Neer Dose Karnataka
Take a fresh look at your lifestyle.

Kannada News: ಮೊದಲ ಧಾರಾವಾಹಿಯಲ್ಲಿಯೇ ಎಲ್ಲರ ಮನ ಕದ್ದಿರುವ ಒಲವಿನ ನಿಲ್ದಾಣದ ಬೆಡಗಿ ಯಾರು ಗೊತ್ತೇ?? ಬ್ಯಾಕ್ ಗ್ರೌಂಡ್ ಏನು ಗೊತ್ತೇ??

Kannada News: ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಇತ್ತೀಚಿನ ದಿನಗಳಲ್ಲಿ ಶುರುವಾಗಿ, ಜನರಿಗೆ ಬಹಳ ಇಷ್ಟವಾಗಿರುವ ಧಾರವಾಹಿಗಳಲ್ಲಿ ಒಲವಿನ ನಿಲ್ದಾಣ ಕೂಡ ಒಂದು. ಈ ಧಾರವಾಹಿಯಲ್ಲಿ ವಿಶೇಷವಾಗಿ ನಾಯಕಿ ತಾರಿಣಿ ಪಾತ್ರ ಕಿರುತೆರೆ ವೀಕ್ಷಕರಿಗೆ ಬಹಳ ಇಷ್ಟವಾಗಿದೆ. ಧಾರವಾಹಿಯಲ್ಲಿ ತಾರಿಣಿಯ ಪಾತ್ರದ ಸ್ವಭಾವ, ಒಳ್ಳೆಯತನ, ಮನೆಯವರ ಮೇಲೆ ಆಕೆಗೆ ಇರುವ ಗೌರವ, ಸಿದ್ಧಾಂತ್ ಮೇಲೆ ಇರುವ ಪ್ರೀತಿ, ಇದೆಲ್ಲವನ್ನು ಜನರು ಬಹಳ ಇಷ್ಟಪಟ್ಟಿದ್ದಾರೆ. ಇದೆಲ್ಲವೂ ಧಾರವಾಹಿ ಬಗ್ಗೆ ಆದರೆ, ನಿಜ ಜೀವನದಲ್ಲಿ ತಾರಿಣಿ ಹೇಗಿದ್ದಾರೆ ಗೊತ್ತಾ?

ತಾರಿಣಿ ಪಾತ್ರದಲ್ಲಿ ಪಕ್ಕಾ ಹೋಮ್ಲಿ ಹುಡುಗಿ ಆಗಿ ಕಾಣಿಸುವ ತಾರಿಣಿ ಅವರ ನಿಜವಾದ ಹೆಸರು ಅಮಿತಾ ಕುಲಾಲ್ (Amitha Kulal). ಇವರು ಮೂಲತಃ ಮಂಗಳೂರಿನವರು. ಕರಾವಳಿ ಬೆಡಗಿ ಆಗಿರುವ ಅಮಿತಾ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಮಾಡೆಲಿಂಗ್ ನಲ್ಲಿ ಬಹಳ ಆಸಕ್ತಿ ಇತ್ತಂತೆ. ಅದೇ ರೀತಿ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು. ಮೊದಲಿಗೆ ಇವರು ನಟಿಸಿದ್ದು ಸಿನಿಮಾದಲ್ಲಿ, ಸೃಜನ್ ಲೋಕೇಶ್ ಅವರೊಡನೆ ಹ್ಯಾಪಿ ಜರ್ನಿ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಅಮಿತಾ, ನಂತರ ಗಿಫ್ಟ್ ಬಾಕ್ಸ್ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಅದಾದ ಬಳಿಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ ಅಮಿತಾ ಕುಲಾಲ್. ಇದನ್ನು ಓದಿ.. Kannada Astrology: ಹನುಮಂತನೇ ನಿಮ್ಮನ್ನು ಕಾದು, ಎಲ್ಲ ಕಷ್ಟಗಳನ್ನು ನಿವಾರಣೆ ಮಾಡಬೇಕು ಎಂದರೆ ಈ ಎಲೆಯಿಂದ ಈ ಚಿಕ್ಕ ಕೆಲಸ ಮಾಡಿ ಸಾಕು.

ಕನ್ನಡದಲ್ಲಿ ಮಾತ್ರವಲ್ಲದೆ, ತೆಲುಗಿನಲ್ಲಿ ರೌಡಿಗಾರಿ ಪೆಲ್ಲಾಮ್ ಎನ್ನುವ ಧಾರವಾಹಿಯಲ್ಲಿ ಸಹ ನಟಿಸಿದ್ದಾರೆ. ಇವರಿಗೆ ಮಂಗಳೂರು ಕನ್ನಡ ಮಾತ್ರ ಬರುತ್ತಿದ್ದ ಕಾರಣ ಕೆಲವು ಸಾರಿ ಅವಕಾಶ ಕಳೆದುಕೊಂಡಿದ್ದಾರಂತೆ ಅಮಿತಾ, ಅದರ ಬಗ್ಗೆ ಅವರಿಗೆ ಸ್ವಲ್ಪ ಬೇಸರ ಕೂಡ ಇದೆ, ಆದರೆ ಈಗ ಒಲವಿನ ನಿಲ್ದಾಣ ಧಾರವಾಹಿ ಮೂಲಕ ಒಳ್ಳೆಯ ಅವಕಾಶ ಪಡೆದು, ಜನರಿಗೆ ಇಷ್ಟ ಆಗಿರುವ ಬಗ್ಗೆ ಇವರಿಗೆ ಸಂತೋಷ ಇದೆ..ಅಮಿತಾ ಅವರ ವಿದ್ಯಾಭ್ಯಾಸದ ಬಗ್ಗೆ ಹೇಳುವುದಾದರೆ, ಇವರು ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದಿದ್ದಾರೆ. ಮುಂಬೈ ನಲ್ಲಿ ಹಲವು ಶೋಗಳಲ್ಲಿ ಮಾಡೆಲಿಂಗ್ ಮಾಡಿರುವ ಇವರು ಒಂದು ಕನ್ನಡ ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಇದನ್ನು ಓದಿ.. Kannada News: ಬಿಗ್ ನ್ಯೂಸ್: ಕೊನೆ ಕ್ಷಣದಲ್ಲಿ ಟ್ವಿಸ್ಟ್ ಕೊಟ್ಟ ಹರಿಪ್ರಿಯಾ-ವಸಿಷ್ಠ. ಮದುವೆ ಬಗ್ಗೆ ಷಾಕಿಂಗ್ ಟ್ವಿಸ್ಟ್. ಏನು ಗೊತ್ತೇ??

Comments are closed.