Neer Dose Karnataka
Take a fresh look at your lifestyle.

Kannada News: ಪ್ರೇಮ್ ಮಗಳು ಪಾದಾರ್ಪಣೆ ಮಾಡಿದ್ದು ಇರಲಿ, ಮೊದಲ ಸಿನೆಮಾಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??

1,570

Kannada News: ಕನ್ನಡ ಚಿತ್ರರಂಗದಲ್ಲಿ ಈಗ ತಲೆಮಾರಿನ ಹವಾ ಶುರುವಾಗಿದೆ ಎಂದು ಹೇಳಬಹುದು. ನಟನಟಿಯರ ಮಕ್ಕಳು ಈಗ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇತ್ತೀಚೆಗೆ ನಟಿ ಮಾಲಾಶ್ರೀ (Malashree) ಅವರ ಮಗಳು ನಟ ದರ್ಶನ್ (Darshan) ಅವರಿಗೆ ನಾಯಕಿಯಾಗಿ, ಆ ಸಿನಿಮಾವನ್ನು ತರುಣ್ ಸುಧೀರ್ (Tarun Sudhir) ಅವರು ನಿರ್ದೇಶನ ಮಾಡುತ್ತಿದ್ದು, ಸಿನಿಮಾ ಮುಹೂರ್ತ ಕೂಡ ನೆರವೇರಿತು. ಅದರ ಬೆನ್ನಲ್ಲೇ ಈಗ ಚಂದನವನದ ಖ್ಯಾತ ನಟ ನೆನಪಿರಲಿ ಪ್ರೇಮ್ (Nenapirali Prem) ಅವರ ಮಗಳು ಅಮೃತಾ (Amruthe Prem) ಕೂಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಅಮೃತಾ ಪ್ರೇಮ್ ಅವರು ನಾಯಕಿಯಾಗಿ ಎಂಟ್ರಿ ಕೊಡುತ್ತಿರುವ ಸಿನಿಮಾ ಮುಹೂರ್ತ ನಿನ್ನೆಯಷ್ಟೇ ನಡೆದಿದೆ. ಪಕ್ಕಾ ಹಳ್ಳಿ ಸೊಗಡಿನ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಮೃತಾ ಪ್ರೇಮ್. ಅಮೃತಾ ಪ್ರೇಮ್ ಅವರನ್ನು ನಾಯಕಿಯಾಗಿ ಪರಿಚಯ ಮಾಡುತ್ತಿರುವುದು ನಮ್ಮ ಚಂದನವನದ ಡಾಲಿ ಧನಂಜಯ್ (Daali Dhananjay) ಅವರು, ಇವರು ತಮ್ಮ ಸಂಸ್ಥೆಯ ಮೂಲಕ ನಿರ್ಮಾಣ ಮಾಡುತ್ತಿರುವ ಮೂರನೇ ಸಿನಿಮಾ, ಟಗರು ಪಲ್ಯ (Tagaru Palya) ಮೂಲಕ ಅಮೃತಾ ಅವರನ್ನು ಪರಿಚಯ ಮಾಡುತ್ತಿದ್ದಾರೆ. ಈ ಸಿನಿಮಾಗೆ ಇಕ್ಕಟ್ (Ikkat) ಸಿನಿಮಾ ಖ್ಯಾತಿಯ ನಟ ನಾಗಭೂಷಣ್ (Nagabhushan) ನಾಯಕನಾಗಿದ್ದಾರೆ. ಇದನ್ನು ಓದಿ..Kannada News: ಮೊದಲ ಧಾರಾವಾಹಿಯಲ್ಲಿಯೇ ಎಲ್ಲರ ಮನ ಕದ್ದಿರುವ ಒಲವಿನ ನಿಲ್ದಾಣದ ಬೆಡಗಿ ಯಾರು ಗೊತ್ತೇ?? ಬ್ಯಾಕ್ ಗ್ರೌಂಡ್ ಏನು ಗೊತ್ತೇ??

ಸಿನಿಮಾದ ಮುಹೂರ್ತ ನಿನ್ನೆಯಷ್ಟೇ ದೇವಸ್ಥಾನದಲ್ಲಿ ನೆರವೇರಿದೆ. ಪದವಿ ಫೈನಲ್ ಇಯರ್ ನಲ್ಲಿರುವ ಪ್ರೇಮ್ ಅವರ ಮಗಳು ಈಗ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಸಿನಿಮಾದ ಕಥೆ, ಹಳ್ಳಿ ಹುಡುಗಿಯ ಪಾತ್ರ ಬಹಳ ಇಷ್ಟವಾದ ಕಾರಣ ಒಪ್ಪಿಕೊಂಡಿದ್ದಾರಂತೆ ಅಮೃತಾ. ಇವರನ್ನು ನೋಡಿದ ಸಿನಿಪ್ರಿಯರು ಕೂಡ, ಅಪ್ಪಟ ಕನ್ನಡದ ಹುಡುಗಿ ಬಹಳ ಚೆನ್ನಾಗಿ ಕನ್ನಡ ಮಾತಾಡ್ತಾರೆ, ನಮ್ಮ ಪ್ರತಿಭೆಗಳಿಗೆ ಅವಕಾಶ ಕೊಡಿ, ಪರಭಾಷೆಯವರನ್ನು ಕರೆತರಬೇಡಿ ಎಂದು ಹೇಳುತ್ತಿದ್ದಾರೆ. ಇನ್ನು ಮೊದಲ ಸಿನಿಮಾ ಬಗ್ಗೆ ಬಹಳ ಉತ್ಸಾಹದಿಂದ ಇರುವ ಅಮೃತಾ ಪ್ರೇಮ್ ಅವರು ಪಡೆಯುತ್ತಿರುವ ಸಂಭಾವನೆ ಎಷ್ಟು ಎನ್ನುವ ಬಗ್ಗೆ ಈಗ ಚರ್ಚೆ ಶುರುವಾಗಿದ್ದು, ಇವರಿಗೆ 3 ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ.. Kannada News: ಬಿಗ್ ನ್ಯೂಸ್: ಕೊನೆ ಕ್ಷಣದಲ್ಲಿ ಟ್ವಿಸ್ಟ್ ಕೊಟ್ಟ ಹರಿಪ್ರಿಯಾ-ವಸಿಷ್ಠ. ಮದುವೆ ಬಗ್ಗೆ ಷಾಕಿಂಗ್ ಟ್ವಿಸ್ಟ್. ಏನು ಗೊತ್ತೇ??

Leave A Reply

Your email address will not be published.