Neer Dose Karnataka
Take a fresh look at your lifestyle.

Kannada News: ನಡುಗಿದ ಕೇರಳ ಚಿತ್ರರಂಗ: ರಾತ್ರೋ ರಾತ್ರಿ ಮಲಗಿದ್ದಾಗಲೇ ಪ್ರಾಣ ಕಳೆದುಕೊಂಡ ನಟ ದುಲ್ಕರ್ ಡ್ರೈವರ್. ಏನಾಗಿದೆ ಗೊತ್ತೇ?

Kannada News: ಕೆಲವೊಮ್ಮೆ ಜೀವನದಲ್ಲಿ ಯಾವ ಘಟನೆ ಹೇಗೆ ಯಾವಾಗ ನಡೆಯುತ್ತದೆ ಎಂದು ಹೇಳೋದಕ್ಕೆ ಆಗುವುದಿಲ್ಲ. ಸಾವು ಎನ್ನುವುದು ಯಾವಾಗ ಬರುತ್ತದೆ ಎಂದು ಊಹೆ ಮಾಡೋದಕ್ಕೂ ಆಗುವುದಿಲ್ಲ. ಅಂಥದ್ದೇ ಒಂದು ಘಟನೆ ಈಗ ಚಿತ್ರರಂಗದಲ್ಲಿ ನಡೆದಿದೆ. ಮಲಯಾಳಂ ನ ಖ್ಯಾತ ನಟ ದುಲ್ಕರ್ ಸಲ್ಮಾನ್ (Dulquer Salmaan) ಅವರ ಡ್ರೈವರ್ ಇದ್ದಕ್ಕಿದ್ದ ಹಾಗೆ ಸಾವನ್ನಪ್ಪಿದ್ದಾರೆ, ಈ ಸುದ್ದಿ ಕೇಳಿ ಚಿತ್ರರಂಗವೆ ಶಾಕ್ ಆಗಿದೆ. ದುಲ್ಕರ್ ಸಲ್ಮಾನ್ ಅವರನ್ನು ಏರ್ ಪೋರ್ಟ್ ಗೆ ಡ್ರಾಪ್ ಮಾಡಿ ಬರುವಾಗ ಈ ರೀತಿ ಘಟನೆಯೊಂದು ಸಂಭವಿಸಿದೆ.

ದುಲ್ಕರ್ ಸಲ್ಮಾನ್ ಅವರ ಡ್ರೈವರ್ ಹೆಸರು ಭಾಸ್ಕರ್ ಪ್ರಸಾದ್ (Bhaskar Prasad), ದುಲ್ಕರ್ ಸಲ್ಮಾನ್ ಅವರ ಚೆನ್ನೈ ನಗರದ ಮನೆಯಲ್ಲಿ ಈ ಘಟನೆ ನಡೆದಿದೆ. ದುಲ್ಕರ್ ಸಲ್ಮಾನ್ ಅವರನ್ನು ಚೆನ್ನೈ (Chennai) ಏರ್ ಪೋರ್ಟ್ ಗೆ ಡ್ರಾಪ್ ಮಾಡಿ, ಮನೆಗೆ ಬಂದಿರುವ ಭಾಸ್ಕರ್ ಅವರು ಪಿಜ್ಜಾ ತಿಂದು ಜ್ಯುಸ್ ಕುಡಿದು ಮಲಗಿದ್ದಾರೆ, ಮಲಗಿದ್ದಲ್ಲೇ ಅವರಿಗೆ ಪ್ರಾಣ ಹೋಗಿದೆಯಂತೆ. ಮನೆಯ ಸೆಕ್ಯೂರಿಟಿ ಗಾರ್ಡ್ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ದುಲ್ಕರ್ ಅವರನ್ನು ಡ್ರಾಪ್ ಮಾಡಿ ಬಂದ ನಂತರ ಪಿಜ್ಜಾ ತಿಂದು, ಜ್ಯುಸ್ ಕುಡಿದು ಮಲಗಿರುವ ಭಾಸ್ಕರ್ ಸ್ವಲ್ಪ ಹೊತ್ತಿನ ನಂತರ ಕೆಮ್ಮುವುದಕ್ಕೆ ಶುರು ಮಾಡಿದ್ದಾರೆ. ಇದನ್ನು ಓದಿ..Biggboss Kannada: ಪ್ರೇಕ್ಷಕರ ಮನಗೆದ್ದಿದ್ದರೂ ಹೊರಗೆಹೋದ ಅರುಣ್ ಸಾಗರ್: ಕೊನೆಯಲ್ಲಿ ಪಡೆದ ದಾಖಲೆ ಸಂಭಾವನೆ ಕೇಳಿದರೆ, ಕೈಯೆಲ್ಲ ನಡುಗುತ್ತದೆ. ಎಷ್ಟು ಗೊತ್ತೇ??

ಕೆಮ್ಮು ಜಾಸ್ತಿ ಆಗುತ್ತಿದ್ದ ಹಾಗೆ, ಪ್ರಜ್ಞೆ ತಪ್ಪಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕೆ ಪ್ರಯತ್ನ ಪಟ್ಟಾಗ, ಆಸ್ಪತ್ರೆಗೆ ಹೋಗುವುದಕ್ಕಿಂತ ಮೊದಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಸಾವು ನಿಜಕ್ಕೂ ಎಲ್ಲರಿಗೂ ಶಾಕ್ ನೀಡಿದೆ. ದುಲ್ಕರ್ ಸಲ್ಮಾನ್ ಅವರು ಕೂಡ ತಮ್ಮ ಡ್ರೈವರ್ ಗೆ ಈ ರೀತಿ ಆಗಿದ್ದಕ್ಕೆ ಕಣ್ಣೀರು ಹಾಕಿದ್ದು, ಭಾಸ್ಕರ್ ಪ್ರಸಾದ್ ತುಂಬಾ ಒಳ್ಳೆಯ ಡ್ರೈವರ್ ಎಂದು ಹೇಳಿದ್ದಾರೆ. ಇದನ್ನು ಓದಿ.. Aadhar Card: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮುಖ ನೀವೇ ನೋಡೋಕೆ ಆಗ್ತಾ ಇಲ್ವಾ? ಹಾಗಿದ್ದರೆ ಹೀಗೆ ಮಾಡಿ ಫೋಟೋ ಬದಲಾಯಿಸಿ.

Comments are closed.