Kannada News: ನಿಜಕ್ಕೂ Dr ರಾಜ್ ಹಾಗೂ Dr ವಿಷ್ಣುವರ್ಧನ್ ರವರ ನಡುವೆ ಇತ್ತೇ ‘ಮಹಾ’ ದ್ವೇಷ?? ತೆರೆ ಹಿಂದೆ ನಿಜಕ್ಕೂ ನಡೆದದ್ದು ಏನು ಗೊತ್ತೇ??
Kannada News: ಕನ್ನಡ ಚಿತ್ರರಂಗದ ಮೇರು ನಟರು, ಕನ್ನಡ ಚಿತ್ರರಂಗದ ಎಂದ ತಕ್ಷಣವೇ ನೆನಪಾಗುವವರು ಇಬ್ಬರು ಮೇರು ನಟರು ಡಾ.ರಾಜ್ ಕುಮಾರ್ ಮತ್ತು ಡಾ. ವಿಷ್ಣುವರ್ಧನ್. ಚಿತ್ರರಂಗಕ್ಕೆ ಇವರಿಬ್ಬರ ಕೊಡುಗೆ ಬಹಳ ದೊಡ್ಡದು, ಆದರೆ ಇವರಿಬ್ಬರ ನಡುವೆ ವೈಯಕ್ತಿಕವಾಗಿ ದ್ವೇಷ ಇತ್ತು, ಇಬ್ಬರ ನಡುವೆ ಎಲ್ಲವೂ ಸರಿ ಇರಲಿಲ್ಲ ಎನ್ನುವ ಅನೇಕ ವಿಚಾರಗಳು ಬಹಳ ವರ್ಷಗಳಿಂದ ಕೇಳಿಬಂದಿವೆ. ಈ ಇಬ್ಬರು ನಟರ ಅಭಿಮಾನಿಗಳ ನಡುವೆ ಕೂಡ ಆಗಾಗ ಫ್ಯಾನ್ ವಾರ್ ನಡೆಯುತ್ತಿರುತ್ತದೆ. ಇವರ ನಡುವೆ ಸ್ನೇಹ ಹೇಗಿತ್ತು ಎನ್ನುವ ಪ್ರಶ್ನೆ ಹಲವರಲ್ಲಿ ಈಗಲೂ ಇದೆ..
ಗಂಧದಗುಡಿ ಸಿನಿಮಾ ಚಿತ್ರೀಕರಣದ ನಡುವೆ ನಡೆದ ಒಂದು ಘಟನೆ ಇಂದ ಎಲ್ಲರೂ ತಪ್ಪುತಿಳಿದುಕೊಂಡರು. ಆ ಘಟನೆ ನಡೆದಾಗ ವಿಷ್ಣುವರ್ಧನ್ ಅವರು ಅಲ್ಲಿರಲಿಲ್ಲ, ಅದು ಸಾಬೀತಾಯಿತು. ಅವರಿಬ್ಬರ ನಡುವೆ ಒಳ್ಳೆಯ ಸ್ನೇಹ ಇತ್ತು, ಇಬ್ಬರು ಕೂಡ ಒಬ್ಬರನ್ನೊಬ್ಬರು ಗೌರವಿಸುತ್ತಿದ್ದರು. ಬಹಳ ವರ್ಷಗಳ ನಂತರ ಅಭಿಮಾನಿಗಳಲ್ಲಿ ಮೂಡಿದ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಉತ್ತರ ಸಿಕ್ಕಿದೆ, ಹಿರಿಯ ಪತ್ರಕರ್ತ ಬಿ.ಗಣಪತಿ ಅವರು ಒಂದು ಸಂದರ್ಭದ ಬಗ್ಗೆ ಹೇಳಿದ್ದಾರೆ, ಯಜಮಾನ ಸಿನಿಮಾ ಬಿಡುಗಡೆ ಆದಾಗ, ಅಣ್ಣಾವ್ರು ಸಿನಿಮಾ ನೋಡಿ ಅವರಿಗೆ ತುಂಬಾ ಇಷ್ಟವಾಗಿ, ವಿಷ್ಣುವರ್ಧನ್ ಅವರಿಗೆ ತಕ್ಷಣವೇ ಕರೆ ಮಾಡಿದ್ದರಂತೆ.. ಇದನ್ನು ಓದಿ..ಕುದ್ದು ಅಂಬರೀಷ್ ರವರು ವಿಷ್ಣು ಸರ್ ರವರ ಮನೆಗೆ ಊಟಕ್ಕೆ ಬಂದಾಗ ಅಲ್ಲಿ ನಡೆದದ್ದು ಏನು ಗೊತ್ತೇ? ಅಂಬರೀಷ್ ಮಾತು ಕೇಳಿ, ವಿಷ್ಣು ಏನು ಮಾಡಿದ್ದರು ಗೊತ್ತೇ??
ಈ ಕೂಡಲೇ ನಿಮ್ಮನ್ನ ನೋಡಬೇಕು, ಅಪ್ಪಿಕೊಳ್ಳಬೇಕು ಅನ್ನಿಸಿದೆ ಎಂದು ಹೇಳಿದ್ರಂತೆ. ಆದರೆ ಆ ದಿನ ವಿಷ್ಣುವರ್ಧನ್ ಅವರು ಶೂಟಿಂಗ್ ನಲ್ಲಿ ಇದ್ದ ಕಾರಣ, ಅಣ್ಣಾವ್ರು ಭೇಟಿ ಮಾಡಲು ಆಗಲಿಲ್ಲ, ಕೊನೆಗೂ ಅದು ನಡೆಯಲೇ ಇಲ್ಲ ಎಂದು ಅವರಿಗು ಬೇಸರವಿತ್ತು. ಹಿರಿಯ ನಿರ್ದೇಶಕ ಎಸ್.ಕೆ.ಭಗವಾನ್ ಅವರು ತಿಳಿಸಿದ ಹಾಗೆ, ಅವರು ವಿಷ್ಣುವರ್ಧನ್ ಅವರೊಡನೆ ನೀನು ನಕ್ಕರೆ ಹಾಲು ಸಕ್ಕರೆ ಸಿನಿಮಾದಲ್ಲಿ ಕೆಲಸ ಮಾಡಿದ್ದರು, ಆಗ ಭಗವಾನ್ ಅವರು, ಅಣ್ಣಾವ್ರು ನೀವು ಇರುವುದು ಒಂದೇ ರೀತಿ, ಅವರು ನಂಬರ್1, ನೀವು ಕೂಡ ನಂಬರ್ 1 ಎಂದು ಹೇಳಿದಾಗ ವಿಷ್ಣುವರ್ಧನ್ ಅವರು, ಅಣ್ಣಾವ್ರು ಮಾತ್ರ ಯಾವತ್ತಿಗೂ ನಂಬರ್1 ಎಂದು ಹೇಳಿದ್ದರಂತೆ. ಇವರಿಬ್ಬರಿಗೂ ಒಬ್ಬರ ಮತ್ತೊಬ್ಬರಿಗೆ ಬಹಳಷ್ಟು ಪ್ರೀತಿ ಗೌರವ ಇತ್ತು ಎನ್ನುವುದು ಈ ಘಟನೆಗಳಿಂದಲೇ ಗೊತ್ತಾಗುತ್ತದೆ. ಇದನ್ನು ಓದಿ..Kannada News: ಒಮ್ಮೆ ಹೇಳಿದರೆ ಕೇಳೋದಿಲ್ಲವೇ ಸಮಂತಾ?? ಬೇಡ ಬೇಡ ಎಂದರು ಮತ್ತದೇ ಕೆಲಸ ಮಾಡುತ್ತಿರುವುದು ಯಾಕೆ ಗೊತ್ತೆ? ಸ್ವಲ್ಪ ದಿನ ತಡೆದುಕೊಳ್ಳಿ.
Comments are closed.