Neer Dose Karnataka
Take a fresh look at your lifestyle.

Kannada News: ಯಾರು ಏನೇ ಅರುಚಿದರೂ ಆಕೆಯೇ ನಂಬರ್ 1: ಕನ್ನಡದ ಟಾಪ್ 5 ಜನಪ್ರಿಯ ನಟಿಯರು ಯಾರ್ಯಾರು ಗೊತ್ತೇ?

Kannada News: 2022ರ ವರ್ಷ ಮುಗಿಯಲು ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿದೆ. ಈ ವರ್ಷ ಕನ್ನಡ ಚಿತ್ರರಂಗದ ಪಾಲಿಗೆ ಸುವರ್ಣ ವರ್ಷ ಆಗಿತ್ತು ಎಂದು ಹೇಳಬಹುದು. ಏಕೆಂದರೆ ನಮ್ಮ ಕನ್ನಡ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ನಮ್ಮ ಇಂಡಸ್ಟ್ರಿ ಹೀರೋಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ನಮ್ಮ ಇಂಡಸ್ಟ್ರಿಯ ನಾಯಕಿಯರೇನು ಕಡಿಮೆ ಇಲ್ಲ, ಅವರು ಕೂಡ ಟಾಪ್ ರೇಂಜ್ ನಲ್ಲಿದ್ದಾರೆ. ಹೊಸ ವರ್ಷ ಶುರು ಆಗುವುದಕ್ಕಿಂತ ಮೊದಲು, ನವೆಂಬರ್ ತಿಂಗಳಿನಲ್ಲಿ ಟಾಪ್ 5 ಸ್ಥಾನದಲ್ಲಿ ಇರುವ ಕನ್ನಡ ನಟಿಯರು ಯಾರ್ಯಾರು ಎಂದು ಓರ್ಮ್ಯಾಕ್ಸ್ ಸಂಸ್ಥೆ ಬಿಡುಗಡೆ ಮಾಡಿದ್ದು, ಟಾಪ್ 5 ನಾಯಕಿಯರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..

ಶ್ರೀನಿಧಿ ಶೆಟ್ಟಿ :- ಐದನೇ ಸ್ಥಾನದಲ್ಲಿ ಇರುವವರು ಶ್ರೀನಿಧಿ ಶೆಟ್ಟಿ. ಮೊದಲ ಸಿನಿಮಾದಲ್ಲೇ ಪ್ಯಾನ್ ಇಂಡಿಯಾ ನಟಿಯಾಗಿ ಗುರುತಿಸಿಕೊಂಡು, ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದರು ಶ್ರೀನಿಧಿ ಶೆಟ್ಟಿ. ಕೆಜಿಎಫ್ ಮತ್ತು ಕೆಜಿಎಫ್2 ಸಿನಿಮಾಗಳು ಇವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು, ಬಳಿಕ ತಮಿಳಿನ ಕೋಬ್ರಾ ಸಿನಿಮಾದಲ್ಲಿ ನಟಿಸಿದರು. ಶ್ರೀನಿಧಿ ಶೆಟ್ಟಿ ಅವರು ಟಾಪ್ 5ನೇ ಸ್ತಾನದಲ್ಲಿದ್ದಾರೆ.
ರಾಧಿಕಾ ಪಂಡಿತ್ :- ಸ್ಯಾಂಡಲ್ ವುಡ್ ಸಿಂಡ್ರೆಲಾ ಎಂದು ಹೆಸರು ಪಡೆದಿದ್ದ ರಾಧಿಕಾ ಪಂಡಿತ್ ಅವರು ನಟಿಸಿ ಕೆಲವು ವರ್ಷಗಳು ಕಳೆದಿವೆ. ಇವರು ಮದುವೆಯಾದ ನಂತರ ನಟಿಸಿದ್ದು ಒಂದೇ ಒಂದು ಸಿನಿಮಾದಲ್ಲಿ. ಆದರೆ ಈಗಲೂ ಇವರಿಗೆ ಇರುವ ಪಾಪ್ಯುಲಾರಿಟಿ ಮಾತ್ರ ಕಡಿಮೆ ಆಗಿಲ್ಲ. ಮಕ್ಕಳ ಜೊತೆ ಬ್ಯುಸಿ ಆಗಿರುವ ರಾಧಿಕಾ ಅವರು, ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್, ಇವರು ಟಾಪ್ 4ನೇ ಸ್ತಾನದಲ್ಲಿದ್ದಾರೆ. ಇದನ್ನು ಓದಿ..Lakshana: ಲಕ್ಷಣದಲ್ಲಿ ಅಸಲಿ ಆಟ ಈಗ ಶುರು, ಡೆವಿಲ್ ಗಿಂತ ದೊಡ್ಡ ವಿಲ್ಲನ್ ಎಂಟ್ರಿ. ಯಾರು ಗೊತ್ತೇ??

ರಚಿತಾ ರಾಮ್ :- ಮಾಸ್ ಹುಡುಗಿ ರಚಿತಾ ರಾಮ್ ಮೂರನೇ ಸ್ಥಾನದಲ್ಲಿದ್ದಾರೆ. ಇವರು ನಟಿಯಾಗಿ ಚಿತ್ರರಂಗಕ್ಕೆ ಬಂದು, 10 ವರ್ಷ ಈಗಷ್ಟೇ ಪೂರೈಸಿದೆ. ರಚಿತಾ ರಾಮ್ ಅವರು ಕನ್ನಡದ ಬ್ಯುಸಿಯೆಸ್ಟ್ ನಟಿಯರಲ್ಲಿ ಒಬ್ಬರು. ಇದೀಗ ರಚಿತಾ ರಾಮ್ ಅವರು, ಕನ್ನಡದ ಮೋಸ್ಟ್ ಪಾಪ್ಯುಲರ್ ನಟಿಯರ ಲಿಸ್ಟ್ ನಲ್ಲಿ 3ನೇ ಸ್ಥಾನದಲ್ಲಿದ್ದಾರೆ.
ರಮ್ಯಾ :- ಬಹುತೇಕ ಎರಡು ದಶಕದಿಂದ ಚಿತ್ರರಂಗದಲ್ಲಿರುವ ರಮ್ಯಾ ಅವರು, ಸ್ಯಾಂಡಲ್ ವುಡ್ ಕ್ವೀನ್ ಎಂದೇ ಖ್ಯಾತಿಯಾಗಿದ್ದಾರೆ. ಇಂದಿಗೂ ರಮ್ಯಾ ಅವರಿಗೆ ಇರುವ ಕ್ರೇಜ್ ಮತ್ತೊಬ್ಬ ನಟಿಗೆ ಇಲ್ಲ ಎಂದು ಹೇಳಬೇಕು. ಈಗ ರಮ್ಯಾ ಅವರು ಉತ್ತರಕಾಂಡ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ರಮ್ಯಾ ಅವರು ಮೋಸ್ಟ್ ಪಾಪ್ಯುಲರ್ ಕನ್ನಡ ನಟಿಯರ ಲಿಸ್ಟ್ ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ರಶ್ಮಿಕಾ ಮಂದಣ್ಣ :- ರಶ್ಮಿಕಾ ಮಂದಣ್ಣ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟಿ. ಪುಷ್ಪ ಸಿನಿಮಾ ಮೂಲಕ ಇವರಿಗೆ ಬಾಲಿವುಡ್ ನಲ್ಲಿ ಕೂಡ ಬೇಡಿಕೆ ಹೆಚ್ಚಾಯಿತು. ಕನ್ನಡದಲ್ಲಿ ಅತಿಹೆಚ್ಚು ಟ್ರೋಲ್ ಆಗುವ ನಟಿ ಕೂಡ ಇವರೇ ಎಂದು ಹೇಳಬಹುದು. ಇದೀಗ ಎಲ್ಲಾ ಭಾಷೆಗಳಲ್ಲಿ ಸದ್ದು ಮಾಡುತ್ತಿರುವ ರಶ್ಮಿಕಾ ಅವರು ಕನ್ನಡದ ಮೋಸ್ಟ್ ಪಾಪ್ಯುಲರ್ ನಟಿಯರ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ. ಇದನ್ನು ಓದಿ.. Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.

Comments are closed.