Neer Dose Karnataka
Take a fresh look at your lifestyle.

Friendship: ಸದಾ ಗಟ್ಟಿಯಾಗಿರುವ ಸ್ನೇಹ ಬಿರುಕು ಮೂಡುವುದು ಯಾವಾಗ ಗೊತ್ತೇ? ಈ ಕೆಲಸ ಮಾಡಿದರೆ ಬಿರುಕು ಕಟ್ಟಿಟ್ಟ ಬುತ್ತಿ. ಏನಾಗುತ್ತದೆ ಗೊತ್ತೇ??

Friendship: ಬದುಕಿನಲ್ಲಿ ಸಂಬಂಧಗಳನ್ನು ಮೀರಿದ ಕೆಲವು ಬಂಧಗಳಿವೆ, ಅದು ಸ್ನೇಹ. ಜೀವನದಲ್ಲಿ ಒಳ್ಳೆಯ ಸಂಗಾತಿ ಇರದೇ ಇರುವುದು ಹಲವರಲ್ಲಿ ನೋಡಿರುತ್ತೇವೆ, ಆದರೆ ಒಳ್ಳೆಯ ಸ್ನೇಹಿತರು ಇರುವುದು ಬಹಳ ಮೈಖ್ಯ. ಒಬ್ಬ ಸ್ನೇಹಿತ ನಿಮ್ಮ ತಂದೆಯಷ್ಟು ಕಟ್ಟುನಿಟ್ಟಾಗಿ, ತಾಯಿಯಷ್ಟು ಪ್ರೀತಿ ತೋರುವ ಸ್ವಭಾವ ಹೊಂದಿರುವರು, ತಂದೆಯ ಹಾಗೆ ಕಟ್ಟುನಿಟ್ಟಾಗಿ ಇರುತ್ತಾರೆ. ಸ್ನೇಹಿತರು ನಿಮಗೆ ಸಹೋದರ ಸಹೋದರಿಯ ಹಾಗೆ ಇರುತ್ತಾರೆ. ನಿಮ್ಮ ಮನಸ್ಸಿಗೆ ನೋವಾದಾಗ ಸ್ನೇಹಿತರಿಗೆ ಹೇಳುತ್ತೀರಿ. ಆದರೆ ಸ್ನೇಹಿತರ ನಡುವೆ ಕೆಲವು ವಿಚಾರಗಳು ಅಂತರ ತರುತ್ತದೆ. ಹೀಗೆ ಸ್ನೇಹಿತರ ನಡುವೆ ಅಂತರ ತರುವಂಥ ವಿಚಾರಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ನಿಮ್ಮ ಮಧ್ಯೆ ಹಣ ಬರಬಾರದು :- ಸ್ನೇಹದ ನಡುವೆ ಹಣ ಬಂದರೆ ಆ ಸ್ನೇಹದಲ್ಲಿ ಬಿರುಕು ಮೂಡುವುದು ಸಹಜ ಎಂದು ಹೇಳಬಹುದು. ಇದರಿಂದ ತಪ್ಪು ತಿಳುವಳಿಕೆ ಉಂಟಾಗಬಹುದು. ಸ್ನೇಹಿತರಿಂದ ನೀವು ಹಣ ಪಡೆದರೆ, ತಪ್ಪದೇ ಹಿಂದಿರುಗಿಸಿ. ಕೊಡಲು ಆಗಲಿಲ್ಲ ಎಂದರೆ, ಅದರ ಬಗ್ಗೆ ಮುಕ್ತವಾಗಿ ತಿಳಿಸಿ. ಹಣದ ಕಾರಣದಿಂದ ನಿಮ್ಮ ಸಂಬಂಧ ಹಾಳಾಗದ ಹಾಗೆ ನೋಡಿಕೊಳ್ಳಿ.
ಸ್ನೇಹ ಮತ್ತು ವೃತ್ತಿ ಬೇರೆ ಬೇರೆ ಆಗಿರಲಿ :- ಸ್ನೇಹಿತರು ಒಂದೇ ಕಡೆ ಕೆಲಸ ಮಾಡುತ್ತಿದ್ದರೆ, ಅದು ಸ್ವಲ್ಪ ಕಷ್ಟಕರವಾದ ವಿಚಾರ ಎಂದು ಹೇಳಬಹುದು. ಇದು ಒಳ್ಳೆಯ ವಿಚಾರ ಆದರೂ ಸಹ, ಒಬ್ಬರಿಗಿಂತ ಒಬ್ಬರು ಮುಂದಿರಬೇಕು ಎನ್ನುವ ಕಾಂಪಿಟೇಶನ್ ನಲ್ಲಿ ನಿಮ್ಮ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು. ಇದರಿಂದ ನಿಮ್ಮಿಬ್ಬರ ನಡುವೆ ಅಸೂಯೆ ಶುರುವಾಗಬಹುದು. ಹೀಗೆ ಆಗುವುದನ್ನು ತಪ್ಪಿಸಲು, ಕೆಲಸ ಮತ್ತು ಸ್ನೇಹ ಎರಡು ಬೇರೆ ಬೇರೆ ಇರಲಿ. ಇದನ್ನು ಓದಿ..Health Tips: ಹೃದಯದ ಸಮಸ್ಯೆಗಳು ಬರಬರಾದು ಎಂದರೆ, ಅಡುಗೆ ಎಣ್ಣೆಯಲ್ಲಿ ಬದಲಾವಣೆ ಮಾಡಿ. ಈ ಎಣ್ಣೆಯನ್ನು ಬಳಸಿದರೆ ಹೃದಯದ ಸಮಸ್ಯೆ ಬರಲ್ಲ.

ಹೆಚ್ಚು ಅವಲಂಬಿತರಾಗದಿರಿ :- ಸ್ನೇಹಿತರು ಜೀವನದಲ್ಲಿ ಜೊತೆಯಾಗಿರುತ್ತಾರೆ, ಅಂತಹ ಸ್ನೇಹ ಆಳವಾಗಿರುತ್ತದೆ, ರಕ್ತ ಸಂಬಂಧಕ್ಕಿಂತ ಹೆಚ್ಚಾಗಿರುತ್ತದೆ. ನಿಮ್ಮ ಕೆಲಸಗಳನ್ನು ಸ್ನೇಹಿತರಿಲ್ಲದೆ ಮಾಡಬಹುದು ಎಂದರೆ ಅದನ್ನು ಮಾಡಿ. ಪ್ರತಿ ಕೆಲಸಕ್ಕೂ ಅವರ ಮೇಲೆ ಅವಲಂಬಿಸಿರಬೇಡಿ, ಸ್ನೇಹದಲ್ಲಿ ಇದಕ್ಕೆ ಮಿತಿ ಇದೆ. ನೀವು ಹೆಚ್ಚು ಡಿಪೆಂಡೆಂಟ್ ಆಗಿದ್ದರೆ, ಅವರು ನಿಮ್ಮಿಂದ ಟಾಕ್ಸಿಕ್ ಆಗುತ್ತಾರೆ.
ರಹಸ್ಯ ಕಾಪಾಡಿಕೊಳ್ಳಿ :- ನಿಮ್ಮ ರಹಸ್ಯಗಳು ಸುರಕ್ಷಿತವಾಗಿರುವುದು ಸ್ನೇಹಿತರ ಬಳಿ, ಸ್ನೇಹಿತರು ನಿಮ್ಮನ್ನು ಹೆಚ್ಚು ನಂಬಿ, ಅವರ ರಹಸ್ಯಗಳನ್ನು ಹೇಳಿಕೊಳ್ಳುತ್ತಾರೆ. ನಿಮ್ಮ ಸ್ನೇಹಿತರ ರಹಸ್ಯವನ್ನು ಬೇರೆಯವರ ಜೊತೆಗೆ ಹೇಳಿಕೊಳ್ಳಬೇಡಿ. ಅವರು ನಿಮ್ಮೊಡನೆ ಹೇಳಿದ ಸೀಕ್ರೆಟ್ ವಿಚಾರಗಳನ್ನು ನೀವು ಬರೆಯವರ ಜೊತೆಗೆ ಹಂಚಿಕೊಂಡರೆ, ಅದು ಅವರು ನಿಮ್ಮ ಮೇಲೆ ಇಟ್ಟಿರುವ ನಿಮ್ಮ ನಂಬಿಕೆಯನ್ನು ಮುರಿದ ಹಾಗೆ. ಇದನ್ನು ಓದಿ..Kannada News: ನಿಮ್ಮ ಕನಸಿನಲ್ಲಿ ಇಹಲೋಕ ತ್ಯಜಿಸಿದವರು ಬರುತ್ತಿದ್ದರೆ ಎಂದರೆ ಏನರ್ಥ ಗೊತ್ತೇ?? ಕಾರಣ ತಿಳಿದುಕೊಂಡರೆ ತುಂಬಾ ಒಳ್ಳೆಯದು

Comments are closed.