Neer Dose Karnataka
Take a fresh look at your lifestyle.

IPL 2023: RCB ಬಳಿ ಕಡಿಮೆ ಮೊತ್ತ ಇದ್ದರೂ ಕೂಡ ತಂಡವನ್ನು ಬಲಿಷ್ಠಗೊಳಿಸವುದು ಹೇಗೆ ಅಂತೇ ಗೊತ್ತೇ? ಆಕಾಶ್ ಚೋಪ್ರಾ ಹೇಳಿದ್ದೇನು ಗೊತ್ತೇ?

IPL 2023: ಐಪಿಎಲ್ 16 (IPL 16) ರ ಮಿನಿ ಹರಾಜು ನಡೆಯಲು ಉಳಿದಿರುವುದು ಎರಡು ದಿನಗಳು ಮಾತ್ರ, ಈ ಬಾರಿ ಆರ್ಸಿಬಿ (RCB) ತಂಡ ಕೆಲವು ಆಟಗಾರರನ್ನು ಮಾತ್ರ, ಬಹುತೇಕ ಪ್ಲೇಯಿಂಗ್ 11 ಅನ್ನು ಹಾಗೆಯೇ ಉಳಿಸಿಕೊಂಡಿದೆ. ಫಾಫ್ ಡು ಪ್ಲೆಸಿಸ್ (Faf du Plessis) ಅವರು ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಲಿದ್ದಾರೆ, ಇನ್ನು ವಿರಾಟ್ ಕೊಹ್ಲಿ (Virat Kohlo) ದಿನೇಶ್ ಕಾರ್ತಿಕ್ (Dinesh Karthik), ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಜೋಶ್ ಹೇಜಲ್ ವುಡ್ (Josh Hazelwood), ಹರ್ಷಲ್ ಪಟೇಲ್ (Harshal Patel), ವನಿಂದು ಹಸರಂಗ (Vanindu Hasaranga), ಮೊಹಮ್ಮದ್ ಸಿರಾಜ್ (Mohammad Siraj) ಅವರನ್ನು ಆರ್ಸಿಬಿ ತಂಡ ಉಳಿಸಿಕೊಂಡಿದೆ. ಈಗ ಆರ್ಸಿಬಿ ಬಳಿ ಇರುವುದು ಕಡಿಮೆ ಮೊತ್ತ, 8.75 ಕೋಟಿ ರೂಪಾಯಿಯನ್ನು ಆರ್ಸಿಬಿ ತಂಡ ಬಹಳ ಅಚ್ಚುಕಟ್ಟಾಗಿ ಬಳಸಿಕೊಳ್ಳಬೇಕಿದೆ..ಇದರ ಬಗ್ಗೆ ಮಾಜಿ ಆಟಗಾರ ಆಕಾಶ್ ಚೋಪ್ರಾ ಅವರು ಆರ್ಸಿಬಿ ತಂಡಕ್ಕೆ ಕೆಲವು ಸಲಹೆ ನೀಡಿದ್ದಾರೆ..

ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ (Akash Chopra) ಅವರು ಆರ್ಸಿಬಿ ತಂಡಕ್ಕೆ ಕೊಟ್ಟಿರುವ ಸಲಹೆಗಳು ಹೀಗಿದೆ, “ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ನಲ್ಲಿ ಪಂದ್ಯಗಳು ನಡೆಯುವುದರಿಂದ ಆರ್ಸಿಬಿ ತಂಡದ ಬೌಲಿಂಗ್ ಇನ್ನು ಸ್ಟ್ರಾಂಗ್ ಆಗಬೇಕು. ಎಡಗೈ ಬೌಲರ್ ಗಳನ್ನು ಖರೀದಿ ಮಾಡುವ ಬಗ್ಗೆ ಗಮನ ಹರಿಸಬೇಕು. ಹಣ ಕಡಿಮೆ ಇರುವುದರಿಂದ ಯೋಚನೆ ಮಾಡಿ ಕಡಿಮೆ ಬೆಲೆಗೆ ಆಟಗಾರರನ್ನು ಖರೀದಿ ಮಾಡಬೇಕು. ಸ್ಯಾಮ್ ಕರನ್ (Sam Curran) ಅವರಂತಹ ಆಟಗಾರರನ್ನು ಖರೀದಿ ಮಾಡಬೇಕೆಂದು ಯೋಚನೆ ಮಾಡಲು ಕೂಡ ಆಗುವುದಿಲ್ಲ, ಯಾಕಂದ್ರೆ ಅಷ್ಟು ಹಣವಿಲ್ಲ. ಜೋಶ್ ಹೇಜಲ್ ವುಡ್ ಅವರು ಐಪಿಎಲ್ ಟೂರ್ನಿ ಮುಗಿಯುವ ಸಮಯಕ್ಕೆ ಅಲಭ್ಯರಾಗಬಹುದು ಹಾಗಾಗಿ, ಅವರ ಬದಲಿಗೆ ಬ್ಯಾಕಪ್ ಬೌಲರ್ ಅನ್ನು ಹುಡುಕಬೇಕು, ಟೋಪ್ಲೆ, ಮದುಶಂಕ ಅಥವಾ ಜೋಶುವಾ ಲಿಟಲ್ ಉತ್ತಮ ಆಯ್ಕೆಯಾಗುತ್ತಾರೆ.. ಇದನ್ನು ಓದಿ..FIFA World Cup: ವಿಶ್ವಕಪ್ ಗೆದ್ದಿರಬಹುದು, ಆದರೆ ಮೆಸ್ಸಿ ಒರಿಜಿನಲ್ ಟ್ರೋಫಿ ಅರ್ಜೆಂಟಿನಾ ಗೆ ತೆಗೆದುಕೊಂಡು ಹೋಗಲಿಲ್ಲ. ಯಾಕೆ ಗೊತ್ತೇ? ಚಿನ್ನ ಟ್ರೋಫಿ ಎಲ್ಲೋಯ್ತು?

ವನಿಂದು ಹಸರಂಗ ಅವರಿಗು ಬ್ಯಾಕಪ್ ಸ್ಪಿನ್ನರ್ ಒಬ್ಬರನ್ನು ಖರೀದಿ ಮಾಡಬೇಕು. ದಿನೇಶ್ ಕಾರ್ತಿಕ್ ಅವರಿಗೆ ಸಪೋರ್ಟ್ ನೀಡುವಂಥ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ ಒಬ್ಬರು ಬೇಕು. ದಿನೇಶ್ ಕಾರ್ತಿಕ್ ಮತ್ತು ಶಾಬಾಜ್ ಅಹ್ಮದ್ ಅವರನ್ನೇ ನಂಬುವ ಹಾಗೆ ಆಗಿದೆ. ಹಾಗಾಗಿ ಕೆಲ ಕ್ರಮಾಂಕಕ್ಕೆ ಉತ್ತಮ ಬ್ಯಾಟ್ಸ್ಮನ್ ಅವಶ್ಯಕತೆ ಇದೆ. ವನಿಂದು ಹಸರಂಗ ಅವರು ಒಮ್ಮೆ ಕೂಡ ಬ್ಯಾಟಿಂಗ್ ಮಾಡಿಲ್ಲದೆ ಇರುವುದರಿಂದ ಅವರು ಸ್ಪಿನ್ನರ್ ಆಗಿಯೇ ಇರುತ್ತಾರೆ..” ಎಂದು ಆಕಾಶ್ ಚೋಪ್ರಾ ಅವರು ಆರ್ಸಿಬಿ ತಂಡಕ್ಕೆ ಕೆಲವು ಸಲಹೆಗಳನ್ನು ನೀಡಿದ್ದು, ಅದನ್ನು ಆರ್ಸಿಬಿ ಬಳಸಿಕೊಳ್ಳುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.

Comments are closed.