Bank: ಅಪ್ಪಿ ತಪ್ಪಿ ಈ ಮೂರು ಬ್ಯಾಂಕ್ ಮುಳುಗಿದ್ರೆ, ಭಾರತ ಕೂಡ ಶ್ರೀಲಂಕಾ, ಪಾಕಿಸ್ತಾನದಂತೆ ಆಗಿ ಬಿಡುತ್ತೆ. ಜಗತ್ತಿಗೆ ಕಾಣದ ಹಾಗೆ ಏನಾಗುತ್ತಿದೆ ಗೊತ್ತೇ?
Bank: ಈಗ ವಿಶ್ವದ ಪರಿಸ್ಥಿತಿ ಹೇಗಿದೆ ಅಂದ್ರೆ, ಹಲವು ದೇಶಗಳಲ್ಲಿ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ. ಇದರಿಂದ ಆ ದೇಶಗಳಲ್ಲಿ ಕಷ್ಟದ ಪರಿಸ್ಥಿತಿ ಎದುರಾಗಿದೆ.. ಆದರೆ ನಮ್ಮ ಭಾರತ (India) ದೇಶವು ಆರ್ಥಿಕ ವಿಚಾರದಲ್ಲಿ ಒಳ್ಳೆಯ ಸ್ಥಾನದಲ್ಲಿ ನಿಂತಿದೆ. ಕೆಲ ದಿನಗಳಿಂದ ನಡೆಯುತ್ತಿರುವುದನ್ನು ನೋಡಿದರೆ, ಪ್ರಪಂಚದ ಬಹಳಷ್ಟು ಬ್ಯಾಂಕ್ ಗಳು ಮುಚ್ಚಿ ಹೋಗುತ್ತಿವೆ, ಇವುಗಳಲ್ಲಿ ಅಮೆರಿಕಾ (America) ದೇಶಕ್ಕೆ ಸೇರಿದ ಬಹಳಷ್ಟು ಬ್ಯಾಂಕ್ ಗಳು ಸಹ ಇದೆ..ಇದು ಪ್ರಪಂಚದ ಹಲವು ದೇಶಗಳ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಿದೆ..
ಭಾರತದಲ್ಲಿ ಕೂಡ ಅಮೆರಿಕಾಗೆ ಸೇರಿದ ಕೆಲವು ಬ್ಯಾಂಕ್ ಗಳಿದ್ದು, ಅವುಗಳು ಮುಚ್ಚಿ ಹೋದರೆ, ಭಾರತದ ಆರ್ಥಿಕ ಸ್ಥಿತಿಗೆ ಕೂಡ ಬಲವಾದ ಪೆಟ್ಟು ಬೀಳಬಹುದು. ಇದರಿಂದ ವಿಪರೀತ ನಷ್ಟ ಕೂಡ ಆಗಬಹುದು. ಭಾರತ ದೇಶದಲ್ಲಿ 3 ಮುಖ್ಯವಾದ ಬ್ಯಾಂಕ್ ಗಳಿವೆ, ಅವು ಮುಳುಗಿ ಹೋದರೆ, ನಮ್ಮ ದೇಶದ ಆರ್ಥಿಕತೆ ಅಲುಗಾಡುವುದಕ್ಕೆ ಶುರುವಾಗುತ್ತದೆ. ಆರ್.ಬಿ.ಐ 2021ರ ಸಾಲಿನ ದೇಶೀಯ ವ್ಯವಸ್ಥಿತ ಬ್ಯಾಂಕ್ (D-SIB) ಗಳ ಪಟ್ಟಿ ಬಿಡುಗಡೆ ಮಾಡಿದ್ದು, ಎಸ್.ಬಿ.ಐ (SBI), ಐಸಿಐಸಿಐ (ICICI), ಹಾಗೂ ಹೆಚ್.ಡಿ.ಎಫ್.ಸಿ (HDFC) ಬ್ಯಾಂಕ್ ಈ ಡಿ-ಎಸ್.ಐ.ಬಿ (D-SIB)ಪಟ್ಟಿಯ ಮುಖ್ಯವಾದ ಬ್ಯಾಂಕ್ ಎಂದು ಹೇಳಲಾಗಿದೆ. ಇದನ್ನು ಓದಿ..ATM: ATM ಕಾರ್ಡ್ ಬಳಸುತ್ತಿರುವವರಿಗೆ ಸಿಕ್ತು ಬಾರಿ ಸಿಹಿ ಸುದ್ದಿ; ಸದ್ದಿಲ್ಲದೇ ಬಂದ ಖುಷಿ ಓಡೋಡಿ ಬ್ಯಾಂಕ್ ಗೆ ಹೋದ ಜನ. ನೀವು ಹೋಗ್ಬೇಕಾ??
ನಮ್ಮ ಭಾರತ ದೇಶದಲ್ಲಿ ಈ ಮೂರು ಬ್ಯಾಂಕ್ ಗಳು ಬಹಳ ಮುಖ್ಯವಾದ ಸ್ಥಾನ ಪಡೆದಿದ್ದು, ಈ ಮೂರು ಬ್ಯಾಂಕ್ ಗಳು ಒಂದು ವೇಳೆ ಮುಳುಗಿ ಹೋದರೆ, ನಮ್ಮ ದೇಶವು ಆರ್ಥಿಕವಾಗಿ ಬಹಳಷ್ಟು ಸಮಸ್ಯೆ ಹಾಗೂ ನಷ್ಟವನ್ನು ಎದುರಿಸಬೇಕಾಗುತ್ತದೆ.. ಒಂದು ವೇಳೆ ಹೀಗಾದರೆ, ಅದರ ಹೊಡೆತ ತಡೆಯಲು ಸರ್ಕಾರಕ್ಕೆ ಕೂಡ ಆಗುವುದಿಲ್ಲ. ಪರಿಸ್ಥಿತಿ ಹೀಗಿರುವ ಕಾರಣ ಆರ್.ಬಿ.ಐ (RBI) ಈ ಮೂರು ಬ್ಯಾಂಕ್ ಗಳ ಮೇಲೆ ಕಣ್ಣಿಟ್ಟಿದೆ. ಜೊತೆಗೆ ಈ ಲಿಸ್ಟ್ ನಲ್ಲಿ ಬರುವ ಮೂರು ಬ್ಯಾಂಕ್ ಗಳಿಗೆ ಬೇರೆ ನಿಯಮಗಳನ್ನು ಸಹ ಜಾರಿಗೆ ತರಲಾಗಿದೆ .
ಎಲ್ಲಾ ಬ್ಯಾಂಕ್ ಗಳಿಗೆ ಅವುಗಳ ಕಾರ್ಯಕ್ಷಮತೆ, ಎಷ್ಟು ಗ್ರಾಹಕರಿದ್ದಾರೆ ಎನ್ನುವುದರ ಆಧಾರದ ಮೇಲೆ ಬ್ಯಾಂಕ್ ಗಳಿಗೆ ಪ್ರಾಮುಖ್ಯತೆಯ ಸ್ಕೋರ್ ಅನ್ನು ನೀಡಲಾಗುತ್ತದೆ. ಒಂದು ವೇಳೆ ಬ್ಯಾಂಕ್ ಅನ್ನು ಡಿ-ಎಸ್.ಐ.ಬಿ ಪಟ್ಟಿಯಲ್ಲಿ ಸೇರಿಸಿದ್ದರೆ, ಅವುಗಳ ಸ್ವತ್ತು ರಾಷ್ಟ್ರೀಯ ಜಿಡಿಪಿ ಗಿಂತ 2% ಹೆಚ್ಚಾಗಿಯೇ ಇರಬೇಕು. ಈ ಬ್ಯಾಂಕ್ ಗಳನ್ನು ಆರ್.ಬಿ.ಐ ಆಯ್ಕೆ ಮಾಡುವುದು ದೇಶೀಯ ಆರ್ಥಿಕತೆಯ ಅನುಸಾರ ಎಂದು ತಿಳಿಸಿದೆ. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??
Comments are closed.