Neer Dose Karnataka
Take a fresh look at your lifestyle.

Kannada News: ಸುದೀಪ್ ಬೊಮ್ಮಾಯಿ ಪರ ಪ್ರಚಾರ ಎಂದ ತಕ್ಷಣ, ಇಷ್ಟು ದಿವಸ ಸುಮ್ಮನಿದ್ದ ವಿಷ್ಣು ಅಭಿಮಾನಿಗಳು ಮಾಡಿದ್ದೇನು ಗೊತ್ತೇ?

Kannada News: ಕಿಚ್ಚ ಸುದೀಪ್ (Kiccha Sudeep) ಅವರು ಬಿಜೆಪಿ ಗೆ (BJP) ಸಪೋರ್ಟ್ ಮಾಡುತ್ತಾರೆ ಎನ್ನುವ ವಿಚಾರ ಹೊರಬಂದ ನಂತರ ಬಹಳಷ್ಟು ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕಿಚ್ಚ ಸುದೀಪ್ ಅವರು ಈಗಾಗಲೇ ಬಹಳಷ್ಟು ಒಳ್ಳೆಯ ಕೆಲಸಗಳನ್ನು ತಮ್ಮ ಟ್ರಸ್ಟ್ ವತಿಯಿಂದ ಮಾಡುತ್ತಾ ಬಂದಿದ್ದಾರೆ, ಹಾಗಿರುವಾಗ ಸುದೀಪ್ ಅವರು ರಾಜಕೀಯಕ್ಕೂ ಬಂದರೆ, ಅವರಿಗೆ ಅಧಿಕಾರವು ಸಿಗುತ್ತದೆ, ಹೆಚ್ಚು ಒಳ್ಳೆಯ ಕೆಲಸಗಳನ್ನು ಮಾಡಬಹುದು ಎನ್ನುವ ಅಭಿಪ್ರಾಯ ಕೆಲವು ಅಭಿಮಾನಿಗಳದ್ದು.

ಆದರೆ ಇನ್ನೂ ಕೆಲವು ಅಭಿಮಾನಿಗಳು ಸುದೀಪ್ ಅವರು ರಾಜಕೀಯಕ್ಕೆ ಬರುವುದು ಬೇಡ, ಅವರು ಹೀಗೆಯೇ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಇರಲಿ ಎಂದಿದ್ದಾರೆ. ಸುದೀಪ್ ಅವರು ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಅವರ ಪರವಾಗಿ ಪ್ರಚಾರ ಮಾಡುತ್ತಾರೆ ಎನ್ನುವ ಒಂದು ಸುದ್ದಿ ವೈರಲ್ ಆಗುತ್ತಿದ್ದ, ಹಾಗೆಯೇ ಸುದೀಪ್ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎನ್ನುವ ಮತ್ತೊಂದು ವಿಚಾರ ಕೂಡ ಸದ್ದು ಮಾಡಿತು. ಮಾಧ್ಯಮಗಳಲ್ಲೂ ದೊಡ್ಡದಾಗಿ ತೋರಿಸಲಾಯಿತು. ಇದನ್ನು ಓದಿ..Film News: ಒಂದು ಕಡೆ ಗಂಡನಿಂದ ದೂರವಾಗುತ್ತಿರುವ ನೋವಿನಲ್ಲಿಯೂ ದೀಪಿಕಾ ಪಡುಕೋಣೆ, ಮ್ಯಾನೇಜರ್ ಜೊತೆ ಏನು ಮಾಡಿದ್ದಾರೆ ಗೊತ್ತೇ? ಹಬ್ಬ ಮಾಡಿಕೊಳ್ಳುತ್ತಿರುವ ಫ್ಯಾನ್ಸ್.

ಆದರೆ ಸುದೀಪ್ ಅವರು ಈ ಎಲ್ಲಾ ಪ್ರಶ್ನೆಗಳಿಗೂ ಪ್ರೆಸ್ ಮೀಟ್ ನಲ್ಲಿ ಉತ್ತರ ಕೊಟ್ಟರು. ಸುದೀಪ್ ಅವರು ತಾವು ಚಿತ್ರರಂಗಕ್ಕೆ ಬರುವ ಸಮಯದಲ್ಲಿ ತಮಗೆ ಸಪೋರ್ಟ್ ಆಗಿ ನಿಂತಿದ್ದ ಬಸವರಾಜ್ ಬೊಮ್ಮಾಯಿ ಮಾಮ ಅವರಿಗೆ ಸಪೋರ್ಟ್ ಮಾಡೋದಕ್ಕೆ ಬಂದಿದ್ದೇನೆ, ನಾನು ಪಕ್ಷಕ್ಕಾಗಿ ಬಂದಿಲ್ಲ, ವ್ಯಕ್ತಿಗಾಗಿ ಬಂದಿದ್ದೇನೆ, ಚುನಾವಣೆಗೆ ಖಂಡಿತ ನಿಲ್ಲುವುದಿಲ್ಲ, ಟಿಕೆಟ್ ಕೂಡ ಕೇಳುವುದಿಲ್ಲ ಎಂದು ಸುದೀಪ್ ಅವರು ಸ್ಪಷ್ಟನೆ ಕೊಟ್ಟಿದ್ದಾಗಿದೆ.

ಆದರೆ ಈಗ ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಅವರ ಅಭಿಮಾನಿಗಳು ಸುದೀಪ್ ಅವರ ನಡೆಗೆ ಬೇರೆಯದೇ ರೀತಿ ಪ್ರತಿಕ್ರಿಯೆ ನೀಡಿದ್ದಾರೆ, ವಿಷ್ಣುದಾದ ಅವರು ಎಂಥ ಸಂದರ್ಭದಲ್ಲೂ ರಾಜಕೀಯಕ್ಕೆ ಹೋಗಲಿಲ್ಲ. ಯಾವುದೇ ಪ್ರಕ್ಷದ ಪರವಾಗಿ ಪ್ರಚಾರ ಮಾಡಿಲ್ಲ, ಸುದೀಪ್ ಅವರಲ್ಲಿ ವಿಷ್ಣುದಾದ ಅವರನ್ನು ಕಾಣುತ್ತೇವೆ, ಸುದೀಪ್ ಅವರು ದಾದ ಅವರ ಹಾಗೆ ಇರಬೇಕು ಎನ್ನುವುದು ನಮ್ಮ ಅಭಿಪ್ರಾಯ ಎಂದಿದ್ದಾರೆ. ಸುದೀಪ್ ಅವರು ವಿಷ್ಣುವರ್ಧನ್ ಅವರ ಅಭಿಮಾನಿ, ವಿಷ್ಣುದಾದ ಅವರ ಸ್ಮಾರಕದ ವಿಚಾರಕ್ಕೆ ತೊಂದರೆ ಆದಾಗ, ಸುದೀಪ್ ಅವರು ಹೋರಾಟಕ್ಕೆ ಬಂದಿದ್ದರು. ವಿಷ್ಣುದಾದ ಅವರು ಹೋದಮೇಲೆ ಅವರ ಸಾಕಷ್ಟು ಅಭಿಮಾನಿಗಳು ಸುದೀಪ್ ಅವರನ್ನು ಫಾಲೋ ಮಾಡುತ್ತಿದ್ದಾರೆ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?

Comments are closed.