Neer Dose Karnataka
Take a fresh look at your lifestyle.

Bhagyalakshmi: ಪ್ರೇಕ್ಷಕರಿಗೆ ಶಾಕ್ ಮೇಲೆ ಶಾಕ್: ಲಕ್ಷ್ಮಿ ವಿಚಾರದಲ್ಲಿ ಉಲ್ಟಾ ಹೊಡೆದ ಕಾವೇರಿ: ಕೀರ್ತಿ ಹೇಳಿದ್ದು ಸತ್ಯ. ಪ್ರೇಕ್ಷಕರ ಲೆಕ್ಕಾಚಾರ ಉಲ್ಟಾ: ಏನಾಗಿದೆ ಗೊತ್ತೇ??

8,145

Bhagyalakshmi: ಭಾಗ್ಯಲಕ್ಷ್ಮಿ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ, ಕಥೆಯಲ್ಲಿ ಯಾರು ಊಹಿಸಿರದ ಟ್ವಿಸ್ಟ್ ಗಳನ್ನು ನೀಡುತ್ತಾ, ಪ್ರೇಕ್ಷಕರು ತಪ್ಪದೇ ಈ ಧಾರವಾಹಿ ನೋಡುವ ಹಾಗೆ ಮಾಡುತ್ತಿದೆ ಟೀಮ್. ಇದೀಗ ಯಾರು ಕೂಡ ಹೀಗೆ ನಡೆಯಬಹುದು ಎನ್ನಿಸುವ ಹಾಗೆ ಟ್ವಿಸ್ಟ್ ನೀಡಿದ್ದಾರೆ. ಅದೇನೆಂದರೆ, ವೈಷ್ಣವ್ ಕೀರ್ತಿ ಮದುವೆ ನಡೆದ ನಂತರ ಕಾವೇರಿ ಉಲ್ಟಾ ಹೊಡೆದಿದ್ದು, ಕೀರ್ತಿ ಬಿಗ್ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ್ದಾಳೆ. ಅಷ್ಟಕ್ಕೂ ಆಗಿರೋದೇನು? ತಿಳಿಸುತ್ತೇವೆ ನೋಡಿ..

ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ವೈಷ್ಣವ್ ಕೀರ್ತಿಯನ್ನು ಪ್ರೀತಿ ಮಾಡುತ್ತಿದ್ದು, ಮದುವೆಯಾದರೆ ಕೀರ್ತಿಯನ್ನೇ ಎಂದು ನಿರ್ಧಾರ ಮಾಡಿ, ಮನೆಯಲ್ಲಿ ಒಪ್ಪಿಸಿ, ಎಂಗೇಜ್ಮೆಂಟ್ ಆಗಬೇಕು ಎನ್ನುವ ಸಮಯಕ್ಕೆ ಕೀರ್ತಿ ಉಲ್ಟಾ ಹೊಡೆಯುತ್ತಾಳೆ, ನಾನು ಈ ಎಂಗೇಜ್ಮೆಂಟ್ ಆಗುವುದಿಲ್ಲ ವೈಷ್ಣವ್ ನನಗೆ ಬೇಡ ಎಂದು ಬ್ರೇಕಪ್ ಮಾಡಿಕೊಳ್ಳುತ್ತಾಳೆ. ಕೀರ್ತಿಯನ್ನು ಒಪ್ಪಿಸಲು, ಅರ್ಥ ಮಾಡಿಸಲು ಎಷ್ಟೇ ಪ್ರಯತ್ನ ಪಟ್ಟರು ಕೂಡ ಅದು ನಡೆಯುವುದಿಲ್ಲ. ಕೊನೆಗೆ ಏನೋ ಮಾಡಲು ಹೋಗಿ, ಇನ್ನೇನೋ ಆಗಿ ವೈಷ್ಣವ್ ಮದುವೆ ಲಕ್ಷ್ಮಿ ಜೊತೆ ಫಿಕ್ಸ್ ಆಗುತ್ತದೆ.. ಇದನ್ನು ಓದಿ..Kannada News: ಅಂದು ನಟನೆ ಬಿಟ್ಟು ಹಿಜಾಬ್ ಧರಿಸಿ ಮೌಲ್ವಿಯನ್ನು ಮದುವೆಯಾಗಿದ್ದ ನಟಿ ಈಗ ಹೇಗಿದ್ದಾರೆ ಗೊತ್ತೆ? ಎಂತಹ ಪರಿಸ್ಥಿತಿಗೆ ಬಂದಿದ್ದಾರೆ ಗೊತ್ತೇ??

ವೈಷ್ಣವ್ ಕೊನೆಗೆ ಕೀರ್ತಿಯನ್ನೇ ಮದುವೆ ಆಗಬೇಕು ಎಂದು ಅವಳನ್ನು ಫ್ರೆಂಡ್ ಆಗಿ ಮದುವೆ ಮಂಟಪಕ್ಕೆ ಕರೆತರುತ್ತಾನೆ. ಆದರೆ ಅದು ಕೂಡ ನಷ್ಟವಾಯಿತು. ವೈಷ್ಣವ್ ಕೀರ್ತಿಯನ್ನು ಪ್ರೀತಿ ಮಾಡುತ್ತಿರುವ ವಿಚಾರ ಲಕ್ಷ್ಮಿಗೆ ಮತ್ತು ಭಾಗ್ಯಳಿಗೆ ಗೊತ್ತಾಗದ ಹಾಗೆ ತಡೆಯಬೇಕು ಎಂದುಕೊಂಡರು, ಲಕ್ಷ್ಮಿಗೆ ವಿಷಯ ಗೊತ್ತಾಗಿ, ಅವಳು ಈ ಮದುವೆ ಬೇಡ ಅಂದು, ಲಕ್ಷ್ಮಿ ಮಂಟಪದಿಂದ ಎಲ್ಲೋ ಹೋಗಿ, ಕೊನೆಗೆ ವೈಷ್ಣವ್ ಲಕ್ಷ್ಮಿಯನ್ನು ಹುಡುಕಿ, ಮದುವೆಗೆ ಒಪ್ಪಿಸಿ ಕರೆತರುತ್ತಾನೆ.

ಇಬ್ಬರ ಮದುವೆ ದೊಡ್ಡವರ ಎದುರಲ್ಲಿ ನಡೆದಿದೆ. ಲಕ್ಷ್ಮಿಯನ್ನು ಮನೆ ತುಂಬಿಸಿಕೊಂಡಿದ್ದು ಕೂಡ ಆಗಿದೆ. ಆದರೆ ಈ ಸಮಯದಲ್ಲಿ ಕೀರ್ತಿ ಹೊಸ ಬಾಂಬ್ ಸಿಡಿಸಿದ್ದಾಳೆ, ಮುಂದೆ ತನ್ನ ಮದುವೆ ವೈಷ್ಣವ್ ಜೊತೆ ಖಂಡಿತವಾಗಿ ಆಗುತ್ತೆ, ಅದನ್ನು ವೈಷ್ಣವ್ ಅಮ್ಮ ಕಾವೇರಿ ನಡೆಸಿಕೊಡುತ್ತಾರೆ ಎಂದು ಹೇಳಿದ್ದಾಳೆ, ಆ ಮಾತು ಕೀರ್ತಿ ಅಮ್ಮ ಶಾಕ್ ಆಗಿ, ಏನ್ ಹೇಳ್ತಿದ್ದೀಯಾ ಇದೆಲ್ಲಾ ಹೇಗೆ ನಡೆಯುತ್ತೆ ಎಂದು ಕೇಳಿದಾಗ, ಕೀರ್ತಿ ಶಾಕ್ ಆಗುವ ಸತ್ಯವನ್ನು ರಿವೀಲ್ ಮಾಡಿದ್ದಾಳೆ. ಇದನ್ನು ಓದಿ..Kannada News: ಹುಡುಗಿಯರಿಗೆ ಅದು ಜಾಸ್ತಿ, ಅದನ್ನು ತೀರಿಸಲು ಬಾಯ್ ಫ್ರೆಂಡ್ ಬೇಕೇ ಬೇಕು: ಇರುವುದೆಲ್ಲವನ್ನು ಬಿಚ್ಚಿಟ್ಟು ನಟಿ ಹೇಳಿದ್ದೇನು ಗೊತ್ತೆ??

ಕಾವೇರಿ ಕೀರ್ತಿಯನ್ನು ಅವಳ ಮನೆಯಲ್ಲಿ ಭೇಟಿ ಮಾಡಿ, ವೈಷ್ಣವ್ ಜಾತಕದಲ್ಲಿ ಪ್ರಾಣಾಪಾಯ ಇದೆ, ಅದು ಸರಿ ಹೋಗಬೇಕು ಅಂದ್ರೆ ಇಂಥದ್ದೇ ಜಾತಕ ನಕ್ಷತ್ರ ಇರುವ ಹುಡುಗಿಯ ಜೊತೆಗೆ ಮದುವೆ ಮಾಡಬೇಕು, ಆಗ ಮಾತ್ರ ವೈಷ್ಣವ್ ಪ್ರಾಣಾಪಾಯದಿಂದ ಪಾರಾಗುತ್ತಾನೆ, ಅದಾದಮೇಲೆ ನಾನೇ ನಿಂತು ನಿಮ್ಮಿಬ್ಬರ ಮದುವೆ ಮಾಡಿಸುತ್ತೇನೆ ಎಂದು ಕಾವೇರಿ ಹೇಳುತ್ತಾಳೆ. ವೈಷ್ಣವ್ ಪ್ರಾಣಕ್ಕೆ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಕೀರ್ತಿ ಈ ಮದುವೆ ನಡೆಯಲು ಒಪ್ಪಿಗೆ ಕೊಟ್ಟಿರುವುದಾಗಿ ಹೇಳುತ್ತಾಳೆ.

ಕೀರ್ತಿ ರಿವೀಲ್ ಮಾಡಿರುವ ಈ ವಿಚಾರ ಈಗ ಭಾರಿ ಟ್ವಿಸ್ಟ್ ಅನ್ನೇ ನೀಡಿದೆ. ಕೀರ್ತಿ ಮಾತು ನಿಜವೇ ಆಗಿ, ಕಾವೇರಿ ಲಕ್ಷ್ಮಿ ವಿಚಾರದಲ್ಲಿ ಹೀಗೆ ಉಲ್ಟಾ ಹೊಡೆಯುತ್ತಿದ್ದಳಾ ಎನ್ನುವ ಚರ್ಚೆ ಧಾರವಾಹಿ ನೋಡುತ್ತಿರುವ ವೀಕ್ಷಕರಲ್ಲಿ ಶುರುವಾಗಿದೆ. ಎಲ್ಲರೂ ಕಾವೇರಿ ಬಗ್ಗೆ ಅಂದುಕೊಂಡಿದ್ದು ಈಗ ಉಲ್ಟಾ ಆಗಿದೆ ಎಂದೇ ಹೇಳಬಹುದು. ಮುಂದೆ ಕಾವೇರಿ ಇನ್ನೇನು ಟ್ವಿಸ್ಟ್ ಕೊಡುತ್ತಾಳೆ ಎಂದು ವೀಕ್ಷಕರು ಕೂಡ ಈಗ ಕಾಯುತ್ತಿದ್ದಾರೆ. ಇದನ್ನು ಓದಿ..Kannada News: ಎಲ್ಲವನ್ನು ಒಪ್ಪಿಕೊಂಡ ನಯನತಾರ: ಖ್ಯಾತ ನಿದೇಶಕ ಮುರುಗದಾಸ್ ಮೇಲೆ ನೇರವಾಗಿ ಹೇಳಿದ್ದೇನು ಗೊತ್ತೇ? ಆತ ಮೋಸ ಮಾಡಿದ್ದು ಹೇಗೆ ಅಂತೇ ಗೊತ್ತೇ?

Leave A Reply

Your email address will not be published.