Neer Dose Karnataka
Take a fresh look at your lifestyle.

Sugarcane Juice: ಕಬ್ಬಿನ ಜ್ಯುಸ್ ಎಲ್ಲರೂ ಕುಡಿಯಬಾರದು. ಅದರಲ್ಲಿಯೂ ಈ ಸಮಸ್ಯೆ ಇದ್ದವರು ಹತ್ತಿರ ಕೂಡ ಹೋಗ್ಬೇಡಿ. ಆರೋಗ್ಯವಾಗಿದ್ದರೂ ಯಾರು ಕುಡಿಯಬಾರದು ಗೊತ್ತೇ??

Sugarcane Juice: ಈಗಾಗಲೇ ಬೇಸಿಗೆ ಶುರುವಾಗಿ, ಬೇಸಿಗೆಯ ಬಿಸಿಲಿನಿಂದ ಎಲ್ಲರೂ ಬಳಲುತ್ತಿದ್ದಾರೆ. ಈ ಸಮಯದಲ್ಲಿ ಎಲ್ಲರೂ ಕೂಲ್ ಆಗಿರುವ ಜ್ಯುಸ್ ಗಳು ಹಾಗೂ ತಿಂಡಿಗಳನ್ನು ಹೆಚ್ಚು ಸೇವಿಸುತ್ತಾರೆ. ಬೇಸಿಗೆಯಲ್ಲಿ ಎಲ್ಲರೂ ಹೆಚ್ಚಾಗಿ ಸೇವಿಸುವುದು ಎಳನೀರನ್ನು, ಅದು ಬಿಟ್ಟರೆ ಕಬ್ಬಿನ ಜ್ಯುಸ್ ಅನ್ನು ಕೂಡ ಎಲ್ಲರೂ ಇಷ್ಟಪಟ್ಟು ಕುಡಿಯುತ್ತಾರೆ. ಆದರೆ ಈ ಕೆಲವು ಆರೋಗ್ಯದ ಸಮಸ್ಯೆ ಇರುವವರು ಕಬ್ಬಿನ ಜ್ಯುಸ್ ಅನ್ನು ಯಾವುದೇ ಕಾರಣಕ್ಕೂ ಕುಡಿಯಬಾರದು. ಹಾಗಿದ್ದರೆ ಯಾರೆಲ್ಲಾ ಕುಡಿಯಬಾರದು ಎಂದು ತಿಳಿಸುತ್ತೇವೆ ನೋಡಿ..

*ಯಾವ ವ್ಯಕ್ತಿಗೆ ಹೈ ಬ್ಲಡ್ ಶುಗರ್ ಇದೆಯೋ, ಅವರು ಕಬ್ಬಿನ ಜ್ಯುಸ್ ಅನ್ನು ಕುಡಿಯಲೇಬಾರದು. ಇದರಲ್ಲಿ ಇರುವ ಅಂಶಗಳು ರಕ್ತದಲ್ಲಿ ಶುಗರ್ ಲೆವೆಲ್ ಜಾಸ್ತಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದ್ದು, ಈ ಸಮಸ್ಯೆ ಇರುವವರು ಕಬ್ಬಿನ ಜ್ಯುಸ್ ಕುಡಿಯುವುದನ್ನು ನಿಲ್ಲಿಸಿ.
*ಕಬ್ಬಿನ ಜ್ಯುಸ್ ನಲ್ಲಿ ಕ್ಯಾಲೋರಿ ಜಾಸ್ತಿ ಇರುತ್ತದೆ, ಹಾಗಾಗಿ ದೇಹದ ತೂಕ ಇಳಿಸಲು ಪ್ರಯತ್ನ ಪಡುತ್ತಿರುವವರು ಶುಗರ್ ಕೇನ್ ಜ್ಯುಸ್ ಅನ್ನು ಕುಡಿಯಬಾರದು. ಇದನ್ನು ಓದಿ..Health Tips in Kannada: ನಿಮಗೆ ಹೃದಯಾಗಾತ ಆಗುವ ಮೊದಲು ಈ ಸೂಚನೆಗಳು ಸಿಗುತ್ತವೆ, ಅರಿತುಕೊಂಡರೆ ಜೀವ ಸೇಫ್. ಏನೇನು ಗೊತ್ತೇ?? ಏನು ಮಾಡಬೇಕು ಗೊತ್ತೇ?

*ಯಾವ ವ್ಯಕ್ತಿಗೆ ಫುಡ್ ಪಾಯ್ಸನಿಂಗ್ ಅಥವಾ ಜೀರ್ಣಕ್ರಿಯೆ, ಹೊಟ್ಟೆಗೆ ಸೇರಿದ ಸಮಸ್ಯೆಗಳು ಇದೆಯೋ ಆ ವ್ಯಕ್ತಿಗಳು ಕಬ್ಬಿನ ಜ್ಯುಸ್ ಅನ್ನು ಕುಡಿಯುವ ಹಾಗಿಲ್ಲ.
*ಕಬ್ಬಿನ ಜ್ಯುಸ್ ಮಾಡುವವರು ಬಹಳ ನೀಟ್ ಆಗಿ ಮಾಡಬೇಕು, ಒಂದು ವೇಳೆ ಸ್ವಚ್ಛವಾಗಿ ಈ ಜ್ಯುಸ್ ಅನ್ನು ಮಾಡದೆ ಹೋದರೆ, ಅದರಿಂದ ಹೊಟ್ಟೆಯ ಸಮಸ್ಯೆಗಳು ಶುರುವಾಗುವ ಸಾಧ್ಯತೆ ಇದೆ.

*ಒಂದು ವೇಳೆ ಕಬ್ಬಿನ ಜ್ಯುಸ್ ಅನ್ನು ಅತಿಹೆಚ್ಚಾಗಿ ಕುಡಿಯುತ್ತಾ ಬಂದರೆ, ಅದರಿಂದ ಶೀತ, ಜ್ವರ ಇಂಥಹ ಸಮಸ್ಯೆಗಳು ಶುರುವಾಗುತ್ತದೆ. ಕಬ್ಬಿನ ಜ್ಯುಸ್ ನಲ್ಲಿ ತಂಪು ಅಂಶ ಇರುವುದರಿಂದ ಶೀತದ ತೊಂದರೆ ಶುರುವಾಗಬಹುದು.
*ಸೈನಸ್ ಆರೋಗ್ಯ ಸಮಸ್ಯೆ ಇರುವವರು ಕೂಡ ಕಬ್ಬಿನ ಜ್ಯುಸ್ ಅನ್ನು ಕುಡಿಯಬಾರದು. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??

Comments are closed.