಕ್ಕೆ ತಾವು ಯಾರ ವಿಷಯಕ್ಕೂ ಹೋಗದೆ ಇರುತ್ತಿದ್ದ ದೀಪಿಕಾ ಅವರ ಸ್ವಭಾವ ವೀಕ್ಷಕರಿಗೆ ಬಹಳ ಇಷ್ಟವಾಗಿತ್ತು. ದೀಪಿಕಾ ದಾಸ್ ನಿಜ ಜೀವನದಲ್ಲಿ ಬಹಳ ಸೈಲೆಂಟ್ ಎಲ್ಲರ ಜೊತೆ ಸುಲಭವಾಗಿ ಬೆರೆಯುವುದಿಲ್ಲ ಅವರು ರಿಸರ್ವ್ಡ್.. ಇದನ್ನು ಓದಿ.. Kannada Astrology: ಕೊನೆಗೂ ಬಂತು 5 ರಾಶಿಗಳಿಗೆ ಅದೃಷ್ಟ: ಇನ್ನು ನಾಲ್ಕು ದಿನಗಳ ಬಳಿಕ ಈ ಎಲ್ಲ ರಾಶಿಗಳ ಕಷ್ಟ ಎಲ್ಲ ಮಾಯವಾಗಿ, ಸುಖ ಹಣ ನೆಮ್ಮದಿ ಸಿಗುತ್ತದೆ.

ಆದರೆ ಅಹಂಕಾರಿ ಅಲ್ಲ ಎನ್ನುವ ವಿಷಯ ಬಿಗ್ ಬಾಸ್ ಮೂಲಕ ಜನರಿಗೆ ಅರ್ಥವಾಯಿತು. ಬಿಗ್ ಬಾಸ್ ನಂತರ ದೀಪಿಕಾ ಅವರು ಇನ್ಯಾವುದೇ ಧಾರವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ಜಾಹೀರಾತುಗಳು, ಫೂಟೋಶೂಟ್ ಗಳು ಇವುಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ದೀಪಿಕಾ ದಾಸ್ ಅವರು ಬಿಬಿಕೆ9 ನಲ್ಲಿ ಮತ್ತೊಮ್ಮೆ ಬಂದು, 8 ವಾರಗಳ ಕಾಲ ಮನೆಯಲ್ಲಿದ್ದರು, ಆದರೆ 8ನೇ ವಾರ ಇವರು ಎಲಿಮಿನೇಟ್ ಆಗಿರುವುದು ಅಭಿಮಾನಿಗಳಿಗೆ ಶಾಕ್ ನೀಡಿದೆ. ಏಕೆಂದರೆ, ದೀಪಿಕಾ ದಾಸ್ ಅವರು ಬಹಳ ಸ್ಟ್ರಾಂಗ್ ಆದ ಸ್ಪರ್ಧಿಯಾಗಿದ್ದರು ಕೂಡ, ಅವರು ಮನೆಯಲ್ಲಿ ಇತರೆ ಸ್ಪರ್ಧಿಗಳ ಜೊತೆಗೆ ಹೆಚ್ಚು ಬೆರೆಯುತ್ತಿರಲಿಲ್ಲ. ಹಾಗೆಯೇ ಒಂಟಿಯಾಗಿ ಹೆಚ್ಚು ಸಮಯ ಇರುತ್ತಿದ್ದ ಕಾರಣ ಬಿಗ್ ಬಾಸ್ ಇಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಇವರಿಗೆ ಸಿಕ್ಕ ಸಂಭಾವನೆ ಬಗ್ಗೆ ಕೂಡ ಚರ್ಚೆಯಾಗುತ್ತಿದ್ದು, 9 ವಾರಕ್ಕೆ 9 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ದೀಪಿಕಾ ದಾಸ್. ಇದನ್ನು ಓದಿ..Darshan: ಮಾಧ್ಯಮಗಳು, ಬಹುತೇಕ ಯೌಟ್ಯೂಬ್ ಚಾನೆಲ್ ಗಳು, ನಟರು ದರ್ಶನ್ ಕೈ ಬಿಟ್ಟಿರುವಾಗ ದರ್ಶನ್ ರವರನ್ನು ಕಾಪಾಡಲು ಅವರೊಬ್ಬರಿಂದ ಮಾತ್ರ ಸದ್ಯ. ಯಾರು ಗೊತ್ತೇ??

Leave A Reply

Your email address will not be published.