Cooking Recipe: ಜಸ್ಟ್ 40 ರೂಪಾಯಿ ಖರ್ಚು ಮಾಡಿ, ಮನೆಯಲ್ಲಿಯೇ ಸ್ಪೈಸ್ ಕೇಕು ಮಾಡುವುದು ಹೇಗೆ ಗೊತ್ತೇ?? ಎಲ್ಲರೂ ಇಷ್ಟ ಪಟ್ಟು ತಿಂತಾರೆ.
Cooking Recipe: ಕೇಕ್ ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ, ಮಕ್ಕಳಿಂದ ದೊಡ್ಡವರವರೆಗು ಎಲ್ಲರೂ ಕೇಕ್ ಅನ್ನು ಇಷ್ಟಪಟ್ಟು ತಿನ್ನುತ್ತಾರೆ. ಬ್ರಿಟಾನಿಯಾ ಕಂಪನಿಯಿಂದ ಸಿಗುವ ಸ್ಪೈಸ್ ಕೇಕ್ ಅನ್ನು ಸುಲಭವಾಗಿ ಮನೆಯಲ್ಲಿ ಸುಲಭವಾಗಿ ಹೇಗೆ ಮಾಡುವುದು ಎಂದು ತಿಳಿಸುತ್ತೇವೆ ನೋಡಿ.. ಮೊದಲಿಗೆ ಒಂದು ದೊಡ್ಡ ಪಾತ್ರೆಯನ್ನ ಸ್ಟವ್ ಮೇಲಿಟ್ಟು, ಅದರ ಒಳಗೆ ಸಿಂಬಿ ಹಾಕಿ, ಸ್ಟವ್ ಆನ್ ಮಾಡಿ, 10ನಿಮಿಷ ಪ್ರೀ ಹೀಟ್ ಮಾಡಿಕೊಳ್ಳಿ. ಮತ್ತೊಂದು ಕಡೆ ಒಂದು ಬೌಲ್ ಗೆ ಒಂದು ಕಪ್ ಮೊಸರು, ಒಂದು ಕಪ್ ಸಕ್ಕರೆ ಪುಡಿ ಹಾಕಿ, ಚೆನ್ನಾಗಿ ಬೀಟ್ ಮಾಡಿ. ಕ್ರೀಮಿ ಹದಕ್ಕೆ ಬಂದಾಗ 1 1/4 ಟೀ ಸ್ಪೂನ್ ಬೇಕಿಂಗ್ ಪೌಡರ್, ಅರ್ಧ ಟೀ ಸ್ಪೂನ್ ಬೇಕಿಂಗ್ ಸೋಡ ಹಾಕಿ ಮಿಕ್ಸ್ ಮಾಡಿ.
ನೊರೆ ನೊರೆ ಬಂದ ನಂತರ 1/4 ಟೀ ಸ್ಪೂನ್ ವೆನಿಲ್ಲಾ ಎಸೆನ್ಸ್, 1/4 ಟೀ ಸ್ಪೂನ್ ಪೈನಾಪಲ್ ಎಸೆನ್ಸ್, 1/4 ಆಲ್ಮಂಡ್ ಎಸೆನ್ಸ್ ಹಾಕಿ, ಯಾವುದಾದರೂ ಮೂರು ಎಸೆನ್ಸ್ ಗಳನ್ನು ಬಳಸಬಹುದು. ಈಗ ಅರ್ಧ ಕಪ್ ಎಣ್ಣೆ ಹಾಕಿ, ಲೈಟ್ ಆಗಿ ಮಿಕ್ಸ್ ಮಾಡಿ, ಫ್ಲೇವರ್ಡ್ ಆಯ್ಲ್ ಬಳಸಬೇಡಿ. 2 ಡ್ರಾಪ್ ಯೆಲ್ಲೋ ಫುಡ್ ಕಲರ್ ಹಾಕಿ ಮಿಸ್ ಮಾಡಿ. ಈಗ ಜಾಲರಿ ಇಟ್ಟು ಒಂದೂವರೆ ಕಪ್ ಮೈದಾ ಹಿಟ್ಟು ಹಾಕಿ, ಜರಡಿ ಕೂಡ ಮಾಡಿಕೊಳ್ಳಿ. ಈಗ ಇದೆಲ್ಲವನ್ನ ಚೆನ್ನಾಗಿ ಮಿಕ್ಸ್ ಮಾಡಿ, ಒಂದು ವೇಳೆ ಗಟ್ಟಿ ಆಗಿದೆ ಎನ್ನಿಸಿದರೆ, ಸ್ವಲ್ಪ ಹಾಲು ಸೇರಿಸಿ ಮಿಕ್ಸ್ ಮಾಡಿ. ಇದನ್ನು ಒಂದು ಕಡೆ ಇಡಿ. ಇನ್ನೊಂದು ಕಡೆ, ಒಂದು ಎರಡು ಸ್ಪೂನ್ ಟೂಟಿ ಫ್ರೂಟಿಗೆ 2 ಸ್ಪೂನ್ ಮೈದಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಓದಿ..Bank: ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ಕೊಟ್ಟ ಬ್ಯಾಂಕ್: ಇನ್ನು ಮುಂದೆ ಹಣ ಗಳಿಸೋದು ಮತ್ತಷ್ಟು ಸುಲಭ ಹಾಗೂ ಹೆಚ್ಚು ಕೂಡ.
ಹೀಗೆ ಮಾಡಿದರೆ ಟೂಟಿ ಫ್ರೂಟಿ ಕೆಳಗೆ ಹೋಗಿ ಕೂರೋದಿಲ್ಲ. ಸ್ವಲ್ಪ ಟೂಟಿ ಫ್ರೂಟಿಗಳನ್ನು ಉಳಿಸಿಕೊಂಡು, ಉಳಿದಿದ್ದೆಲ್ಲವನ್ನು ಕೇಕ್ ಬ್ಯಾಟರ್ ಗೆ ಹಾಕಿ ಮಿಕ್ಸ್ ಮಾಡಿ.ಟಿನ್ ರೆಡಿ ಮಾಡಿಕೊಳ್ಳೋದಕ್ಕೆ, ಬ್ರೆಡ್ ಮಾಡುವ ಟಿನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ, ಎಲ್ಲಾ ಕಡೆ ಸವರಿ. ಈಗ ಟಿನ್ ನ ಸುತ್ತ ಬಟರ್ ಪೇಪರ್ ಹಾಕಿ, ಆಗ ಕೇಕ್ ಸುಲಭವಾಗಿ ಹೊರಗೆ ಬರುತ್ತದೆ. ಈಗ ಬಟರ್ ಪೇಪರ್ ಮೇಲೆ ಸ್ವಲ್ಪ ಎಣ್ಣೆ ಹಾಕಿ, ಸವರಿ. ಹೀಗೆ ಮಾಡೋದ್ರಿಂದ ಕೇಕ್ ಕಿತ್ತುಕೊಳ್ಳಲ್ಲ, ಅಂಟಿಕೊಳ್ಳಲ್ಲ. ಈಗ ಪೂರ್ತಿ ಬ್ಯಾಟರ್ ಅನ್ನು ಟಿನ್ ಗೆ ಹಾಕಿ, ನೀಟ್ ಆಗಿ ಹರಡಿ, ಒಂದೆರಡು ಸಾರಿ ಟ್ಯಾಪ್ ಮಾಡಿ. ಈಗ ಅದರ ಮೇಲೆ ಇಟ್ಟಿರುವ ಸ್ವಲ್ಪ ಟೂಟಿ ಫ್ರೂಟಿಯನ್ನು ಉದುರಿಸಿ.
ಪ್ರೀ ಹೀಟ್ ಮಾಡಿರುವ ಪಾತ್ರೆಯ ಒಳಗೆ ಟಿನ್ ಇಟ್ಟು, 45 ರಿಂದ 55 ನಿಮಿಷಗಳ ಕಾಲ ಬೇಕ್ ಮಾಡಿ, ಆಗಾಗ ತೆಗೆದು ಚೆಕ್ ಮಾಡಿ. 55 ನಿಮಿಷ ಆದಮೇಲೆ ಚೆನ್ನಾಗಿ ಕುಕ್ ಆಗಿರುತ್ತೆ. ಟೂತ್ ಪಿಕ್ ಇಂದ ಚುಚ್ಚಿ ಚೆಕ್ ಮಾಡಿ. ಕೇಕ್ ಸ್ವಲ್ಪ ಕೂಡ ಅಂಟಿಕೊಳ್ಳದೆ ಇದ್ದರೆ, ಕೇಕ್ ಸರಿಯಾಗಿ ಆಗಿದೆ ಎಂದು ಅರ್ಥ. ಇದನ್ನು ಈಗ 2 ಗಂಟೆಗಳ ಕಾಲ ಹಾಗೆಯೇ ಬಿಡಿ. ಈಗ ಕೇಕ್ ಅನ್ನು ಡೀ ಮೋಲ್ಡ್ ಮಾಡಿ, ಸುತ್ತ ಹಾಕಿರುವ ಬಟರ್ ಪೇಪರ್ ತೆಗೆದುಹಾಕಿ. ಕೇಕ್ ಅನ್ನು ಸ್ಪೈಸ್ ಗಳಾಗಿ ಕಟ್ ಮಾಡಿ. ಈ ಕೇಕ್ ತುಂಬಾ ಚೆನ್ನಾಗಿ ಬಂದಿರುತ್ತದೆ. ನೀವು ಮನೆಯಲ್ಲಿ ತಪ್ಪದೇ ಟ್ರೈ ಮಾಡಿ. ಇದನ್ನು ಓದಿ..Kannada News: ತಾನೊಬ್ಬಳು ನಟಿ ಎನ್ನುವುದನ್ನು ಮರೆತು, ಸಲ್ಮಾನ್ ಕುರಿತು ಅಸಲಿ ಸತ್ಯವನ್ನು ಎಲ್ಲರ ಮುಂದೆ ಬಿಚ್ಚಿಟ್ಟ ನಟಿ ಸ್ವರ ಭಾಸ್ಕರ್. ಹೇಳಿದ್ದೇನು ಗೊತ್ತೇ??
Comments are closed.