Cricket News: ಒಂದು ಸಾಲದು ಎಂದು ಎರೆಡು ಅಥವಾ ಮೂರು ಬಾರಿ ಮದುವೆಯಾದ ಟಾಪ್ ಕ್ರಿಕೆಟಿಗರು ಯಾರ್ಯಾರು ಗೊತ್ತೇ??
Cricket News: ಮದುವೆ ಎನ್ನುವುದು ಎಲ್ಲರ ಜೀವನದಲ್ಲಿ ಬಹಳ ವಿಶೇಷವಾದ ಸಂಭ್ರಮ. ಸಾಮಾನ್ಯ ಜನರ ಮದುವೆಗಿಂತ ಸೇಲೆಬ್ರಿಟಿಗಳ ಮದುವೆ ಜೋರಾಗಿ ಸದ್ದು ಮಾಡುತ್ತದೆ, ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆದುಕೊಳ್ಳುತ್ತದೆ. ಕೆಲವು ಸೆಲೆಬ್ರಿಟಿಗಳು ಒಂದಕ್ಕಿಂತ ಹೆಚ್ಚು ಮದುವೆಯಾಗಿ ಸುದ್ದಿಯಾಗಿದ್ದಾರೆ. ಇಂದು ನಾವು ಒಂದಕ್ಕಿಂತ ಹೆಚ್ಚು ಬಾರಿ ಮದುವೆ ಆಗಿರುವ ಕ್ರಿಕೆಟ್ ಲೋಕದ ಸೆಲೆಬ್ರಿಟಿಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಯಾವೆಲ್ಲಾ ಕ್ರಿಕೆಟಿಗರು ಒಂದಕ್ಕಿಂತ ಹೆಚ್ಚು ಬಾರಿ ಮದುವೆಯಾಗಿದ್ದಾರೆ ಎಂದು ನೋಡೋಣ ಬನ್ನಿ..
ಮೊಹಮ್ಮದ್ ಅಜರುದ್ದೀನ್ :- ಇಂಡಿಯನ್ ಕ್ರಿಕೆಟ್ ಟೀಮ್ ನ ಕ್ಯಾಪ್ಟನ್ ಆಗಿದ್ದ ಇವರು, ಭಾರತದ ಪರವಾಗಿ 99 ಟೆಸ್ಟ್ ಮ್ಯಾಚ್ ಗಳು ಹಾಗು 334 ಒನ್ ಡೇ ಮ್ಯಾಚ್ ಗಳನ್ನು ಆಡಿದ್ದಾರೆ. ಕ್ರಿಕೆಟ್ ನಲ್ಲಿ ಮಾಡಿರುವ ಸಾಧನೆಗಳು ಮಾತ್ರವಲ್ಲದೆ, ಫಿಕ್ಸಿಂಗ್ ಇಂದಾಗಿ ಕುಖ್ಯಾತಿ ಪಡೆದಿದ್ದರು. ಇವರು ಮೊದಲಿಗೆ 1987 ರಲ್ಲಿ ನೌರಿನ್ ಎನ್ನುವವರ ಜೊತೆಗೆ ಮದುವೆಯಾದರು, ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಬಳಿಕ ಅವರಿಗೆ ವಿಚ್ಛೇದನ ನೀಡಿ ಬಾಲಿವುಡ್ ನಟಿ ಸಂಗೀತ ಬಿಜಲನಿ ಅವರೊಡನೆ ಎರಡನೇ ಮದುವೆಯಾದರು. ಈ ದಂಪತಿಗೆ ಇಬ್ಬರು ಗಂಡುಮಕ್ಕಳು ಸಹ ಇದ್ದಾರೆ. 2010ರಲ್ಲಿ ಇವರಿಗೂ ವಿಚ್ಛೇದನ ನೀಡಿದರು. ಇದನ್ನು ಓದಿ..Cricket News: ಮೈದಾನದ ಹೊರಗಡೆಯೂ ಈತ ಕಿಲಾಡಿ. ಈ ಬಾರಿ ಪಟಾಯಿಸಿದ್ದು ಯಾರನ್ನು ಗೊತ್ತೇ?? ದೊಡ್ಡವಳಾದರೂ ನಿಜಕ್ಕೂ ಅಪ್ಸರೆ, ಬಾಯ್ ಬಿಟ್ಟುಕೊಂಡು ನೋಡ್ತೀರಾ. ಯಾರು ಗೊತ್ತೇ??
ಜಾವಾಗಲ್ ಶ್ರೀನಾಥ್ :- ಕರ್ನಾಟಕದಿಂದ ಟೀಮ್ ಇಂಡಿಯಾ ಪ್ರವೇಶಿಸಿ ಅತ್ಯುತ್ತಮವಾದ ಬೌಲರ್ ಎಂದು ಹೆಸರು ಮಾಡಿದವರು ಜಾವಾಗಲ್ ಶ್ರೀನಾಥ್. ಓಡಿಐ ಗಳಲ್ಲಿ ಇವರು ಬರೋಬ್ಬರಿ 300 ವಿಕೆಟ್ಸ್ ಪಡೆದಿದ್ದಾರೆ. ಜಾವಾಗಲ್ ಶ್ರೀನಾಥ್ ಅವರು 1996 ಮೊದಲಿಗೆ ಜ್ಯೋತ್ಸನಾ ಎನ್ನುವವರ ಜೊತೆಗೆ ಮದುವೆಯಾದರು ಆದರೆ ಹೆಚ್ಚು ಸಮಯ ಈ ದಾಂಪತ್ಯ ಜೀವನ ಉಳಿಯಲಿಲ್ಲ. ಇವರಿಗೆ ವಿಚ್ಛೇದನದ ನಂತರ ಪತ್ರಿಕಾ ಸಂಪಾದಕಿ ಆಗಿರುವ ಮಾಧವಿ ಅವರೊಡನೆ ಮದುವೆಯಾದರು.
ವಿನೋದ್ ಕಾಂಬ್ಳಿ :- ಇವರು ಮತ್ತು ಸಚಿನ್ ತೆಂಡುಲ್ಕರ್ ಅವರು ಆಪ್ತ ಗೆಳೆಯರಾಗಿದ್ದರು. ಇವರಿಬ್ಬರು ತಮ್ಮ ಹುಟ್ಟುಹಬ್ಬದ ದಿನವೇ ಶತಕ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎನ್ನಿಸಿಕೊಂಡರು. ಕ್ರಿಕೆಟ್ ನಲ್ಲಿ ಬಹಳಷ್ಟು ಸಾಧನೆ ಮಾಡಿದ ಇವರು ವೈಯಕ್ತಿಕ ಜೀವನದ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. 1998 ರಲ್ಲಿ ನೋಯೋಲ್ಲಾ ಲೂಯಿಸ್ ಎನ್ನುವವರ ಜೊತೆಗೆ ಮದುವೆಯಾಗುತ್ತಾರೆ. ಆದರೆ ಈ ಜೋಡಿ ಹೆಚ್ಚು ವರ್ಷಗಳ ಕಾಲ ಜೊತೆಯಾಗಿ ಇರಲಿಲ್ಲ. ಇವರಿಗೆ ವಿಚ್ಛೇದನ ನೀಡಿದ ನಂತರ ಫ್ಯಾಶನ್ ಲೋಕದಲ್ಲಿ ಗುರುತಿಸಿಕೊಂಡಿರುವ ಆಂಡ್ರಿಯ ಹೆವಿಟ್ ಎನ್ನುವವರ ಜೊತೆಗೆ ಮದುವೆಯಾಗಿ, ಬಳಿಕ ಇವರು ಕೂಡ ಕ್ರಿಶ್ಚಿಯನ್ ಧರ್ಮಕ್ಕೆ ಹೋಗುತ್ತಾರೆ. ಇದನ್ನು ಓದಿ..Cricket News: ಬಿಗ್ ಷಾಕಿಂಗ್: ವಿರಾಟ್ ಹಾಗೂ ರೋಹಿತ್ ನಡುವೆ ನಡೆಯಿತೇ ಮಹಾಜಗಳ: ಸಾಕ್ಷಿ ಸಮೇತ ಸಿಕ್ಕಿ ಬಿದ್ದ ಮಾಹಿತಿ. ಏನಾಗಿದೆ ಗೊತ್ತೇ??
ದಿನೇಶ್ ಕಾರ್ತಿಕ್ :- ಆರ್.ಸಿ.ಬಿ ತಂಡದ ಆಪತ್ಬಾಂಧವ ಆಗಿದ್ದರು ದಿನೇಶ್ ಕಾರ್ತಿಕ್. ಇವರ ಅದ್ಭುತವಾದ ಬ್ಯಾಟಿಂಗ್ ವೈಖರಿ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ. ಇವರು ಮೊದಲಿಗೆ ಬಾಲ್ಯದ ಗೆಳತಿ ನಿಖಿತಾ ಅವರೊಡನೆ 2007ರಲ್ಲಿ ಮದುವೆಯಾದರು. ಕೆಲ ವರ್ಷಗಳ ನಂತರ ನಿಖಿತಾ ಅವರು ಮತ್ತೊಬ್ಬ ಕ್ರಿಕೆಟಿಗ ಮುರಳಿ ವಿಜಯ್ ಅವರೊಡನೆ ಸಂಬಂಧ ಇಟ್ಟುಕೊಂಡಿದ್ದ ಕಾರಣ, ನಿಖಿತಾ ಅವರಿಗೆ ವಿಚ್ಛೇದನ ನೀಡಿದರು. ಕೆಲ ಸಮಯ ಒಂಟಿಯಾಗಿದ್ದ ದಿನೇಶ್ ಕಾರ್ತಿಕ್ ಅವರು 2015 ರಲ್ಲಿ ಭಾರತೀಯ ಸ್ಕ್ವಾಶ್ ಆಟಗಾರ್ತಿ ದೀಪಿಕಾ ಅವರೊಡನೆ ಮದುವೆಯಾಗಿ ಇಂದು ಸಂತೋಷವಾಗಿದ್ದಾರೆ.
ಅರುಣ್ ಲಾಲ್ :- ಇವರು ಭಾರತ ಕ್ರಿಕೆಟ್ ತಂಡದ ಓಪನರ್ ಆಗಿ ಹಲವು ಪಂದ್ಯಗಳನ್ನು ಆಡಿದ್ದಾರೆ, ಯಶಸ್ಸು ಪಡೆದ ಕ್ರಿಕೆಟರ್. ಮೊದಲಿಗೆ ರೀನಾ ಅವರನ್ನು ಮದುವೆಯಾದರು, ಆದರೆ ಹಲವು ವರ್ಷಗಳು ದಾಂಪತ್ಯ ಜೀವನ ನಡೆಸಿದ ನಂತರ, ವಿಚ್ಚೇದನ ಪಡೆದರು, ಆದರೆ ವಿಚ್ಚೇದನದ ನಂತರ ಕೂಡ ಅವರ ಜೊತೆಯಲ್ಲೇ ಇದ್ದರು. ರೀನಾ ಅವರಿಗೆ ಅನಾರೋಗ್ಯ ಇದ್ದ ಕಾರಣ ಅವರನ್ನು. ನೋಡಿಕೊಳ್ಳುತ್ತಿದ್ದರು. ಆದರೆ ನಂತರ ಇವರು ಅರುಣ್ ಲಾಲ್ ಅವರು 38 ವರ್ಷದ ಬುಲ್ ಬುಲ್ ಎನ್ನುವವರ ಜೊತೆಗೆ ಮದುವೆಯಾದರು. ಇದನ್ನು ಓದಿ..Cricket News: ಭಾರತ ತಂಡದಲ್ಲಿ ಸರ್ಜರಿ ಆರಂಭಿಸಿದ ಪಂದ್ಯ: ಸ್ಟಾರ್ ಆಟಗಾರನಿಗೂ ಕ್ಯಾರೇ ಎನ್ನದೆ ಬೆಂಚ್ ಕಾಯಿಸಿದ ನಾಯಕ. ಹೊರಹೋದವರು ಯಾರು ಗೊತ್ತೇ?
Comments are closed.