Neer Dose Karnataka
Take a fresh look at your lifestyle.

Airtel 299 Jio 299: ಎರಡು ಪ್ಲಾನ್ ಗಳು ಒಂದೇ ಬೆಲೆಗೆ. ಆದರೆ ಹೆಚ್ಚು ಲಾಭ ನೀಡುವ ಪ್ಲಾನ್ ಯಾವುದು ಗೊತ್ತೇ?

Airtel 299 Jio 299: ನಮ್ಮ ದೇಶದಲ್ಲಿ ಅತಿದೊಡ್ಡ ಟೆಲಿಕಾಂ ಸೇವೆ ಎಂದು ಹೆಸರು ಪಡೆದಿರುವುದು ಜಿಯೋ ಸಂಸ್ಥೆ ಹಾಗೂ ಏರ್ಟೆಲ್ ಸಂಸ್ಥೆ. ಈ ಎರಡು ಸಂಸ್ಥೆಗಳು ಕೂಡ ಗ್ರಾಹಕರಿಗೆ ಸರಿಹೊಂದುವಂಥ, ಬಜೆಟ್ ಫ್ರೆಂಡ್ಲಿ ಪ್ಲಾನ್ ಗಳನ್ನು ನೀಡುತ್ತಿದೆ. ಎರಡು ಸಂಸ್ಥೆಗಳಿಗೆ ಅತಿಹೆಚ್ಚು ಗ್ರಾಹಕರು ಇದ್ದಾರೆ ಎಂದು ಹೇಳಬಹುದು. ಈ ಎರಡು ಸಂಸ್ಥೆಗಳು 299 ರೂಪಾಯಿಗೆ ಒಳ್ಳೆಯ ಪ್ಲಾನ್ ಗಳನ್ನು ನೀಡಿದ್ದು, ಒಂದೇ ಬೆಲೆಯಲ್ಲಿ ಸಿಗುವ ಈ ಪ್ಲಾನ್ ಗಳಲ್ಲಿ ಎರಡು ಕಂಪೆನಿಗಳ ಪ್ಲಾನ್ ಗಳಲ್ಲಿ ಇರುವ ವ್ಯತ್ಯಾಸಗಳು ಏನೇನು ಗೊತ್ತಾ? ಇಂದು ತಿಳಿಸುತ್ತೇವೆ ನೋಡಿ..

ಜಿಯೋ 299 ರೂಪಾಯಿಯ ರೀಚಾರ್ಜ್ ಪ್ಲಾನ್.. ಜಿಯೋ ಗ್ರಾಹಕರು 299 ರೂಪಾಯಿಗೆ ರೀಚಾರ್ಜ್ ಮಾಡಿಕೊಂಡರೆ, ಪ್ರತಿದಿನ ಅನಿಯಮಿತ ಫ್ರೀ ಕರೆಗಳು ಸಿಗುತ್ತದೆ, ಹಾಗೆಯೇ ವ್ಯಾಲಿಡಿಟಿ ಇರುವಷ್ಟು ದಿನ ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಗಳು ಸಿಗುತ್ತದೆ, ಹಾಗೆಯೇ ದಿನಕ್ಕೆ 2ಜಿಬಿ ಹೈ ಸ್ಪೀಡ್ ಡೇಟಾ ಕೂಡ ಇರುತ್ತದೆ. ಈ ಪ್ಲಾನ್ ನ ವ್ಯಾಲಿಡಿಟಿ 28 ದಿನಗಳು, ಒಂದು ದಿನಕ್ಕೆ 2ಜಿಬಿ ಡೇಟಾ ಹಾಗೆ, 28 ದಿನಕ್ಕೆ 56 ಜಿಬಿ ಹೈ ಸ್ಪೀಡ್ ಡೇಟಾ ಸಿಗುತ್ತದೆ. ಇದನ್ನು ಓದಿ..IPL Jio: ಐಪಿಎಲ್ ನೋಡುವುದಕ್ಕಾಗಿಯೇ, ಚಿಲ್ಲರೆ ಬೆಲೆಗೆ ಇಂಟರ್ನೆಟ್ ಪ್ಯಾಕ್ ಘೋಷಣೆ ಮಾಡಿದ ಅಂಬಾನಿ: ಮುಗಿಬಿದ್ದು ರಿಚಾರ್ಜ್ ಮಾಡಿಕೊಳ್ಳುತ್ತಿರುವ ಜನರು.

ಏರ್ಟೆಲ್ 299 ರೂಪಾಯಿಯ ರೀಚಾರ್ಜ್ ಪ್ಲಾನ್.. ಏರ್ಟೆಲ್ ಗ್ರಾಹಕರಿಗೆ ಈ ಪ್ಲಾನ್ ನಲ್ಲಿ ಅನಿಯಮಿತ ಲೋಕಲ್ ಮತ್ತು ಎಸ್.ಟಿ.ಡಿ ಕರೆಗಳು ಸಿಗುತ್ತದೆ, ಹಾಗೆಯೇ ದಿನಕ್ಕೆ 1.5ಜಿಬಿ ಡೇಟಾ ಕೂಡ ಸಿಗುತ್ತದೆ. ಈ ಪ್ಲಾನ್ ನ ವ್ಯಾಲಿಡಿಟಿ ಕೂಡ 28 ದಿನಗಳು, ಈ ಪ್ಲಾನ್ ನಲ್ಲಿ ದಿನಕ್ಕೆ 1.5ಜಿಬಿ ಡೇಟಾ ಎಂದು ನೋಡಿದರೆ, 28 ದಿನಕ್ಕೆ 42ಜಿಬಿ ಡೇಟಾ ಸಿಗುತ್ತದೆ.

ಈ ಎರಡು ಪ್ಲಾನ್ ಗಳನ್ನು ಗಮನಿಸಿದರೆ, ಡೇಟಾ ವಿಚಾರದಲ್ಲಿ ಬಹಳ ವ್ಯತ್ಯಾಸ ಇದ್ದು, ಏರ್ಟೆಲ್ ಸಂಸ್ಥೆಯು ಕಡಿಮೆ ಡೇಟಾ ಕೊಡುತ್ತಿದ್ದು, ಜಿಯೋ ಸಂಸ್ಥೆ ಹೆಚ್ಚಿನ ಡೇಟಾ ಕೊಡುತ್ತದೆ. ಹಾಗಾಗಿ ನೀವು ಪ್ಲಾನ್ ಆಯ್ಕೆ ಮಾಡುವಾಗ, ಎಚ್ಚರಿಕೆಯಿಂದ ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳಿ. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??

Comments are closed.