Neer Dose Karnataka
Take a fresh look at your lifestyle.

Kannada News: ದೇಶದ ಮೈ ರೋಮವೇ ಎದ್ದು ನಿಲ್ಲುವಂತೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಅಸಿನ್ ಬ್ಯಾನ್ ಆಗಿದ್ದು ಯಾಕೆ ಗೊತ್ತೇ?? ಯಪ್ಪಾ ಚಿತ್ರರಂಗದಲ್ಲಿ ಹಿಂಗೆಲ್ಲ ನಡೆಯುತ್ತಾ.

Kannada News: ಖ್ಯಾತ ನಟಿ ಅಸಿನ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲ, ಬಾಲಿವುಡ್ ನಲ್ಲಿ ಕೂಡ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಮೆರೆದ ನಟಿ, ನೋಡಲು ಬಹಳ ಸುಂದರವಾದ, ಅತ್ಯುತ್ತಮವಾಗಿ ನಟನೆ ಮಾಡಬಲ್ಲ ಸಾಮರ್ಥ್ಯ ಇದ್ದಂತಹ ನಟಿ ಅಸಿನ್ ಅವರು, ತೆಲುಗು ಮತ್ತು ಮಲಯಾಳಂ ಮತ್ತು ತಮಿಳು ಚಿತ್ರರಂಗದ ಮೂಲಕ ಬಹಳ ಹೆಸರು ಮಾಡಿದ್ದ ನಟಿ ಅಸಿನ್ ಅವರನ್ನು ತಮಿಳು ಚಿತ್ರರಂಗ ಬ್ಯಾನ್ ಮಾಡಿದ್ದು ಯಾಕೆ ಗೊತ್ತಾ? ಇವರ ಕೆರಿಯರ್ ನಲ್ಲಿ ನಿಜಕ್ಕೂ ಆಗಿದ್ದೇನು? ತಿಳಿಸುತ್ತೇವೆ ನೋಡಿ..

ನಟಿ ಅಸಿನ್ ಮೂಲತಃ ಕೇರಳ ರಾಜ್ಯದವರು, 15 ವರ್ಷದವರಿದ್ದಾಗ , 2003ರಲ್ಲಿ ಮೊದಲ ಸಿನಿಮಾದಲ್ಲಿ ನಟಿಸಿದ ಅಸಿನ್ ಅವರು, ಆ ಸಿನಿಮಾ ಗೆದ್ದರು ಸೋತರು ಸಿನಿಮಾ ಬಿಟ್ಟು ಸಿವಿಲ್ ಸರ್ವಿಸ್ ಪರೀಕ್ಷೆ ಬರೆದು, ಸರ್ಕಾರಿ ಅಧಿಕಾರಿ ಆಗಬೇಕು ಎಂದುಕೊಂಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ, ಏಕೆಂದರೆ ಅಸಿನ್ ಅವರು ನಟಿಸಿದ ಮೊದಲ ಸಿನಿಮಾ ಸೂಪರ್ ಹಿಟ್ ಆಯಿತು, ಬಳಿಕ ಎರಡನೇ ಮತ್ತು ಮೂರನೇ ಸಿನಿಮಾ ಕೂಡ ಹಿಟ್ ಆಗಿ, ಅಸಿನ್ ಅವರಿಗೆ ಸಾಲು ಸಾಲು ಸಿನಿಮಾ ಅವಕಾಶಗಳು ಬರಲು ಶುರುವಾದವು. ತೆಲುಗು, ತಮಿಳು ಮತ್ತು ಮಲಯಾಳಂ ಎಲ್ಲಾ ಭಾಷೆಯಲ್ಲು ನಟಿಸುವ ಅವಕಾಶ ಸಿಕ್ಕಿ ದಕ್ಷಿಣ ಭಾರತದಲ್ಲಿ ಸ್ಟಾರ್ ನಟಿ ಎನ್ನಿಸಿಕೊಂಡರು ಅಸಿನ್. ಇದನ್ನು ಓದಿ..Kannada News: ಹೋಗಿ ಹೋಗಿ ಮತ್ತೆ ಪಾಕ್ ಹುಡುಗಿಯ ಪಾತ್ರ ಮಾಡಿದ ರಶ್ಮಿಕಾ: ಪಾಕ್ ಹುಡುಗಿಯ ಪಾತ್ರ ಮಾಡಲು ಪಡೆದ ಸಂಭಾವನೆ ಕೇಳಿದರೇ..

ಅಸಿನ್ ಅವರಿಗೆ ಬಾಲಿವುಡ್ ನಲ್ಲಿ ನಟಿಸುವ ಅವಕಾಶ ಸಿಕ್ಕರು ಕೂಡ, ಅಭಿಷೇಕ್ ಬಚ್ಚನ್ ಅಕ್ಷಯ್ ಕುಮಾರ್ ಅವರ ಸಿನಿಮಾಗಳಲ್ಲಿ ನಟಿಸುವ ಆಫರ್ ಅನ್ನು ಅಸಿನ್ ಅವರು ತಿರಸ್ಕರಿಸಿದರು. ಏಕೆಂದರೆ, ಸೌತ್ ನಲ್ಲಿ ಸ್ಟಾರ್ ಆಗಿದ್ದ ಅಸಿನ್ ಅವರು ಬಾಲಿವುಡ್ ನಲ್ಲಿ ಪ್ರಾಮುಖ್ಯತೆ ಇಲ್ಲದ ಪಾತ್ರಗಳಲ್ಲಿ ನಟಿಸುವುದಕ್ಕೆ ಇಷ್ಟಪಡಲಿಲ್ಲ. ಆ ಸಮಯದಲ್ಲಿ ಅಸಿನ್ ಅವರು ದಕ್ಷಿಣ ಭಾರತದ ಎಲ್ಲಾ ಸ್ಟಾರ್ ಕಲಾವಿದರ ಜೊತೆಗು ನಟಿಸಿ ಯಶಸ್ಸಿನ ಉತ್ತುಂಗದಲ್ಲಿದ್ದರು. ತಮಿಳಿನಲ್ಲಿ ಅಸಿನ್ ಅವರು ನಟ ಸೂರ್ಯ ಅವರ ಜೊತೆಗೆ ಅಭಿನಯಿಸಿದ್ದ, ಗಜಿನಿ ಸಿನಿಮಾ ಸೂಪರ್ ಹಿಟ್ ಆಗಿತ್ತು, ಈ ಸಿನಿಮಾ ಬಾಲಿವುಡ್ ಗೆ ರಿಮೇಕ್ ಆಗುವಾಗ, ಸಿನಿಮಾ ಮೇಕರ್ ಗಳು ಅಸಿನ್ ಅವರೇ ನಾಯಕಿಯಾಗಬೇಕು ಎಂದು ಅವರನ್ನೇ ಆಯ್ಕೆ ಮಾಡಿದರು. ಈ ಮೂಲಕ ಅಸಿನ್ ಅವರು ಹಿಂದಿಯಲ್ಲಿ ಮೊದಲ ಸಿನಿಮಾದಲ್ಲಿ ನಟಿಸಿದರು.

ಮೊದಲ ಸಿನಿಮಾ ಸೂಪರ್ ಹಿಟ್ ಆಗಿ, ಎರಡನೇ ಸಿನಿಮಾ ಲಂಡನ್ ಡ್ರೀಮ್ಸ್ ನಲ್ಲಿ ನಟಿಸಿದರು ಅಸಿನ್, ಆ ಸಿನಿಮಾದಲ್ಲಿ ಅಜಯ್ ದೇವಗನ್ ಮತ್ತು ಸಲ್ಮಾನ್ ಖಾನ್ ಇಬ್ಬರು ಕೂಡ ನಟಿಸಿದ್ದರು, ಆದರೆ ಆ ಸಿನಿಮಾ ಹಿಟ್ ಆಗಲಿಲ್ಲ. ಆ ಸಮಯದಲ್ಲಿ ಅಸಿನ್ ಅವರೊಡನೆ ಸಿನಿಮಾ ಮಂದಿ, ಕೆಲಸ ಮಾಡಲು ಕಾತುರರಾಗಿದ್ದರು. ಆ ಸಮಯದಲ್ಲಿ ಅಸಿನ್ ಅವರು ಬಾಲಿವುಡ್ ನಟ ನಿಧಿನ್ ಮುಕೇಶ್ ಅವರ ಜೊತೆಗೆ ಡೇಟ್ ಮಾಡುತ್ತಿದ್ದರು. ಆದರೆ ತಮ್ಮ ಸಂಬಂಧವನ್ನು ಎಲ್ಲಿಯೂ ಬಹಿರಂಗ ಮಾಡಬಾರದು ಎಂದಿದ್ದರು. ಬಳಿಕ ಅಸಿನ್ ಅವರು ಮೂರು ಮತ್ತು ನಾಲ್ಕನೇ ಸಿನಿಮಾವನ್ನು ಕೂಡ ಒಪ್ಪಿಕೊಂಡರು. ಆ ಸಮಯದಲ್ಲಿ ಅಸಿನ್ ಅವರು ಸಲ್ಮಾನ್ ಖಾನ್ ಅವರ ಜೊತೆಗೆ ರೆಡಿ ಸಿನಿಮಾದಲ್ಲಿ ನಟಿಸಿದರು, ಆಗ ಸಲ್ಮಾನ್ ಖಾನ್ ಅವರ ಜೊತೆಗೆ ಪಾರ್ಟಿ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದನ್ನು ಓದಿ..Kannada News: ವಿಷ್ಣುವರ್ಧನ್ ಹಾಗೂ ಶಿವಣ್ಣ ಒಂದೇ ಪಾತ್ರದಲ್ಲಿ ನಟನೆ ಮಾಡ್ಬೇಕಾಗಿತ್ತು, ಆದರೆ ಕೊನೆ ಕ್ಷಣದಲ್ಲಿ ಸಿನಿಮಾ ನಿಂತದ್ದು ಯಾಕೆ ಗೊತ್ತೇ??

ಹಾಗೆಯೇ ನಟ ಅಕ್ಷಯ್ ಕುಮಾರ್ ಅವರ ಜೊತೆಗೂ ಕಾಣಿಸಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ಬಾಲಿವುಡ್ ನಲ್ಲಿ ನೆಲೆಯೂರುವ ಕನಸಿನಲ್ಲಿದ್ದ ಅಸಿನ್ ಅವರಿಗೆ, ಅಲ್ಲಿ ಒಂದು ಮನೆ ಮಾಡಿಕೊಳ್ಳಲು ಸಲ್ಮಾನ್ ಖಾನ್ ಅವರೇ ಸಹಾಯ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಈ ಎಲ್ಲ ವಿಷಯಗಳು ಹೊರಬಂದಾಗ, ಅಸಿನ್ ಅವರು ಡೇಟ್ ಮಾಡುತ್ತಿದ್ದ ನಿಧಿನ್ ಅವರ ಕರೆಗೆ ಅಸಿನ್ ಅವರು ಸರಿಯಾಗಿ ಪ್ರತಿಕ್ರಿಯೆ ನೀಡದ ಕಾರಣ, ಆತ ಮಾಧ್ಯಮದ ಎದುರು ಬಂದು.. ಅಸಿನ್ ಅವರು ಚೀಟರ್, ತಮ್ಮಿಂದ ತಮ್ಮ ಕುಟುಂಬದವರಿಂದ ಸಹಾಯ ಪಡೆದು, ಮೋಸ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು. ಆಗ ಇದು ದೊಡ್ಡ ವಿವಾದಗೆ ಆದರೂ ಕೂಡ, ಬಾಲಿವುಡ್ ನಲ್ಲಿ ಅಸಿನ್ ಅವರ ಕೆರಿಯರ್ ಚೆನ್ನಾಗಿದ್ದ ಕಾರಣ, ಆ ಸಮಯದಲ್ಲಿ ಅವರ ಕೆರಿಯರ್ ಗೆ ಇದು ಎಫೆಕ್ಟ್ ಮಾಡಲಿಲ್ಲ.

ಆದರೆ ಆ ಸಮಯದಲ್ಲಿ ಆದ ಮತ್ತೊಂದು ಘಟನೆ ಅಸಿನ್ ಅವರ ತಮಿಳು ಕೆರಿಯರ್ ಮೇಲೆ ಪರಿಣಾಮ ಬೀರಿತು.ಬ್ ಐ.ಎಫ್.ಎಫ್.ಐ ಅವಾರ್ಡ್ಸ್ ಕಾರ್ಯಕ್ರಮ ಶ್ರೀಲಂಕಾದಲ್ಲಿ ನಡೆದಾಗ, ಅಸಿನ್ ಅವರು ಆ ಕಾರ್ಯಕ್ರಮಕ್ಕೆ ಹೋಗಿದ್ದರು. ತಮಿಳು ನಾಡಿಗೂ ಶ್ರೀಲಂಕಾಗು ಒಳ್ಳೆಯ ಸಂಬಂಧ ಇಲ್ಲದ ಕಾರಣ, ತಮಿಳು ನಾಡಿನ ಜನರು ಅಸಿನ್ ಅವರ ಮೇಲೆ ಕೋಪ ಮಾಡಿಕೊಂಡರು, ಆದರೆ ಅಸಿನ್ ಅವರು ಅದಕ್ಕೆ ತಲೆಕೆಡಿಸಿಕೊಳ್ಳದೆ, ಕಾರ್ಯಕ್ರಮಕ್ಕೆ ಹೋದ ಕಾರಣ, ತಮಿಳು ಚಿತ್ರರಂಗದಿಂದ ಅವರನ್ನು ಬ್ಯಾನ್ ಮಾಡಲಾಯಿತು. ತಮಿಳಿನಲ್ಲಿ ಅಸಿನ್ ಅವರನ್ನು ಬ್ಯಾನ್ ಮಾಡಲಾಗಿತ್ತು, ಅಸಿನ್ ಅವರು ತಮಿಳಿನಲ್ಲಿ ಕೊನೆಯದಾಗಿ ನಟಿಸಿದ್ದು ಕಾವಲನ್ ಸಿನಿಮಾದಲ್ಲಿ. ತಮಿಳಿನಲ್ಲೇನೋ ಅಸಿನ್ ಅವರನ್ನು ಬ್ಯಾನ್ ಮಾಡಲಾಯಿತು, ಆದರೆ ಬಾಲಿವುಡ್ ನಲ್ಲಿ ಕೂಡ ಅಸಿನ್ ಅವರ ಕೆರಿಯರ್ ಇಳಿಮುಖ ಆಗುವ ಸೂಚನೇ ಶುರುವಾಗಿತ್ತು.. ಇದನ್ನು ಓದಿ..Kannada News: ಮೈ ರೋಮವೆಲ್ಲ ನಿಂತುಕೊಳ್ಳುವ ಬ್ರೇಕಿಂಗ್ ನ್ಯೂಸ್, ನಾಗ ಚೈತನ್ಯ ಹಾಗೂ ಸಮಂತಾ ವಿಚಾರದಲ್ಲಿ ಶೇಕ್ ಆಗುವ ಸುದ್ದಿ. ಏನು ಗೊತ್ತೇ?

ಅಸಿನ್ ಅವರಿಗೆ ಮಾಧ್ಯಮದವರು ಬೇಡದ, ಮುಜುಗರ ಆಗುವಂತಹ ಪ್ರಶ್ನೆಗಳನ್ನೇ ಹೆಚ್ಚಾಗಿ ಕೇಳುತ್ತಿದ್ದರು. ಸಲ್ಮಾನ್ ಖಾನ್ ಮತ್ತು ನಿಮ್ಮ ನಡುವೆ ಏನು ಸಂಬಂಧ ಎಂದು ಅಸಂಬದ್ಧ ಪ್ರಶ್ನೆಗಳನ್ನು ಕೇಳಿದರು, ಆಗ ಅಸಿನ್ ಅವರು ಮುಂಬೈ ನಲ್ಲಿ ಮನೆ ಕೊಂದುಕೊಳ್ಳಲು, ತಮಗೆ ಸಲ್ಮಾನ್ ಖಾನ್ ಅವರು ಆರ್ಥಿಕವಾಗಿ ಸಹಾಯ ಮಾಡಿಲ್ಲ, ತಾವು ದುಡಿದ ಹಣದಿಂದ ಮನೆ ಕೊಂಡುಕೊಂಡಿದ್ದು ಎಂದಿದ್ದರು. ಬಳಿಕ ಅಕ್ಷಯ್ ಕುಮಾರ್ ಅವರ ವಿಷಯದಲ್ಲೂ ಹೀಗೆ ಆಗಿತ್ತು. ಇದೆಲ್ಲವೂ ಆದ ಬಳಿಕ ಅಸಿನ್ ಅವರಿಗೆ ಕಾರ್ಯಕ್ರಮ ಒಂದರಲ್ಲಿ ಅಕ್ಷಯ್ ಕುಮಾರ್ ಅವರು ಮೈಕ್ರೊಮ್ಯಾಕ್ಸ್ ಸಂಸ್ಥೆಯ ಓನರ್, ಬ್ಯುಸಿನೆಸ್ ಮ್ಯಾನ್ ರಾಹುಲ್ ಅವರನ್ನು ಅಸಿನ್ ಅವರಿಗೆ ಪರಿಚಯ ಮಾಡಿಸಿದರು. ರಾಹುಲ್ ಮತ್ತು ಅಸಿನ್ ಇಷ್ಟಪಟ್ಟು ಡೇಟ್ ಮಾಡಲು ಶುರು ಮಾಡಿದರು..

ಬಳಿಕ ರಾಹುಲ್ ಅವರು ಮತ್ತು ಅಸಿನ್ ಅವರು ಇಬ್ಬರು ಕೂಡ ಪ್ರೀತಿಸಿ 2016ರಲ್ಲಿ ಮದುವೆಯಾದರು. ರಾಹುಲ್ ಮತ್ತು ಅಸಿನ್ ದಂಪತಿ ಈಗ ಕೇರಳದಲ್ಲಿ ವಾಸ ಮಾಡುತ್ತಿದ್ದಾರೆ. ಈ ದಂಪತಿಗೆ ಒಂದು ಮುದ್ದಾದ ಹೆಣ್ಣುಮಗುವಿದೆ. ರಾಹುಲ್ ಅವರಿಗೆ ಭಾರತ ಮಾತ್ರವಲ್ಲ, ವಿದೇಶಗಳಲ್ಲಿ ಸಹ ಬ್ಯುಸಿನೆಸ್ ಇದೆ. ಒಟ್ಟಿನಲ್ಲಿ ಅಸಿನ್ ಅವರು ಮದುವೆ ನಂತರ ಚಿತ್ರರಂಗದಿಂದ ಪೂರ್ತಿಯಾಗಿ ದೂರವಾಗಿ ಸಂತೋಷದ ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಇದನ್ನು ಓದಿ.. Kannada News: ಇಂದಿಗೂ ಕೂಡ ಚಪ್ಪಲಿ ಎಸೆತದ ಬಗ್ಗೆ ಯಶ್, ರಕ್ಷಿತ್, ರಿಷಬ್ ಯಾಕೆ ಟ್ವೀಟ್ ಮಾಡಲಿಲ್ಲ ಗೊತ್ತೇ?? ಏನಾಗುತ್ತಿದೆ ತೆರೆ ಹಿಂದೆ ಗೊತ್ತೇ??

Comments are closed.