Crime News: ನೋಡಲು ಬೆಣ್ಣೆಯಂತಹ ಹುಡುಗಿ ಎಂದು ಮದುವೆಯಾದ: ಆದರೆ ಮದುವೆಯಾದ ನವರಂಗಿ ಮುಖ ತೋರಿಸಿದ ಹೆಂಡತಿ ಮಾಡಿದ್ದೇನು ಗೊತ್ತೇ??
Crime News: ವಿವಾಹೇತರ ಸಂಬಂಧಗಳು ಸೃಷ್ಟಿಸುವ ತೊಂದರೆಗಳು, ಮಾಡುವ ಹಾನಿ ಒಂದೆರಡಲ್ಲ. ಇದರಿಂದ ಒಳ್ಳೆಯದನ್ನು ಯಾರು ಅನುಭವಿಸಿಲ್ಲ. ಇದೀಗ ಇಂಥದ್ದೊಂದು ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ನಡೆದಿರುವುದು ಬಾಂಗ್ಲಾದೇಶದಲ್ಲಿ. ಮದುವೆಯಾಗಿ ಗಂಡನ ಜೊತೆಗೆ ಚೆನ್ನಾಗಿದ್ದ ಈ ಮಹಿಳೆಗೆ ಮತ್ತೊಬ್ಬ ವ್ಯಕ್ತಿಯ ಪರಿಚಯವಾಗಿ, ಅವನ ಜೊತೆಗಿರಲು ಈಕೆ ಗಂಡನನ್ನೇ ಎಂಥ ಸ್ಥಿತಿಗೆ ತಂದಿದ್ದಾಳೆ ಗೊತ್ತಾ?
ಬಾಂಗ್ಲಾದೇಶದ ಕಿಶೋರ್ ಗಂಜ್ ನಿಕೋಲಿ ವ್ಯಾಪ್ತಿಗೆ ಬರುವ ಗುರೈ ಎನ್ನುವ ಗ್ರಾಮದಲ್ಲಿ 32 ವರ್ಷದ ಅಲೆ ಇಮ್ರಾನ್ ಮತ್ತು 21 ವರ್ಷದ ಖೋಷ್ನಾಹರ್. ಈಕೆಗೆ ಬಹಳ ಚಿಕ್ಕ ವಯಸ್ಸಿಗೆ ಮದುವೆಯಾಗಿತ್ತು. ಆದರೆ ಗಂಡನ ಜೊತೆಗೆ ಚೆನ್ನಾಗಿಯೇ ಇದ್ದಳು. ಆದರೆ ಆಕೆಗೆ ಅದೇ ಊರಿನ ಅಹ್ಮದ್ ನಯೀಮ್ ಎನ್ನುವ ವ್ಯಕ್ತಿಯ ಪರಿಚಯವಾಗಿ ಇಬ್ಬರ ನಡುವೆ ವಿವಾಹೇತರ ಸಂಬಂಧ ಶುರುವಾಯಿತು. ಇವರಿಬ್ಬರು ಕೂಡ ಆಕೆಯ ಗಂಡನಿಗೆ ಕಾಣದ ಹಾಗೆ ಗುಟ್ಟಾಗಿ ಸಂಸಾರ ನಡೆಸುತ್ತಿದ್ದರು.. ಕೆಲ ವರ್ಷಗಳ ಕಾಲ ಹೀಗೆಯೇ ಮುಂದುವರೆದು..
ಕೊನೆಗೆ ಆಕೆಗೆ ಲವ್ವರ್ ಮೇಲೆ ಪ್ರೀತಿ ಹೆಚ್ಚಾಗಿ, ಅವನ ಜೊತೆಗಿರಲು ಗಂಡನನ್ನು ಮುಗಿಸಿಬಿಡಬೇಕು ಎಂದು ಪ್ಲಾನ್ ಮಾಡಿದಳು. ಈ ಪ್ಲಾನ್ ಪ್ರಕಾರ ಆಕೆ ತನ್ನ ಗಂಡನನ್ನು ಜಫ್ಲಾಂಗ್ ಎನ್ನುವ ಜಾಗಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ರೂಮ್ ತೆಗೆದುಕೊಂಡು ಇದ್ದರು. ಈಕೆ ತನ್ನ ಬಾಯ್ ಫ್ರೆಂಡ್ ಅನ್ನು ಕೂಡ ಅಲ್ಲಿಗೆ ಕರೆಸಿಕೊಂಡಿದ್ದಳು. ಗಂಡ ರೂಮ್ ನಲ್ಲಿರುವಾಗ ಬಾಯ್ ಫ್ರೆಂಡ್ ಗೆ ಬರುವುದಕ್ಕೆ ಹೇಳಿ ಫೋನ್ ಮಾಡಿದ್ದಾಳೆ. ಆತ ಬಂದ್ಮೇಲೆ ಇಬ್ಬರು ಸೇರಿ ಗಂಡನನ್ನು ಮುಗಿಸಿಯೇ ಬಿಟ್ಟಿದ್ದಾರೆ. ನಂತರ ಗಂಡನ ದೇಹವನ್ನು ಹತ್ತಿರವಿದ್ದ ನದಿಯ ಹತ್ತಿರ ಹಾಕಿ ಹೊರಟು ಹೋಗಿದ್ದಾರೆ.
ಇಮ್ರಾನ್ ಕಾಣುತ್ತಿಲ್ಲ ಎಂದು ಅವರ ಮನೆಯವರು ದೂರು ನೀಡಿದ್ದು, ಪೊಲೀಸರು ತನಿಖೆ ಶುರು ಮಾಡಿದಾಗ, ಇಮ್ರಾನ್ ದೇಹ ಜಫ್ಲಾಂಗ್ ಹತ್ತಿರ ಇರುವ ನದಿಯ ಹತ್ತಿರ ಸಿಕ್ಕಿದ್ದು, ಅವನ ಹೆಂಡತಿ ಕೂಡ ಕಾಣುತ್ತಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಅವಳನ್ನು ಪೊಲೀಸರು ಹುಡುಕಿದ್ದು, ಏಪ್ರಿಲ್ 19ರಂದು ಇಮ್ರಾನ್ ಹೆಂಡತಿ, ಆಕೆಯ ಬಾಯ್ ಫ್ರೆಂಡ್ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದಾಗ ಆಕೆ ಇರುವ ವಿಚಾರವನ್ನು ಒಪ್ಪಿಕೊಂಡಿದ್ದಾಳೆ.
Comments are closed.