Kannada News: ತಾಯಿ ಚಾಮುಂಡಿ ಮೇಲೆ ಆಣೆ ಮಾಡಿ ಗಟ್ಟಿ ನಿರ್ಧಾರ ತೆಗೆದುಕೊಂಡ ಸುಮಲತಾ: ಅಂಬಿ ಅಭಿಮಾನಿಗಳಿಗೆ ಬಾರಿ ನಿರಾಸೆ. ಏನಾಗಿದೆ ಗೊತ್ತೇ?
Kannada News: ಸುಮಲತಾ ಅಂಬರೀಷ್, ಈ ನಟಿ ಹೊಸದಾಗಿ ಪರಿಚಯ ನೀಡುವ ಅವಶ್ಯಕತೆಯೇ ಇಲ್ಲ. ಈ ನಟಿ ಸದ್ಯದಲ್ಲಿ ಬಣ್ಣದ ರಂಗದಲ್ಲಿ ಹಾಗೂ ರಾಜಕೀಯ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಇನ್ನೂ ಈ ನಟಿ ಬಣ್ಣದ ಲೋಕಕ್ಕೆ ಗುರುತಿಸಿಕೊಂಡು ದಶಕಗಳು ಕಳೆದಿವೆ ಹೀಗಿದ್ದರೂ ಕೂಡ ತೆರೆಯ ಮೇಲೆ ತಮಗಿರುವ ಕ್ರೇಜ್ ನನ್ನು ಹಾಗೆ ಕಾಪಾಡಿಕೊಂಡು ಬಂದಿದ್ದಾರೆ. ನಮ್ಮ ಸ್ಯಾಂಡಲ್ ವುಡ್ ನ ರೆಬಲ್ ಸ್ಟಾರ್ ಅಂಬರೀಷ್ ಅವರ ಅಗಲಿಕೆಯ ನಂತರ ಅವರು ರಾಜಕೀಯ ರಂಗದಲ್ಲಿ ಮಾಡುತ್ತಿದ್ದ ಸತ್ಕಾರ್ಯ ಗಳನ್ನ ಮುಂದುವರೆಸುವ ಸಲುವಾಗಿ ರಾಜಕೀಯ ಪ್ರವೇಶ ಮಾಡಿದರು. ಸುಮಲತಾ ಅವರಿಗೆ ಯಾವ ಪಕ್ಷದ ಬೆಂಬಲ ನೀಡದಿದ್ದರೂ ಕೂಡ ಏಕಾಂಗಿಯಾಗಿ ನಿಂತು ಭಾರಿ ಮೊತ್ತದ ವೋಟ್ ಪಡೆದು ಇಂದು ಮಂಡ್ಯ ಜಿಲ್ಲೆಯ ಸಂಸದೆ ಆಗಿದ್ದಾರೆ.
ಇದೀಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ವಿಚಾರ ಎಂದರೆ ಅದು ಸುಮಲತಾ ಅವರು ಈ ಭಾರಿ ಚುನಾವಣೆಗೆ ಬಿಜೆಪಿ ಪಕ್ಷ ಸೇರುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ಈ ವಿಚಾರದ ಬಗ್ಗೆ ಯಾವ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ. ಆದರೆ ಇದೀಗ ಇದರ ಬೆನ್ನಲ್ಲೇ ಅಭಿಷೇಕ್ ಅಂಬರೀಷ್ ಕೂಡ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಎಲ್ಲಾ ಗಾಳಿ ಸುದ್ದಿಗೆ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರು ಮೊನ್ನೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸ್ಪಷ್ಟತೆ ನೀಡಿದ್ದಾರೆ. ಅಂಬರೀಷ್ ಕೂಡ ಚಿತ್ರ ರಂಗಕ್ಕೆ ಗುರುತಿಸಿಕೊಂಡು ನಾಲ್ಕು ವರ್ಷಗಳು ಕಳೆದಿವೆ. ಈತ ಮಾಡಿರುವುದು ಕೇವಲ ಒಂದು ಸಿನಿಮಾ ಹೀಗಿದ್ದರೂ ತಮ್ಮ ಒಂದೇ ಸಿನಿಮಾದ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾರೆ ಎಂದರೆ ತಪ್ಪಾಗಲಾರದು. ಇವರ ಎರಡನೇ ಸಿನಿಮಾ ಕೂಡ ನಮ್ಮ ಚಂದನವನದಲ್ಲಿ ಭಾರಿ ಹೈಪ್ ಈಗಾಗಲೇ ಶ್ರುಷ್ಟಿ ಮಾಡಿದೆ ಎಂದರೆ ತಪ್ಪಾಗಲಾರದು. ಇದನ್ನು ಓದಿ..Film News: ಕುಡಿದ ಮತ್ತಿನಲ್ಲಿ ನಿರ್ಮಾಪಕ ಮಗ ಖ್ಯಾತ ನಟಿಗೆ ಏನು ಮಾಡಿದ್ದರಂತೆ ಗೊತ್ತೆ? ನಟಿ ಸ್ವಾತಿ, ಇದೀಗ ವಾಪಸ್ಸು ಬಂದದ್ದು ಯಾಕೆ ಗೊತ್ತೇ??
ಇದೀಗ ಅಭಿಷೇಕ್ ಅಂಬರೀಷ್ ಚಿತ್ರ ರಂಗದ ಜೊತೆಗೆ ತನ್ನ ತಂದೆ ತಾಯಿಯಂತೆ ರಾಜಕೀಯ ರಂಗಕ್ಕೂ ಪ್ರವೇಶ ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತಿತ್ತು. ಆದರೆ ಮೊನ್ನೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ನಟಿ ಸುಮಲತ ಅಂಬರೀಷ್ ತಾಯಿ ಚಾಮುಂಡಿ ಮೇಲೆ ಆಣೆ ಮಾಡಿ ಹೇಳುತ್ತೇನೆ ನಾನು ನನ್ನ ಮಗನಿಗೆ ಯಾವ ಪಕ್ಷದ ಸದಸ್ಯರ ಬಳಿ ಟಿಕೆಟ್ ಮನವಿ ಮಾಡಿಲ್ಲ. ಹಾಗೆ ನಾನು ರಾಜಕೀಯ ರಂಗದಲ್ಲಿ ಇರುವ ವರೆಗೂ ಕೂಡ ಅಭಿಷೇಕ್ ರಾಜಕೀಯಕ್ಕೆ ಬರುವುದಿಲ್ಲ ಇಷ್ಟಂತು ಸ್ಪಷ್ಟತೆ ಇರಲಿ. ಹಾಗೇನಾದರೂ ನಾನು ಪಕ್ಷದವರ ಬಳಿ ಟಿಕೆಟ್ ಕೇಳಿದ್ರೆ ನಾನು ಅಂಬರೀಷ್ ಅವರ ಪತ್ನಿ ಎಂದು ಕರೆಸಿಕೊಳ್ಳಲು ಲಾಯಕ್ಕೆ ಇಲ್ಲ. ನಾನು ಕೇಳಿದ್ದೆ ಆದಲ್ಲಿ ಆ ತಾಯಿ ಚಾಮುಂಡಿ ಮುಂದಿನ ನಿರ್ಧಾರ ಮಾಡಲಿ ಎಂದು ಹೇಳುವ ಮುಖಾಂತರ ಎಲ್ಲಾ ಗಾಳಿ ಸುದ್ದಿಗೂ ಬ್ರೇಕ್ ಹಾಕಿದ್ದಾರೆ. ಈಗ ಸುಮಲತಾ ಮತ್ತೆ ಒಬ್ಬಂಟಿಯಾಗಿ ನಿಲ್ಲುತ್ತಾರ ಅಥವಾ ಯಾವುದಾದರೂ ಪಕ್ಷದವರ ಬೆಂಬಲ ಪಡೆದು ಪಕ್ಷಕ್ಕೆ ಸೇರುತ್ತಾರ ಎಂಬ ಪ್ರಶ್ನೆ ಹಾಗೂ ಕುತೂಹಲ ಎಲ್ಲರಲ್ಲೂ ಮೂಡಿದೆ. ಇದನ್ನು ಓದಿ..Film News: ಕೊನೆಗೂ ಸಿಕ್ತು ವಿಡಿಯೋ: ನಟಿ ಹನಿ ರೋಜ್ ನಡೆದು ಬರುತ್ತಿದ್ದರೇ ಬಾಲಯ್ಯ ಪ್ರತಿಕ್ರಿಯೆ ಹೇಗಿದೆ ಗೊತ್ತೇ? ನಟಿಗೆ ಮನಸೋತರೇ? ಏನಾಗಿದೆ ಗೊತ್ತೇ??
Comments are closed.