Neer Dose Karnataka
Take a fresh look at your lifestyle.

Lakshana: ಲಕ್ಷಣ ದಲ್ಲಿ ಭಾರ್ಗವಿಗೆ ಅಣ್ಣನ ಮೇಲೆಯೇ ಕೋಪ ಯಾಕೆ ಗೊತ್ತೇ?? ದೊಡ್ಡ ಟ್ವಿಸ್ಟ್. ಯಾಕೆ ಗೊತ್ತೇ??

19,297

Kannada News: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಧಾರವಾಹಿಗಳಲ್ಲಿ ಒಂದು ಲಕ್ಷಣ, ಈ ಧಾರವಾಹಿಯಲ್ಲಿ ದಿನದಿಂದ ದಿನಕ್ಕೆ ರೋಚಕತೆ ಹೆಚ್ಚಾಗುತ್ತಿದೆ. ಕಿರುತೆರೆ ಪ್ರಿಯರು ಬಹಳ ಆಸಕ್ತಿಯಿಂದ ಧಾರವಾಹಿಯನ್ನು ನೋಡುತ್ತಿದ್ದಾರೆ. ಈ ಧಾರವಾಹಿಯಲ್ಲಿ ಚಂದ್ರಶೇಖರ್ ತಂಗಿ ಭಾರ್ಗವಿಯೇ ವಿಲ್ಲನ್ ಡೇರ್ ಡೆವಿಲ್ ಎಂದು ಇನ್ನು ಯಾರಿಗೂ ಗೊತ್ತಾಗಿಲ್ಲ. ಡೇರ್ ಡೆವಿಲ್ ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನದಲ್ಲಿ ಚಂದ್ರಶೇಕರ್ ಇದ್ದಾನೆ.

ಡೇರ್ ಡೆವಿಲ್ ಒಂದು ಪ್ಲಾನ್ ಮಾಡಿದ್ದಳು, ಚಂದ್ರಶೇಖರ್ ಕೈಯಲ್ಲಿ ಮೌರ್ಯನ ಕೊಲೆ ಆಗ್ಬೇಕು, ಅದರಿಂದ ಚಂದ್ರಶೇಖರ್ ಜೈಲಿಗೆ ಹೋಗುತ್ತಾನೆ. ಅದನ್ನೇ ಇಟ್ಟುಕೊಂಡು ನಕ್ಷತ್ರಳನ್ನು ಮುಗಿಸಬೇಕು ಎಂದುಕೊಂಡಿದ್ದಳು. ಆದರೆ ನಡೆದಿರುವುದೇ ಬೇರೆ ಆಗಿದೆ. ಡೆವಿಲ್ ಕಡೆಯವರು ಮೌರ್ಯನನ್ನು ಕೊಲ್ಲಲು ಬಂದಾಗ, ನಕ್ಷತ್ರ ಕಾಪಾಡುತ್ತಾಳೆ. ಚಂದ್ರಶೇಖರ್ ಮೌರ್ಯನನ್ನು ಸಾಯಿಸುವ ಹಾಗೆ ತೋರಿಸಿದರು ಕೂಡ, ಚಂದ್ರಶೇಕರ್ ಮೌರ್ಯನನ್ನು ಸಾಯಿಸಿರುವುದಿಲ್ಲ. ಇದನ್ನು ಓದಿ..Kannada News: ಯಾರು ಸಹಾಯ ಮಾಡದಿದ್ದರೆ ಏನಂತೆ, ಏಕಾಂಗಿಯಾಗಿ ಎದ್ದು ನಿಂತ ರವಿ ಚಂದ್ರನ್, ಕುಲಾಯಿಸಿದ ಅದೃಷ್ಟ ಏನು ಗೊತ್ತೇ?

ಮೌರ್ಯನನ್ನು ಸಾಯಿಸಿರುವ ಹಾಗೆ ನಾಟಕ ಮಾಡಿ, ಅದರ ಮೂಲಕ ಡೆವಿಲ್ ಅಂದುಕೊಂಡಿದ್ದ ಹಾಗೆ ಪೊಲೀಸರು, ಚಂದ್ರಶೇಖರ್ ಅವರನ್ನು ನಾಟಕದ ರೀತಿಯಲ್ಲೇ ಅರೆಸ್ಟ್ ಮಾಡುತ್ತಾರೆ. ಚಂದ್ರಶೇಖರ್ ಅರೆಸ್ಟ್ ಆದ ವಿಷಯ ನ್ಯೂಸ್ ಪೇಪರ್ ನಲ್ಲಿ ಬರಬೇಕು ಎಂದು ಎಡಿಟರ್ ಗೆ ಹೇಳಿರುತ್ತಾಳೆ ಡೇರ್ ಡೆವಿಲ್. ಅದೇ ರೀತಿ ಆ ವಿಷಯ ನ್ಯೂಸ್ ಪೇಪರ್ ನಲ್ಲಿ ಬರುವ ಹಾಗೆ ಚಂದ್ರಶೇಖರ್ ಮತ್ತು ಪೊಲೀಸರು ಸೇರಿ ಮಾಡುತ್ತಾರೆ.

ಇದರಿಂದ ಡೇರ್ ಡೆವಿಲ್ ಭಾರ್ಗವಿ ತಾನು ಅಂದುಕೊಂಡ ಹಾಗೆಯೇ ಎಲ್ಲವೂ ನಡೆಯುತ್ತಿದೆ ಎಂದು ನಂಬುತ್ತಾಳೆ. ಪೊಲೀಸರು ಎಡಿಟರ್ ಗೆ ಹೇಳಿ, ತನಗೆ ಹಣ ಕೊಡಲು ಡೆವಿಲ್ ಗೆ ಕೇಳಿದಾಗ, ತಾನೇ ಬಂದು ಹಣ ಕೊಡುವುದಾಗಿ ಹೇಳುತ್ತಾಳೆ ಭಾರ್ಗವಿ. ಅದೇ ರೀತಿ ಎಡಿಟರ್ ನ ಮೀಟ್ ಮಾಡಲು ಭಾರ್ಗವಿ ಬರುತ್ತಿದ್ದಾಳೆ. ಇತ್ತ, ಡೇರ್ ಡೆವಿಲ್ ಯಾರು ಎಂದು ತಿಳಿದುಕೊಳ್ಳಲು, ಪೊಲೀಸರು, ಚಂದ್ರಶೇಖರ್, ನಕ್ಷತ್ರ ಮತ್ತು ಭೂಪತಿ ಅಲ್ಲಿಯೇ ನಿಂತಿದ್ದಾರೆ. ಇದನ್ನು ಓದಿ..Kannada News: ಕನ್ನಡ ಚಿತ್ರರಂಗದಲ್ಲಿ ನಟರ ನಡುವೆ ನಡೆಯುತ್ತಿರುವ ವಾರ್ ಗೆ ನೇರವಾಗಿ ಕಾರಣ ಹೇಳಿದ ದರ್ಶನ್, ಈ ಬಾರಿ ಕೆಣಕಿದ್ದು ಯಾರನ್ನು ಗೊತ್ತೇ?

ಮತ್ತೊಂದು ಕಡೆ ಇದೆಲ್ಲವೂ ಡ್ರಾಮಾ ಎಂದು, ಡೆವಿಲ್ ಅನ್ನು ಹಿಡಿಯಲು ಮಾಡಿರುವ ಟ್ರಾಪ್ ಎಂದು ಡೆವಿಲ್ ಮಗಳು ಮಿಲಿಗೆ ಗೊತ್ತಾಗಿದೆ. ನಕ್ಷತ್ರ ತನ್ನ ತಾಯಿಯ ಜೊತೆಗೆ ಈ ವಿಷಯ ಹೇಳುವಾಗ, ಮಿಲಿ ಅದನ್ನು ಕೇಳಿಸಿಕೊಂಡಿದ್ದಾಳೆ. ತಕ್ಷಣವೇ ತನ್ನ ತಾಯಿಗೆ ಈ ವಿಷಯ ಹೇಳಲು ಕಾಲ್ ಮಾಡಲು ಹೋದಾಗ, ಫೋನ್ ಕೆಳಗೆ ಬಿದ್ದು ಹಾಳಾಗುತ್ತದೆ, ಇದರಿಂದಾಗಿ ಮಿಲಿ ಫೋನ್ ಮಾಡಿ ಹೇಳಲು ಆಗುವುದಿಲ್ಲ.

ಈಗ ಡೇರ್ ಡೆವಿಲ್ ಎಡಿಟರ್ ಆಫೀಸ್ ಗೆ ಬರುತ್ತಿರುವುದು ಅವರಿಗೆ ಹಣ ಕೊಡೋದಕ್ಕೆ ಅಲ್ಲ, ಬದಲಾಗಿ ಅವರ ಕೊಲೆ ಮಾಡೋದಕ್ಕೆ..ಅಲ್ಲಿಗೆ ಬಂದಾಗ ಡೆವಿಲ್ ಯಾರು ಎನ್ನುವ ವಿಷಯ ಎಲ್ಲರಿಗು ಗೊತ್ತಾಗುತ್ತಾ ಎನ್ನುವ ಕುತೂಹಲ ವೀಕ್ಷಕರಲ್ಲಿದೆ. ಜೊತೆಗೆ ಡೆವಿಲ್ ಗೆ ಅಣ್ಣನ ಮೇಲೆ ಯಾಕಿಷ್ಟು ಕೋಪ ಎನ್ನುವುದಕ್ಕೆ ಉತ್ತರ ಕೂಡ ಇದೆ, ಭಾರ್ಗವಿಯ ಗಂಡನಿಗೆ ತೊಂದರೆ ಆಗಿರುವುದು ತನ್ನ ಅಣ್ಣನಿಂದಲೇ ಎಂದುಕೊಂಡಿದ್ದು, ಆಸ್ತಿ ವಿಷಯದಲ್ಲಿ ಅಣ್ಣ ಮೋಸ ಮಾಡುತ್ತಿದ್ದಾನೆ ಎಂದುಕೊಂಡು ಅಣ್ಣನ ಮೇಲೆ ಕೋಪ ಮಾಡಿಕೊಂಡಿದ್ದಾಳೆ. ಇದನ್ನು ಓದಿ.. Kannada News: ದೈವದ ಕಡೆಯಿಂದ ರಿಷಬ್ ಶೆಟ್ಟಿ ಗೆ ಬಂತು ಎಚ್ಚರಿಕೆ; ಯಾಕೆ ಗೊತ್ತೇ? ಎಲ್ಲವೂ ಸುಸೂತ್ರವಾಗಿ ಇದ್ದಾಗ ರಿಷಬ್ ಮಾಡಿದ್ದೇನು ಗೊತ್ತೇ??

Leave A Reply

Your email address will not be published.