Kannada News: ಸಾಕಷ್ಟು ಕಷ್ಟ, ಅನಾರೋಗ್ಯ ಇವೆಲ್ಲದರ ನಡುವೆಯೂ ಮತ್ತೊಂದು ಕಾರ್ಯಕ್ಕೆ ಕೈ ಹಾಕಿದ ವಿನೋದ್ ಅಣ್ಣ ಹಾಗೂ ಲೀಲಾವತಿ ಅಮ್ಮ. ಏನು ಮಾಡುತ್ತಿದ್ದಾರೆ ಗೊತ್ತೇ?
Kannada News: ಚಂದನವನದ ಖ್ಯಾತ ಹಿರಿಯನಟಿ ಲೀಲಾವತಿ ಅವರು ಇಂದು ಚಿತ್ರರಂಗದಿಂದ ದೂರವೇ ಉಳಿದು ಮಗನ ಜೊತೆಗೆ ನೆಲಮಂಗಲದ ಬಳಿ ಇರುವ ಹಳ್ಳಿಯೊಂದರಲ್ಲಿ ವಾಸ ಮಾಡುತ್ತಿದ್ದಾದೆ. ಇವರಿಬ್ಬರು ಹಳ್ಳಿಗೆ, ಹಳ್ಳಿಯ ಜನರಿಗೆ ಸಹಾಯ ಮಾಡುವಂಥ ಅನೇಕ ಕೆಲಸಗಳನ್ನು ಮಾಡಿ, ಸಮಾಜ ಸೇವಕರಾಗಿದ್ದಾರೆ. ತಾವೇ ಬಹಳ ಕಷ್ಟದಲ್ಲಿದ್ದರು ಕೂಡ, ಮತ್ತೊಬ್ಬರಿಗೆ ಸಹಾಯ ಮಾಡುತ್ತಿದ್ದಾರೆ.
ಲೀಲಾವತಿ ಅವರು ತಮ್ಮ ಊರಿನ ಜನಕ್ಕಾಗಿ ಒಂದು ಆಸ್ಪತ್ರೆ ಕಟ್ಟಿಸಿಕೊಟ್ಟು, ನಂತರ ಸರ್ಕಾರ ಆ ಆಸ್ಪತ್ರಗೆ ಬೇಕಾದ ವೈದ್ಯರು ಮತ್ತು ಉಪಕರಣಗಳನ್ನು ನೀಡಿತು. ಈ ಪುಣ್ಯದ ಕೆಲಸ ಮಾಡಿದ ನಂತರ ಲೀಲಾವತಿ ಅವರು ಈಗ ಪಶುಗಳಿಗಾಗಿ ಒಂದು ಆಸ್ಪತ್ರೆ ಕಟ್ಟಿಸಲು ಶುರು ಮಾಡಿದ್ದು, ಮಾರ್ಚ್ 20ರಂದು ಆಸ್ಪತ್ರೆಯ ಗುದ್ದಲಿ ಪೂಜೆ ನಡೆದಿದೆ, ಇದರಲ್ಲಿ ಲೀಲಾವತಿ ಅವರು, ವಿನೋದ್ ರಾಜ್ ಅವರು, ಶಾಸಕರಾದ ಶ್ರೀನಿವಾಸ್ ಮೂರ್ತಿ ಹಾಗೂ ಎಮ್.ಎಲ್.ಸಿ ರವಿ ಎಲ್ಲರು ಇದ್ದಾರೆ. ಇದನ್ನು ಓದಿ..Film News: 40 ರ ವಯಸ್ಸಿನಲ್ಲಿಯೂ ತಲೆ ಧೀಮ್ ಅಂದು ಮೈ ಬೆವರುವಂತೆ ಅಂದವನ್ನು ತೋರಿಸುವಂತೆ ಕಾಣಿಸಿಕೊಂಡ ಅಪ್ಸರೆ. ಹುಡುಗರಂತೂ ನಿಂತಲ್ಲೇ ಶೇಕ್.
ಗುದ್ದಲಿ ಪೂಜೆ ಮುಗಿದ ನಂತರ ವಿನೋದ್ ರಾಜ್ ಅವರು ಇದರ ಬಗ್ಗೆ ಮಾತನಾಡಿದ್ದು “ಮನುಷ್ಯರ ಸಹಾಯಕ್ಕೆ ಆಸ್ಪತ್ರೆ ಕಟ್ಟಿಸಿದ್ದೇವೆ, ಪಶುಗಳಿಗೂ ಏನಾದರು ಮಾಡಬೇಕು ಎನ್ನೋದು ಅಮ್ಮನವರ ಆಸೆ ಆಗಿತ್ತು, ಅವರಿಗೆ ಇರುವ ಪ್ರಾಣಿ ಪ್ರೀತಿಗೆ ಮನೆಯಲ್ಲಿ ಒಂದಷ್ಟು ನಾಯಿಗಳಿವೆ..ಈ ಕಾರಣಕ್ಕೆ ಪಶು ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಜಾಗ ಕೊಟ್ಟ ಪಂಚಾಯಿತಿ ಅವರಿಗೆ ಧನ್ಯವಾದಗಳು ಎಂದಿದ್ದಾರೆ ವಿನೋದ್ ರಾಜ್. ಲೀಲಾವತಿ ಅವರು ಕೂಡ ಮಾತನಾಡಿ, ಇದು ನನ್ನೊಬ್ಬಳಿಂದ ಆಗುವ ಕೆಲಸ, ಒಳ್ಳೆಯ ವೈದ್ಯರು ಮತ್ತು ಕೆಲಸಗಾರರನ್ನು ಕೊಡಿ ಎಂದು ಸಿಎಂ ಅವರಲ್ಲಿ ಕೇಳುತ್ತೇನೆ ಎಂದಿದ್ದಾರೆ. ಇದನ್ನು ಓದಿ..Film News: ತನ್ನ ಜೊತೆ ನಟಿಯಾಗಿ ನಟಿಸಿದ್ದ ನಟಿಯನ್ನೇ ಬ್ಲಾಕ್ ಮಾಡಿದ ಅಲ್ಲೂ ಅರ್ಜುನ್: ಆಕೆಯ ಪರಿಸ್ಥಿತಿ ನೋಡಿ ಅಲ್ಲುಗೆ ಏನಾಯ್ತು?? ನಟಿಗೆ ಇಂತಹ ಪರಿಸ್ಥಿತಿ ಬಂದಿದೆ ಗೊತ್ತೇ?
Comments are closed.