Gold: ಬಿಗ್ ನ್ಯೂಸ್: ದಿಡೀರ್ ಎಂದು ಕುಸಿದೆ ಬಿಡ್ತು ಚಿನ್ನ ಬೆಲೆ: ಅಕ್ಷಯ ತೃತೀಯಕ್ಕೂ ಮುನ್ನ ಎಷ್ಟು ಕಡಿಮೆ ಆಗಿದೆ ಗೊತ್ತೇ? ಇದಪ್ಪ ಅದೃಷ್ಟ ಅಂದ್ರೆ, ಈಗಲೇ ಖರೀದಿ ಮಾಡಿ..
Gold: ಬಂಗಾರ ಕೊಂಡುಕೊಳ್ಳಬೇಕು ಎಂದು ಎಲ್ಲರಿಗು ಆಸೆ ಇರುತ್ತದೆ, ಆದರೆ ಬಂಗಾರದ ಬೆಲೆಯಲ್ಲಿ ಏರಿಳಿತಗಳು ಆಗುತ್ತಲೇ ಇರುತ್ತದೆ, ಹಾಗಾಗಿ ಅದನ್ನೆಲ್ಲ ನೋಡಿಕೊಂಡು, ಚಿನ್ನದ ಬೆಲೆ ಕಡಿಮೆ ಆದಾಗ ಚಿನ್ನ ಕೊಂಡುಕೊಳ್ಳುವುದು ಉತ್ತಮ. ಈ ವಾರದಲ್ಲಿ ಈಗ ಮತ್ತೊಮ್ಮೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ನೀವು ಚಿನ್ನದ ಆಭರಣ ಕೊಂಡುಕೊಳ್ಳಬೇಕು ಎಂದುಕೊಂಡಿದ್ದರೆ ಇದು ಸರಿಯಾದ ಸಮಯ ಆಗಿದೆ.
ಕಳೆದ ವಾರ ಚಿನ್ನ ಮತ್ತು ಬೆಳ್ಳಿಯ ಬೆಲೆ ಅತಿ ಹೆಚ್ಚಾಗಿದೆ ಎನ್ನುವ ಹಂತಕ್ಕೆ ತಲುಪಿತ್ತು. ಆದರೆ ಈಗ ದೇಶದಲ್ಲಿ ಇರುವ ಹಣಕಾಸಿನ ಸಮಸ್ಯೆ, ಡಾಲರ್ ಸೂಚ್ಯಂಕ ಇದೆಲ್ಲದರಿಂದ ಚಿನ್ನಕ್ಕೆ ಇರುವ ಬೇಡಿಕೆಯ ಮೇಲೆ ಪ್ರಭಾವ ಬೀರುತ್ತಿದೆ ಎಂದು ಹೇಳಬಹುದು. ಇದರಿಂದಾಗಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಆದರೆ ಇನ್ನು ಕೆಲವೇ ಸಮಯದಲ್ಲಿ ಚಿನ್ನದ ಬೆಲೆ ಮತ್ತೆ ದಿಢೀರ್ ಎಂದು ಏರಿಕೆ ಆಗುವ ಸಾಧ್ಯತೆ ಇರು ಕಾರಣ.. ಇದನ್ನು ಓದಿ..Bank: ಅಪ್ಪಿ ತಪ್ಪಿ ಈ ಮೂರು ಬ್ಯಾಂಕ್ ಮುಳುಗಿದ್ರೆ, ಭಾರತ ಕೂಡ ಶ್ರೀಲಂಕಾ, ಪಾಕಿಸ್ತಾನದಂತೆ ಆಗಿ ಬಿಡುತ್ತೆ. ಜಗತ್ತಿಗೆ ಕಾಣದ ಹಾಗೆ ಏನಾಗುತ್ತಿದೆ ಗೊತ್ತೇ?
ಚಿನ್ನ ಬೆಳ್ಳಿ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಇದು ಒಳ್ಳೆಯ ಅವಕಾಶ ಆಗಿದೆ. ಅಂತಾರಾಷ್ಟ್ರೀಯ ಮಾರ್ಕೆಟ್ ನಲ್ಲಿ ಸಹ ಚಿನ್ನ ಬೆಲೆ ಇಳಿಕೆ ಆಗಿದೆ ಎಂದು ಬುಲಿಯನ್ ಬ್ಯುಸಿನೆಸ್ ಮ್ಯಾನ್ ಗಳು ಹೇಳುತ್ತಿದ್ದಾರೆ. ಇದು ನಮ್ಮ ದೇಶದ ಮಾರ್ಕೆಟ್ ಮೇಲು ಪ್ರಭಾವ ಬೀರಲಿದೆ. ಇಂಟರ್ನ್ಯಾಷನಲ್ ಮಾರ್ಕೆಟ್ ನಲ್ಲಿ ಈಗ ಚಿನ್ನದ ಬೆಲೆ 50 ಡಾಲರ್ ಗಳಷ್ಟು ಕಡಿಮೆ ಆಗಿದೆ. ಪ್ರತಿ ಔನ್ಸ್ ಚಿನ್ನಕ್ಕೆ, 2010 ಡಾಲರ್ ಗಿಂತ ಕಡಿಮೆ ಬೆಲೆಗೆ ಚಿನ್ನದ ವ್ಯಾಪಾರ ನಡೆಯುತ್ತಿದೆ.
ಬೆಳ್ಳಿಯ ಬೆಲೆಯಲ್ಲಿ ಸಹ ಈಗ 2% ಅಷ್ಟು ಕಡಿಮೆ ಆಗಿದೆ, ಬೆಳ್ಳಿಯನ್ನು ಪ್ರತಿ ಔನ್ಸ್ ಗೆ ₹25.35 ಡಾಲರ್ ಗೆ ಖರೀದಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಈಗ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡುವುದಾದರೆ, ನಮ್ಮ ದೇಶದ ಮಾರ್ಕೆಟ್ ನಲ್ಲಿ ಚಿನ್ನದ ಬೆಲೆಯಲ್ಲಿ 1,100 ರೂಪಾಯಿ ಕುಸಿತ, ಬೆಳ್ಳಿ ಬೆಲೆಯಲ್ಲಿ 1,500 ರೂಪಾಯಿ ಕುಸಿತ ಕಂಡುಬಂದಿದೆ. ಈಗ 10 ಗ್ರಾಮ್ ಚಿನ್ನಕ್ಕೆ ₹60,200 ರೂಪಾಯಿ ಆಗಿದ್ದು, ಬೆಳ್ಳಿ ಬೆಲೆ ₹75,500 ರೂಪಾಯಿ ಆಗಿದೆ. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??
Comments are closed.