Traffic Rules: ದಂಡ ವಸೂಲಿ ಮಾಡಲು, ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಪೊಲೀಸರು: ಎಷ್ಟೆಲ್ಲ ಯೋಜನೆ ರೂಪಿಸಲಾಗಿದೆ ಗೊತ್ತೇ?? ತಪ್ಪಿದರೆ ಸಾವಿರಾರು ವಸೂಲಿ ಫಿಕ್ಸ್.
Traffic Rules: ಬೆಂಗಳೂರಿನಂಥ (Bangalore) ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ. ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಲು ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ. ಇಷ್ಟೆಲ್ಲಾ ಟ್ರಾಫಿಕ್ ಗಳ ಮಧ್ಯೆ ಟ್ರಾಫಿಕ್ ಪೊಲೀಸರು ರೂಲ್ಸ್ ನೋಡುತ್ತಾ ಕೂರುವುದಿಲ್ಲ, ನಮ್ಮನ್ನು ಹಿಡಿಯುವುದಿಲ್ಲ ಎಂದುಕೊಂಡು ನೀವು ರೂಲ್ಸ್ ಬ್ರೇಕ್ ಮಾಡುವ ಪ್ರಯತ್ನ ಮಾಡಿದರೆ..
ನೀವು ಮೂರ್ಖರಾಗುತ್ತೀರಿ ಅಷ್ಟೇ.. ಈಗ ಟ್ರಾಫಿಕ್ ಪೊಲೀಸ್ ಗಳು ನಿಮ್ಮನ್ನು ತಡೆದು ನಿಲ್ಲಿಸಿ, ಫೈನ್ ಕೇಳದೆ ಹೋದರು, ಬೇರೆಯದೇ ರೀತಿಯಲ್ಲಿ ನಿಮ್ಮನ್ನು ಹಿಡಿಯುತ್ತಿದ್ದಾರೆ. ಅದು ಇಂಟಲಿಜೆನ್ಸ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಮೂಲಕ, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುತ್ತಿರುವವರಿಗೆ ಇದರ ಮೂಲಕ ದಂಡ ವಿಧಿಸುತ್ತಿದ್ದಾರೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು.
ನಮ್ಮ ಬೆಂಗಳೂರು ನಗರದ ಪೊಲೀಸರು ಕಳೆದ ವರ್ಷ ಡಿಸೆಂಬರ್ ತಿಂಗಳಿನಿಂದ ಐಟಿಎಂಎಸ್ ಮೂಲಕ ಕ್ಯಾಮೆರಾ ವ್ಯವಸ್ಥೆ ಶುರು ಮಾಡಿ, ಅದರ ಮೂಲಕವೇ ದಂಡ ವಿಧಿಸುತ್ತಿದ್ದು , ನೇರವಾಗಿ ಸವಾರರನ್ನು ಹಿಡಿದು ದಂಡ ವಿಧಿಸುವುದನ್ನು ಈ ವರ್ಷದ ಆರಂಭದಿಂದಲೇ ಕಡಿಮೆ ಮಾಡಿದ್ದಾರೆ. ಐಟಿಎಂಎಸ್ ಮೂಲಕ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ, ಹೆಲ್ಮೆಟ್ ಇಲ್ಲದ ಬೈಕ್ ಓಡಿಸುವುದು, ಸಿಗ್ನಲ್ ಜಂಪ್ ಮಾಡುವುದು, ನೋ ಪಾರ್ಕಿಂಗ್ ನಲ್ಲಿ ಗಾಡಿ ನಿಲ್ಲಿಸುವುದು ಇದೆಲ್ಲದರಲ್ಲೂ ಕಳೆದ ಮೂರೂವರೆ ತಿಂಗಳಿನಲ್ಲಿ 19,04,227 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಈ ಪೈಕಿ 18 ಲಕ್ಷ ಕಂಪ್ಲೇಂಟ್ ಗಳು ಆನ್ಲೈನ್ ಆಗಿದೆ. ಯಾವ ವೆಹಿಕಲ್ ಮೇಲೆ ಹೆಚ್ಚು ಪ್ರಕರಣಗಳು ಇದೆಯೋ, ಅವುಗಳಿಗೆ ನೋಟೀಸ್ ಕಳಿಸಲಾಗಿದೆ. ಎಲೆಕ್ಷನ್ ಬಳಿಕ, ಅವರ ಮನೆಗೆ ಹೋಗಿ ದಂಡ ವಸೂಲಿ ಮಾಡುವ ಪ್ಲಾನ್ ಸಹ ಮಾಡಲಾಗಿದೆ. ಐಟಿಎಂಎಸ್ ಇಂದ ಹೆಚ್ಚಿನ ಸಹಾಯ ಆಗುತ್ತಿದ್ದು, ಈ ವ್ಯವಸ್ಥೆ ಇರುವುದರಿಂದ ಬೆಂಗಳೂರು ನಗರದಲ್ಲಿ ಟ್ರಾಫಿಕ್ ಕಡಿಮೆ ಮಾಡಲು ಸಹಾಯ ಆಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.