Business Ideas: ಮಹಿಳೆಯರು ಮನೆಯಲ್ಲಿಯೇ ಇದ್ದು ಹಣ ಸಂಪಾದನೆ ಮಾಡಬೇಕು ಎಂದರೆ, ಉತ್ತಮ ಬಿಸಿನೆಸ್ ಯಾವುದು ಗೊತ್ತೇ? ಕಷ್ಟ ಪಡದೆ ದುಡ್ಡು. ಹೇಗೆ ಗೊತ್ತೇ?
Business Idea: ಮಹಿಳೆಯರು ಮನೆಯಲ್ಲಿ ಕುಳಿತು ಕೆಲಸ ಮುಗಿಸಿ ನಂತರ ಹಣ ಸಂಪಾದನೆ ಮಾಡಬೇಕು ಎಂದು ಅಂದುಕೊಂಡಿರುತ್ತಾರೆ. ಅಂಥ ಮಹಿಳೆಯರಿಗಾಗಿ ಇಂದು ನಾವು ಕೆಲವು ಬಿಸಿನೆಸ್ ಐಡಿಯಾಗಳನ್ನು ತಂದಿದ್ದೇವೆ. ಎಲ್ಲಾ ಸಮಯದಲ್ಲೂ ಬೇಡಿಕೆ ಇರುವ ಈ ಬಿಸಿನೆಸ್ ಅನ್ನು ಟ್ರೈ ಮಾಡಿದರೆ, ಮಹಿಳೆಯರು ಹೆಚ್ಚಿನ ಲಾಭ ಪಡೆಯಬಹುದು. ಈ ಬಿಸಿನೆಸ್ ಗಳ ಬಗ್ಗೆ ತಿಳಿಸುತ್ತೇವೆ..

ಇಡೀ ವರ್ಷ ಬೇಡಿಕೆಯಲ್ಲಿರುವ ಬಿಸಿನೆಸ್ ಗಳಲ್ಲಿ ಒಂದು ಕೇಕ್ ಬಿಸಿನೆಸ್. ಸಿಟಿಗಳಲ್ಲಿ ಇದಕ್ಕೆ ಬಹಳ ಬೇಡಿಕೆ ಇದೆ. ಬರ್ತ್ ಡೇ, ಎಂಗೇಜ್ಮೆಂಟ್, ಮದುವೆ, ಆನಿವರ್ಸರಿ ಹೀಗೆ ಒಂದಲ್ಲಾ ಒಂದು ಸಂಭ್ರಮಕ್ಕೆ ಕೇಕ್ ಕಟ್ ಮಾಡುವುದು ನಡೆದೇ ನಡೆಯುತ್ತದೆ. ನಿಮಗೆ ಬೇಕಿಂಗ್ ಬಂದರೆ, ನೀವು ಕೂಡ ಕೇಕ್ ಬಿಸಿನೆಸ್ ಶುರು ಮಾಡಬಹುದು, ಆರ್ಡರ್ ಪಡೆದು, ಡೆಲಿವರಿ ಕೊಡಬಹುದು. ವಿವಿಧವಾದ ಕೇಕ್ ಬೇಕ್ ಮಾಡುವುದು ಕಲಿತು, ಆನ್ಲೈನ್ ಮೂಲಕವೂ ಆರ್ಡರ್ ಪಡೆದು ನಿಮ್ಮ ಬ್ಯುಸಿನೆಸ್ ಅನ್ನು ವಿಸ್ತರಿಸಬಹುದು. ಕೇಕ್ ಬಿಸಿನೆಸ್ ಶುರು ಮಾಡಲು ನಿಮ್ಮ ಮನೆಯಲ್ಲಿ ಒಂದು ರೂಮ್ ಅನ್ನು ಇದಕ್ಕಾಗಿಯೇ ಮೀಸಲಾಗಿ ಇಡಬಹುದು. ಕೇಕ್ ಬೇಕ್ ಮಾಡಲು ಓವನ್ ಬೇಕು. ಇದನ್ನು ಓದಿ..Business Idea: ನೀವು ಊಟಕ್ಕೆ ಖರ್ಚು ಮಾಡುವ 1 ಲಕ್ಷ ಹಾಕಿ, ಈ ಉದ್ಯಮ ಆರಂಭಿಸಿ: ತಿಂಗಳಿಗೆ ಮೂರು ಲಕ್ಷ ಹುಡುಕಿಕೊಂಡು ಬರುತ್ತದೆ. ಯಾವ ಉದ್ಯಮ ಗೊತ್ತೇ?
ಓವನ್ ಗಳು ವಿವಿಧ ಬೆಲೆಯಲ್ಲಿ ಸಿಗುತ್ತದೆ. ಫ್ರೀಜರ್ ಸಹ ಬೇಕಾಗುತ್ತದೆ ಹಾಗೆಯೇ ಕೇಕ್ ಮಾಡಲು ಕೆಲವು ವಸ್ತುಗಳು, ಕೋಳಿ ಮೊಟ್ಟೆ, ಸಕ್ಕರೆ, ಬೆಣ್ಣೆ, ಮೈದಾ, ಇನ್ನಿತರ ವಸ್ತುಗಳು, ಪ್ಯಾಕ್ ಮಾಡಲು ಇನ್ನಿತರ ವಸ್ತುಗಳನ್ನು ಹೋಲ್ ಸೇಲ್ ಆಗಿ ಖರೀದಿ ಮಾಡಬಹುದು. ನೀವೇ ಕೇಕ್ ತಯಾರಿಸಿದರೆ ಮಾತ್ರ ಲಾಭ ನಿಮ್ಮದಾಗುತ್ತದೆ. ಕೇಕ್ ತಯಾರಿಸಲು ಗೊತ್ತಿಲ್ಲದೆ ಹೋದರೆ, ಹೋಟೆಲ್ ಮ್ಯಾನೇಜ್ಮೆಂಟ್ ಸಂಸ್ಥೆಗಳು, ಹಾಗೂ ಇನ್ನಿತರ ಸಂಸ್ಥೆಗಳು ಕಡಿಮೆ ಸಮಯದ ಕೋರ್ಸ್ ಗಳನ್ನು ನೀಡುತ್ತದೆ.
ಅದರಲ್ಲಿ ಕೇಕ್, ಬಿಸ್ಕೆಟ್ ಹಾಗೂ ಬೇರೆ ಬೇಕರಿ ವಸ್ತುಗಳನ್ನು ತಯಾರಿಸುವುದನ್ನ ಕಲಿಯಬಹುದು. ಬರ್ತ್ ಡೇ ಕೇಕ್ ತಯಾರಿಸಿ, ಚೆನ್ನಾಗಿ ಡಿಸೈನ್ ಮಾಡಿದರೆ, ಒಳ್ಳೆಯ ಬೇಡಿಕೆ ಸಿಗುತ್ತದೆ. ಮನೆಯ ರೂಮ್ ನಲ್ಲಿ ಕೇಕ್ ತಯಾರಿಸಿ, ಸ್ವಿಗ್ಗಿ, ಜೋಮ್ಯಾಟೋ ಇವುಗಳ ಮೂಲಕ ಆನ್ಲೈನ್ ಆರ್ಡರ್ ಸಹಾಯ ಪಡೆಯಬಹುದು. ಒಂದು ವೇಳೆ ನಿಮ್ಮ ಮನೆಯಿಂದ 5ಕಿಮೀ ಗಿಂತ ಕಡಿಮೆ ಅಂತರದಲ್ಲಿ ಆರ್ಡರ್ ಬಂದರೆ ನೀವೇ ಡೆಲಿವರಿ ಪಡೆಯಬಹುದು. ಇಲ್ಲವಾದರೆ, ಡೆಲಿವರಿ ಬಾಯ್ ಗಳ ಸಹಾಯ ಪಡೆಯಬಹುದು. ನಿಮ್ಮ ಬಿಸಿನೆಸ್ ಪ್ರೊಮೋಟ್ ಮಾಡಲು ಸೋಷಿಯಲ್ ಮೀಡಿಯಾ ಬಳಸಿಕೊಳ್ಳಬಹುದು. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??