Neer Dose Karnataka
Take a fresh look at your lifestyle.

Cricket News: ಪದೇ ಪದೇ ವಿಫಲವಾಗುತ್ತಿರುವ ರಾಹುಲ್, ಪ್ಯಾಂಟ್ ಬದಲಿಗೆ ಭಾರತಕ್ಕೆ ಈತನನ್ನು ಆಯ್ಕೆ ಮಾಡಿದರೆ ಬೆಸ್ಟ್ ಎನ್ನುತ್ತಿರುವ ಫ್ಯಾನ್ಸ್. ಆ ಟಾಪ್ ಆಟಗಾರ ಯಾರು ಗೊತ್ತೇ?

Cricket News: ಭಾರತ ತಂಡ ಟಿ20 ವಿಶ್ವಕಪ್ (T20 World Cup) ನಲ್ಲಿ ಸೋತ ನಂತರ ಹಲವು ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ವಿಶೇಷವಾಗಿ ಆರಂಭಿಕ ಬ್ಯಾಟ್ಸ್ಮನ್ ಗಳ ವಿಚಾರದಲ್ಲಿ ಬದಲಾವಣೆ ಆಗಲೇಬೇಕಿತ್ತು. ರೋಹಿತ್ ಶರ್ಮಾ (Rohit Sharma) ಅವರು ಓಪನರ್ ಆಗಿ ರನ್ಸ್ ಗಳಿಸುತ್ತಿಲ್ಲ, ಕೆ.ಎಲ್.ರಾಹುಲ್ ಅವರು ಕೂಡ ಸತತವಾಗಿ ವೈಫಲ್ಯ ಅನುಭವಿಸಿದ್ದಾರೆ. ವಿಶ್ವಕಪ್ ನಲ್ಲಿ ಕೆ.ಎಲ್.ರಾಹುಲ್ (K L Rahul) ಅವರು ಉತ್ತಮವಾಗಿ ಪ್ರದರ್ಶನ ನೀಡಿದ್ದು, ಒಂದೇ ಒಂದು ಪಂದ್ಯದಲ್ಲಿ ಮಾತ್ರ. ಇನ್ನೆಲ್ಲಾ ಪಂದ್ಯಗಳಲ್ಲು ವೈಫಲ್ಯವನ್ನೇ ಅನುಭವಿಸಿದ್ದಾರೆ..

ಹಾಗಾಗಿ ಓಪನರ್ ಸ್ಥಾನದಲ್ಲಿ ಬದಲಾವಣೆ ಆಗಲೇಬೇಕು ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದೇ ರೀತಿ ನ್ಯೂಜಿಲೆಂಡ್ ಸೀರೀಸ್ ನಲ್ಲಿ ಹಿರಿಯ ಆಟಗಾರರು ಇಲ್ಲದ ಕಾರಣ, ರಿಷಬ್ ಪಂತ್ (Rishab Pant) ಮತ್ತು ಇಶಾನ್ ಕಿಶನ್ (Ishan Kishan) ಅವರನ್ನು ಆರಂಭಿಕ ಆಟಗಾರನಾಗಿ ಕಳಿಸಲಾಯಿತು. ಆದರೆ ರಿಷಬ್ ಪಂತ್ ಅವರು ತಮಗೆ ಕೊಟ್ಟ ಅವಕಾಶವನ್ನು ಉಳಿಸಿಕೊಳ್ಳಲಿಲ್ಲ. ರಿಷಬ್ ಪಂತ್ ಅವರಿಗೆ ಭಾರತ ತಂಡ ಪದೇ ಪದೇ ಅವಕಾಶ ಕೊಡುತ್ತಿದ್ದರು ಕೂಡ ಅವರು ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ನಿನ್ನೆಯ ಪಂದ್ಯದಲ್ಲಿ ಸಹ, ರಿಷಬ್ ಅವರು 13 ಎಸೆತಗಳನ್ನು ಎದುರಿಸಿ, ಕೇವಲ 6 ರನ್ ಗಳಿಸಿ ಹೀನಾಯವಾಗಿ ಔಟ್ ಆದರು. ಇದನ್ನು ಓದಿ.. Cricket News: ನ್ಯೂಜಿಲೆಂಡ್ ವಿರುದ್ಧ ಗೆದ್ದು ಬೀಗುತ್ತಿದ್ದಂತೆ ಭಾರತ ತಂಡದ ಮುಂದೆ ಹೊಸ ಬೇಡಿಕೆ ಇಟ್ಟ ಹಾರ್ಧಿಕ್ ಪಾಂಡ್ಯ. ಒಂದೇ ಗೆಲುವಿಗೆ ಬೇಡಿಕೆನಾ??

ಇದರಿಂದ ನೆಟ್ಟಿಗರು ನಿರಾಶೆಗೆ ಒಳಗಾಗಿದ್ದು, ಆರಂಭಿಕ ಆಟಗಾರರನ್ನು ಬದಲಾಯಿಸಬೇಕು ಎನ್ನುತ್ತಿದ್ದಾರೆ. ಶುಭಮನ್ ಗಿಲ್ (Shubman Gill), ಸಂಜು ಸ್ಯಾಮ್ಸನ್ (Sanju Samson) ಅವರಂತಹ ಆಟಗಾರರು ತಂಡದಲ್ಲಿ ಇರುವಾಗ, ರಿಷಬ್ ಪಂತ್ ಅವರನ್ನು ಓಪನರ್ ಆಗಿ ಕಳಿಸುವ ಅವಶ್ಯಕತೆ ಏನಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ ನೆಟ್ಟಿಗರು. ಹಲವು ಟ್ವೀಟ್ ಗಳು ಇದೇ ವಿಷಯದಲ್ಲಿ ನಡೆಯುತ್ತಿದ್ದು, ಮುಂದಿನ ಪಂದ್ಯದಲ್ಲಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಬಿಸಿಸಿಐ (BCCI) ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಬರೋಬ್ಬರಿ 8 ವರ್ಷಗಳಿಂದ ಪ್ರೀತಿ ಮಾಡಿ ಮದುವೆಗೆ ಕೆಲವೇ ದಿನಗಳು ಇರುವಾಗ ನಡೆಯಿತು ಊಹಿಸದ ಘಟನೆ. ಕೊನೆಗೆ ಏನಾಯಿತು ಗೊತ್ತೇ?

Comments are closed.