Ambani: ನೇರವಾಗಿ ಟಾಟಾ ವಿರುದ್ಧ ತೊಡೆ ತಟ್ಟಿದ ಅಂಬಾನಿ: ಈ ಬಾರಿ ಟಾಟಾದ ಯಾವ ಉದ್ಯಮಕ್ಕೆ ಕೈ ಇಟ್ಟಿದ್ದಾರೆ ಗೊತ್ತೇ? ಇವೆಲ್ಲ ಬೇಕಿತ್ತಾ??
Ambani: ರಿಲಯನ್ಸ್ ಸಂಸ್ಥೆಯ ಮಾಲೀಕ ಮುಕೇಶ್ ಅಂಬಾನಿ (Mukesh Ambani) ಅವರು ನಮ್ಮ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ರಿಲಯನ್ಸ್ ಜಿಯೋ ಸಂಸ್ಥೆಯ ಮೂಲಕ ಇವರು ಗ್ರಾಹಕರಿಗೆ ಬಹಳ ಒಳ್ಳೆಯ ಪ್ಲಾನ್ ಗಳನ್ನು ನೀಡುತ್ತಿದ್ದಾರೆ. ಹಾಗೆಯೇ ಕಳೆದ. ವರ್ಷದಿಂದ ಇವರ ಸಂಸ್ಥೆ ಅನೇಕ ಕ್ಷೇತ್ರಗಳಿಗೆ ಪ್ರವೇಶ ನೀಡಿ, ತಮ್ಮ ಬ್ಯುಸಿನೆಸ್ ಅನ್ನು ವಿಸ್ತಾರ ಗೊಳಿಸುತ್ತಿದ್ದಾರೆ.ಅಮೆರಿಕಾದ ಆಪಲ್ ಸಂಸ್ಥೆ ಭಾರತದಲ್ಲಿ ಎರಡು ತಯಾರಿಕಾ ಘಟಕ ತೆರೆಯುವ ಪ್ಲಾನ್ ಮಾಡಿದಾಗ, ಅಂಬಾನಿ ಅವರೆ ಅದನ್ನು ಕೊಂಡುಕೊಂಡರು.

ಈಗ ಮತ್ತೊಂದು ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದು ಕಾಫಿ ಕ್ಷೇತ್ರ ಆಗಿದ್ದು, ಟಾಟಾ ಸಂಸ್ಥೆಯ ಸ್ಟಾರ್ ಬಕ್ಸ್ ಗೆ ಟಫ್ ಕಾಂಪಿಟೇಶನ್ ಕೊಡಲು ಅಂಬಾನಿ ಅವರು ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ಇಂಗ್ಲೆಂಡ್ ನಲ್ಲಿ ಜನಪ್ರಿಯವಾದ ಕಾಫಿ ಮತ್ತು ಸ್ಯಾಂಡ್ವಿಚ್ ಚೈನ್, ಫ್ರೆಟ್ ಎ ಮ್ಯಾಂಗರ್ ಈಗ ಭಾರತದಲ್ಲಿ ಶುರುವಾಗಿದ್ದು, ಅಂಬಾನಿ ಅವರು ಇದರ ಮೊದಲ ಕಾಫಿ ಶಾಪ್ ಅನ್ನು ಮುಂಬೈನ ಬಾಂದ್ರಾದಲ್ಲಿ ತೆರೆದಿದ್ದಾರೆ. ಬಹಳ ದೊಡ್ಡ ರೀತಿಯಲ್ಲಿ ಈ ಕಾಫಿ ಶಾಪ್ ಅನ್ನು ಶುರು ಮಾಡಲಾಗಿದೆ.
ಅಂಬಾನಿ ಅವರು ಇನ್ನು ಕೆಲವೇ ದಿನಗಳಲ್ಲಿ ಎರಡನೇ ಶಾಪ್ ಮುಂಬೈನ ಲೋವರ್ ಪರೆಲ್ಸ್ ಪಲಾಡಿಯಮ್ ಮಾಲ್ ನಲ್ಲಿ ಶುರುವಾಗಲಿದೆ. ಈ ಫ್ರೆಟ್ ಎ ಮ್ಯಾಂಗರ್ ಬ್ರಾಂಡ್ ಶುರುವಾಗಿರುವುದು 1986 ನಲ್ಲಿ, ಇಲ್ಲಿ ರುಚಿಕರವಾದ ತಾಜಾ ಕಾಫಿ, ಹಾಗೂ ಸ್ಯಾಂಡ್ವಿಚ್ ಮತ್ತು ವ್ರಾಪ್ಸ್ ಗಳು ಸಿಗುತ್ತದೆ. ಈ ಸಂಸ್ಥೆಯ ಚೈನ್ ದುಬೈ, ಇಂಗ್ಲೆಂಡ್, ಅಮೆರಿಕಾ, ಬ್ರೂಸೇಲ್ಸ್, ಜರ್ಮನಿ, ಸಿಂಗಾಪುರ್ ಸೇರಿದಂತೆ ಪ್ರಪಂಚದ ಹಲವೆಡೆ, 550 ಕಾಫಿ ಶಾಪ್ ಗಳನ್ನು ಹೊಂದಿದೆ..
ಟಾಟಾ ಸಂಸ್ಥೆ ಸ್ಟಾರ್ ಬಕ್ಸ್ ಶುರು ಮಾಡಿರುವುದರಿಂದ ಅದಕ್ಕೆ ಟಕ್ಕರ್ ಕೊಟ್ಟು, ತಾವು ಸಹ ಕಾಫಿ ಕ್ಷೇತ್ರದಲ್ಲಿ ಹೆಸರು ಮಾಡಲು ಅಂಬಾನಿ ಅವರು ಈ ಹೊಸ ಉದ್ಯಮ ಶುರು ಮಾಡಿದ್ದು, ಈ ಕಾಫಿ ಶಾಪ್ ಉದ್ಘಾಟನೆಗೆ ಬಾಲಿವುಡ್ ನ ಯಂಗ್ ಹೀರೋಯಿನ್ ನಟಿ ಸಾರಾ ಅಲಿ ಖಾನ್ ಬಂದಿದ್ದರು. ತಾವು ಕಾಫೀ ಪ್ರಿಯೆ ಎಂದಿರುವ ಸಾರಾ ಅಲಿ ಖಾನ್, ಲಂಡನ್ ನಲ್ಲಿ ಫ್ರೆಟ್ ಎ ಮ್ಯಾಂಗರ್ ಶಾಪ್ ನಲ್ಲಿ ಹಲವು ಸಾರಿ ಕಾಫೀ ಕುಡಿದಿದ್ದು, ಭಾರತಕ್ಕೆ ಆ ಸಂಸ್ಥೆಯ ಚೈನ್ ಬಂದಿರುವುದು ಸಂತೋಷವಾಗಿದೆ ಎಂದಿದ್ದಾರೆ.