Neer Dose Karnataka
Take a fresh look at your lifestyle.

Kannada News: ಅಪ್ಪು ನಡೆಸಿಕೊಡ್ತಿದ್ದ ಕನ್ನಡದ ಕೋಟ್ಯಧಿಪತಿ ನಿರೂಪಕರ ಸ್ಥಾನಕ್ಕೆ ಯಾರು ಸೂಕ್ತ ಗೊತ್ತೇ?? ಅಪ್ಪು ರೀತಿ ನಡೆಸಿಕೊಡಲು ಯಾರಿಗೆ ಸಾಧ್ಯ ಗೊತ್ತೇ??

Kannada News: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅವರು ಇಂದು ನಮ್ಮೊಡನೆ ದೈಹಿಕವಾಗಿ ಇಲ್ಲದೆ ಹೋದರು ಕೂಡ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಶಾಶ್ವತವಾಗಿದ್ದಾರೆ. ಅಪ್ಪು ಅವರನ್ನು ಎಲ್ಲಾ ಕಾರ್ಯಕ್ರಮಗಳಲ್ಲಿ ನೆನಪು ಮಾಡಿಕೊಳ್ಳುವ ಮೂಲಕ ಅವರನ್ನು ಎಲ್ಲರೂ ಹತ್ತಿರದಲ್ಲಿಯೇ ಇಟ್ಟುಕೊಂಡಿದ್ದಾರೆ. ಅಪ್ಪು ಅವರು ಎಂಥಹ ನಟ, ಡ್ಯಾನ್ಸರ್, ಫೈಟರ್ ಎನ್ನುವ ವಿಷಯ ನಮ್ಮೆಲ್ಲರಿಗೂ ಗೊತ್ತೇ ಇದೆ. ಪ್ರತಿ ಸಿನಿಮಾದಲ್ಲಿ ಅದೆಲ್ಲವನ್ನು ನೋಡಿದ್ದೇವೆ.

ಫಿಟ್ನೆಸ್ ವಿಷಯದಲ್ಲಿ ಎಲ್ಲರಿಗೂ ಸ್ಪೂರ್ತಿಯಾಗಿದ್ದರು ಅಪ್ಪು. ಗಾಯಕನಾಗಿ ದೊಡ್ದದಾಗಿ ಹೆಸರು ಮಾಡಿದ್ದ ಅಪ್ಪು ಅವರು, ಅದರ ಜೊತೆಗೆ ಅಪ್ಪು ಅವರು ನಿರೂಪಕನಾಗಿಯೂ ಗುರುತಿಸಿಕೊಂಡಿದ್ದರು. ಹಿಂದಿಯ ಕೌನ್ ಬನೇಗಾ ಕರೋಡ್ ಪತಿ ಶೋನ ಕನ್ನಡದ ಅವತರಣಿಕೆ ಕನ್ನಡದ ಕೋಟ್ಯಾಧಿಪತಿ (Kannadada Kotyadhipati) ಶೋ ಅನ್ನು ಅಪ್ಪು ಅವರೇ ನಿರೂಪಣೆ ಮಾಡುತ್ತಿದ್ದರು. ಈ ಶೋ ಕನ್ನಡ ಕಿರುತೆರೆಯಲ್ಲಿ ಹೊಸ ಭಾಷ್ಯ ಬರೆದಿತ್ತು ಎಂದೇ ಹೇಳಬಹುದು. ಇದನ್ನು ಓದಿ..Kannada News: ಒಂದು ಕಾಲದಲ್ಲಿ ಮೈ ಮಾರಿಕೊಳ್ಳುತ್ತ ಸಿಕ್ಕಿ ಬಿದ್ದ ನಟಿ ಈಗ ಹೀಗಾಗಿದ್ದರೆ ಗೊತ್ತೇ? ಯಪ್ಪಾ ಇಷ್ಟೇನಾ ಜೀವನ?

ಅಪ್ಪು ಅವರ ನಿರೂಪಣೆಯ ಶೈಲಿ, ಕಾರ್ಯಕ್ರಮದ ಶುರುವಿನಲ್ಲಿ ಅವರು ಹೇಳುತ್ತಿದ್ದ ಮಾತುಗಳು, ಪ್ರತಿ ವಿಷಯದಲ್ಲಿ ಅಭಿಮಾನಿಗಳಿಗೆ ನೀಡುತ್ತಿದ್ದ ಒಂದು ಒಳ್ಳೆಯ ಸಂದೇಶ. ಕಾರ್ಯಕ್ರಮಕ್ಕೆ ಬರುವ ಜನರ ಜೊತೆಗೆ, ಅವರು ಬೆರೆತು, ಮನೆಯವರ ಹಾಗೆ ಮಾತನಾಡುತ್ತಿದ್ದ ಪರಿ, ಇವೆಲ್ಲವೂ ವೀಕ್ಷಕರಿಗೆ ಬಹಳ ಇಷ್ಟ. ಎಲ್ಲರೂ ಕೂಡ ಅಪ್ಪು ಅವರಿಗಾಗಿಯೇ ಈ ಶೋ ನೋಡುತ್ತಿದ್ದರು.

ಅಪ್ಪು ಅವರಿಗೆ ಇದ್ದ ಸಾಮಾಜಿಕ ಕಳಕಳಿ ಹಾಗೂ ಸಹಾಯ ಮನೋಭಾವದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಕಾರ್ಯಕ್ರಮಕ್ಕೆ ಬಂದವರಲ್ಲಿ, ಕಷ್ಟ ಇರುವವರು ಹೆಚ್ಚು ಹಣ ಗೆಲ್ಲದೆ ಹೋದರೆ, ಅಪ್ಪು ಅವರು ಆ ಜನರಿಗೆ ಸಹಾಯ ಮಾಡುತ್ತಿದ್ದರು, ಬಳಿಕ ಯಾರಿಗೂ ಹೇಳಬೇಡಿ ಎನ್ನುತ್ತಿದ್ದರು. ಈ ವಿಚಾರ ಹೊರಗೆ ಕೂಡ ಬರುತ್ತಿರಲಿಲ್ಲ. ಇಂತಹ ಅನೇಕ ಘಟನೆಗಳು ಕನ್ನಡದ ಕೋಟ್ಯಾಧಿಪತಿ ಸೆಟ್ ನಲ್ಲಿಯೇ ನಡೆದಿದೆ. ಕೆಲ ವರ್ಷಗಳ ಕಾಲ ಅಪ್ಪು ಅವರು ಈ ಶೋ ನಿರೂಪಣೆ ಮಾಡಿದರು. ಇದನ್ನು ಓದಿ..Kannada News: ಕೊನೆಗೂ ಬಯಲಾಯ್ತು ವಿಷ್ಣುವರ್ಧನ್ ಸಾವಿನ ಹಿಂದಿನ ಅಸಲಿ ರಹಸ್ಯ: ಆರೋಗ್ಯವಾಗಿದ್ದವರು ದಿಡೀರ್ ಎಂದು ಸ್ವರ್ಗ ಸೇರಿದ್ದು ಯಾಕೆ ಗೊತ್ತೆ?

ಆದರೆ ಒಂದೆರಡು ಸಾರಿ ಅಪ್ಪು ಅವರು ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾಗ, ಹಿರಿಯನಟ ರಮೇಶ್ ಅರವಿಂದ್ (Ramesh Aravind) ಅವರು ಶೋ ನಿರೂಪಣೆ ಮಾಡಿದ್ದರು. ರಮೇಶ್ ಅರವಿಂದ್ ಅವರು ಕೂಡ ಒಳ್ಳೆಯ ನಿರೂಪಕ ಆದರೆ ಅಪ್ಪು ಅವರನ್ನು ಜನರು ಮಿಸ್ ಮಾಡಿಕೊಳ್ಳುತ್ತಿದ್ದರು. ಬಳಿಕ ಅಪ್ಪು ಅವರನ್ನೇ ಶೋಗೆ ಕರೆತರಲಾಯಿತು. ಮತ್ತೊಮ್ಮೆ ಕನ್ನಡದ ಕೋಟ್ಯಾಧಿಪತಿ ಶೋ ಅನ್ನು ಅಪ್ಪು ಅವರ ಜೊತೆಯಲ್ಲೇ ಮುಂದುವರೆಸುವ ಪ್ಲಾನ್ ಸಹ ಮಾಡಿಕೊಳ್ಳಲಾಗಿತ್ತು. ಆದರೆ ಅದು ಕೈಗೂಡುವ ಮೊದಲೇ, ಅಪ್ಪು ಅವರು ಇಹಲೋಕ ತ್ಯಜಿಸಿದರು..

ಕನ್ನಡದ ಕೋಟ್ಯಾಧಿಪತಿ ಶೋ ಎಂದರೆ ಅದು ಅಪ್ಪು ಎಂದು ಹೇಳುವ ಆ ಶೋಗೆ ಈಗ ಅಪ್ಪು ಅವರಿಲ್ಲ. ಇದೀಗ ಕನ್ನಡದ ಕೋಟ್ಯಾಧಿಪತಿ ಶೋ ಅನ್ನು ಅಪ್ಪು ಅವರಿಲ್ಲದೆ ಮತ್ತೊಂದು ಹೊಸ ಸೀಸನ್ ಶುರು ಮಾಡಲು ಚಿಂತನೆ ನಡೆಸಲಾಗುತ್ತಿದೆ. ಈ ವಿಚಾರ ಹೊರಬರುತ್ತಿದ್ದ ಹಾಗೆ, ಶೋ ನಿರೂಪಣೆ ಮಾಡವುದು ಯಾರು ಎನ್ನುವ ಕುತೂಹಲ ಸಹ ಶುರುವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು, ಶಿವಣ್ಣ (Shiva Rajkumar) ಅವರು ಈ ಶೋ ನಿರೂಪಣೆ ಮಾಡಲು ಸೂಕ್ತ ವ್ಯಕ್ತಿ ಎನ್ನುತ್ತಿದ್ದಾರೆ. ಅಪ್ಪು ಅವರು ಇಲ್ಲದೆ ಇರುವಾಗ ಕನ್ನಡದ ಕೊಟ್ಯಾಧಿಪತಿ ಶೋ ಅನ್ನು ಶಿವಣ್ಣ (Shivanna) ಅವರೇ ನಡೆಸಿಕೊಡಬೇಕು ಎನ್ನುತ್ತಿದ್ದಾರೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನು ತಪ್ಪದೇ ತಿಳಿಸಿ. ಇದನ್ನು ಓದಿ.. Kannada News: ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ದಟ್ಟಿಮೇಳ ಅಶ್ವಿನಿ ಈಗ ಏನು ಮಾಡುತ್ತಿದ್ದಾರೆ ಗೊತ್ತೇ? ಧಾರವಾಹಿ ಬಿಟ್ಟಮೇಲೆ ಆಗಿದ್ದೆ ಬೇರೆ.

Comments are closed.