Neer Dose Karnataka
Take a fresh look at your lifestyle.

Kannada News: 2023 ರ ಪ್ಲಾನ್ ಬುಕ್ ಬಿಡುಗಡೆ ಗೊಳಿಸಿದ ಸಚಿನ್ ಪುತ್ರಿ. ಈ ಬುಕ್ ಬೆಲೆ ಕೇಳಿದರೆ, ಕೊಳ್ಳುವುದೇ ಬೇಡ ಅಂತೀರಾ. ಎಷ್ಟು ಗೊತ್ತೇ?

Kannada News: ಗಾಡ್ ಆಫ್ ಕ್ರಿಕೆಟ್ (God of Cricket) ಎಂದು ಖ್ಯಾತಿಯಾಗಿರುವವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಇವರು ಎಂಥಹ ಶ್ರೇಷ್ಠ ಆಟಗಾರ ಎನ್ನುವುದು ಈಗಾಗಲೇ ಎಲ್ಲರಿಗೂ ಗೊತ್ತಿದೆ. ಸಚಿನ್ ತೆಂಡೂಲ್ಕರ್ ಅವರ ಹಾಗೆ, ಅವರ ಮಗಳು ಸಾರ ತೆಂಡೂಲ್ಕರ್ (Sara Tendulkar) ಕೂಡ ಬಹಳ ಫೇಮಸ್. ಸಾರ ಅವರು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಾಗುತ್ತಾರೆ. ಇವರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಇದೀಗ ಸಾರ ತೆಂಡೂಲ್ಕರ್ ಅವರು ಹೊಸದೊಂದು ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ.

ಹೊಸ ವರ್ಷ ಶುರುವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವುದರಿಂದ ಸಾರ ತೆಂಡೂಲ್ಕರ್ ಅವರು 2023ರ ಹೊಸ ಪ್ಲಾನರ್ ಬುಕ್ ಅನ್ನು ಲಾಂಚ್ ಮಾಡಿದ್ದಾರೆ. ತಮ್ಮದೇ ಹೆಸರಿನಲ್ಲಿ ಇಯರ್ ಪ್ಲಾನರ್ ಲಾಂಚ್ ಮಾಡಿದ್ದಾರೆ. ಇದರ ವಿಶೇಷತೆಗಳ ಬಗ್ಗೆ ಸಹ ತಿಳಿಸಿದ್ದಾರೆ. ಇದರ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಮೂಲಕ ಶೇರ್ ಮಾಡಿದ್ದು, ಇದನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ವಿಡಿಯೋದಲ್ಲಿ ತಮ್ಮ ಪ್ಲಾನರ್ ಬುಕ್ ಕಸ್ಟಮೈಸ್ಡ್ ಆಗಿದ್ದು, ಅದರ ಬೆಲೆ ₹2,500 ರೂಪಾಯಿ ಎಂದು ಸಾರ ಹೇಳಿದ್ದು, ಅದನ್ನು ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇದನ್ನು ಓದಿ..Railway Recruitment: ನೀವು ಹತ್ತನೇ ತರಗತಿ ಪಾಸ್ ಆಗಿದ್ದರೂ ಸಾಕು, ರೈಲ್ವೆ ನಲ್ಲಿ ಇದೆ ಉದ್ಯೋಗ; ಹೇಗೆ ಸೇರಿಕೊಳ್ಳಬೇಕು ಗೊತ್ತೇ??

ಈ ರೀತಿಯ ಬುಕ್ ಗಳು ಸ್ಟೇಷನರಿ ಶಾಪ್ ಗಳಲ್ಲಿ ₹150 ರೂಪಾಯಿಗೆ ಸಿಗುತ್ತದೆ ಎಂದು ನೆಟ್ಟಿಗರು ಕಮೆಂಟ್ಸ್ ಬರೆಯುತ್ತಿದ್ದಾರೆ. ಇನ್ನು ಕೆಲವರು 250 ರೂಪಾಯಿಗೆ ಈ ರೀತಿಯ ಬುಕ್ಸ್ ಗಳು ಸಿಗುತ್ತವೆ ಎಂದು ಅಪಹಾಸ್ಯ ಮಾಡಿದ್ದಾರೆ. ಆದರೆ ಸಾರ ತಂಡುಲ್ಕರ್ ಅವರ ಅಭಿಮಾನಿಗಳು ಕೆಲವರು ಬುಕ್ ಕೊಂಡುಕೊಳ್ಳುವುದಾಗಿ ಹೇಳಿದ್ದಾರೆ. ಸೆಲೆಬ್ರಿಟಿಗಳ ಮಕ್ಕಳು ಏನೇ ಮಾಡಿದರೂ ಸುದ್ದಿಯಾಗುತ್ತದೆ. ಅದೇ ರೀತಿ ಈಗ ಸಾರ ತೆಂಡೂಲ್ಕರ್ ಅವರು ಸುದ್ದಿಯಾಗುವುದಕ್ಕಿಂತ ಹೆಚ್ಚಾಗಿ, ಇದರಿಂದ ಟ್ರೋಲ್ ಆಗುತ್ತಿದ್ದಾರೆ. ಇದನ್ನು ಓದಿ..Automobiles: ಬಿಗ್ ನ್ಯೂಸ್: ಥಾರ್ ಗೆ ಪೈಪೋಟಿ ನೀಡಲು, ದೇಶವೇ ಶೇಕ್ ಆಗುವಂತಹ ಕಾರ್ ಬಿಡುಗಡೆ ಮಾಡಿದ ಸುಜುಕಿ. ಬೆಲೆ ವಿಶೇಷತೆ ಏನು ಗೊತ್ತೇ?

Comments are closed.