Tanvi Rao: ಕೊನೆಗೂ ಸಿಕ್ತು ಇವರ ಬಗ್ಗೆ ಸಂಪೂರ್ಣ ಮಾಹಿತಿ; ಮಾಧುರಿ ದೀಕ್ಷಿತ್ ಜೊತೆ ನಟನೆ ಮಾಡಿದ್ದ ಇವರ ನಿಜವಾದ ಹಿನ್ನೆಲೆ ಏನು ಗೊತ್ತೇ??
Tanvi Rao: ಕಲರ್ಸ್ ಕನ್ನಡ (Colors Kannada) ವಾಹಿನಿಯ ಲಕ್ಷ್ಮಿ ಬಾರಮ್ಮ (Lakshmi Baramma) ಧಾರವಾಹಿ ಈಗ ಎಲ್ಲಾ ವೀಕ್ಷಕರ ಮೆಚ್ಚಿನ ಧಾರವಾಹಿ ಆಗಿದೆ. ಈ ಧಾರಾವಾಹಿಯಲ್ಲಿ ಎಲ್ಲಾ ಪಾತ್ರಗಳು ಕೂಡ ಜನರಿಗೆ ಇಷ್ಟವಾಗಿದೆ, ವೈಷ್ಣವ್, ಲಕ್ಷ್ಮಿ ಮತ್ತು ಕೀರ್ತಿ ಮುಖ್ಯ ಪಾತ್ರಗಳು. ವೈಷ್ಣವ್ ನನ್ನು ತುಂಬಾ ಪ್ರೀತಿಸುತ್ತಿದ್ದ ಕೀರ್ತಿ ಇದ್ದಕ್ಕಿದ್ದ ಹಾಗೆ ಮದುವೆ ಸಮಯದಲ್ಲಿ ವೈಷ್ಣವ್ ಬೇಡ ಎಂದು ಹೇಳಿ, ದೂರ ತಳ್ಳಿದ್ದಳು. ಮದುವೆಯಾದ ನಂತರ ಅಸಲಿ ವಿಷಯ ಏನು ಎಂದು ತಿಳಿಸಿ ದೊಡ್ಡ ಶಾಕ್ ನೀಡಿದ್ದಳು.

ಈ ಕೀರ್ತಿ ಪಾತ್ರ ಜನರಿಗೆ ತುಂಬಾ ಇಷ್ಟವಾಗಿದೆ. ಕೀರ್ತಿ ಪಾತ್ರದಲ್ಲಿ ನಟಿಸುತ್ತಿರುವ ಈ ನಟಿಯ ಬಗ್ಗೆ ನಿಮಗೆ ಗೊತ್ತಾ? ಇಂದು ನಿಮಗೆ ಇವರ ಸಾಧನೆಗಳ ಬಗ್ಗೆ ತಿಳಿಸುತ್ತೇವೆ.. ಕೀರ್ತಿ ಪಾತ್ರದಲ್ಲಿ ನಟಿಸುತ್ತಿರುವವರ ಹೆಸರು ತನ್ವಿ ರಾವ್ (Tanvi Rao), ಇವರು 4 ವರ್ಷದವರಿದ್ದಾಗ ಶ್ರೀಮತಿ ಗೀತಾ ಸರಳಾಯ ಮತ್ತು ಶ್ರೀಮತಿ ರಶ್ಮಿ ಚಿದಾನಂದ್ ಅವರಿಂದ ಭರತನಾಟ್ಯ ಕಲಿಯುವುದಕ್ಕೆ ಶುರು ಮಾಡಿದ್ದರು. 6ನೇ ವರ್ಷದಲ್ಲಿ ದೂರದರ್ಶನದಲ್ಲಿ ಟಧಿನಕ್ ಧಿನ್ ಧಾಟ ಶೋನಲ್ಲಿ ಸ್ಪರ್ಧಿಯಾಗಿ ಹೋಗಿದ್ದರು, ಇದಕ್ಕೆ ಜೈ ಕಿಶನ್ ಮಹಾರಾಜ್ ಜಡ್ಜ್ ಆಗಿದ್ದರು.
8ನೇ ವರ್ಷದಲ್ಲಿ ಪಾರ್ಲೆ ಜಿ ಆಯೋಜಿಸಿದ್ದ ದಂ ದಂ ದಂ ಸೇರಿದಂತೆ, ರಾಷ್ಟ್ರಮಟ್ಟದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. 9ನೇ ವರ್ಷದಲ್ಲಿ ಶ್ರೀವೀರೇಂದ್ರ ಹೆಗ್ಡೆ ಅವರು ತನ್ವಿ ರಾವ್ ಅವರಿಗೆ, ಅಪೂರ್ವ ಬಾಲ ಪ್ರತಿಭಾ ಪ್ರಶಸ್ತಿ ನೀಡಿದ್ದರು. ಕರ್ನಾಟಕದ ರಾಜ್ಯಪಾಲರು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು 10ನೇ ವರ್ಷದಲ್ಲಿ ಸ್ವೀಕರಿಸಿದರು ತನ್ವಿ ರಾವ್. ಇವರು ಮಲೇಷಿಯಾ, ಸ್ಕಾಟ್ಲೆಂಡ್, ಸಿಂಗಾಪುರ್, ಯುಎಸ್ ಇಲ್ಲೆಲ್ಲಾ ಡ್ಯಾನ್ಸ್ ಪ್ರದರ್ಶನ ನೀಡಿದ್ದಾರೆ. ಡ್ಯಾನ್ಸರ್ ಜೊತೆಗೆ ಇವರು ಥಿಯೇಟರ್ ಆರ್ಟಿಸ್ಟ್ ಕೂಡ ಹೌದು.
ತನ್ವಿ ಅವರ ನಟನೆಗೆ ಎಪಿಜೆ ಅಬ್ದುಲ್ ಕಲಾಂ ಅವರು ಕೂಡ ಪ್ರಶಂಸೆ ನೀಡಿದ್ದಾರೆ. ಈಗಾಗಲೇ ಇವರು ಆಕೃತಿ, ರಾಧೆ ಶ್ಯಾಮ್ ಸೇರಿದಂತೆ ತಮಿಳು ಧಾರವಾಹಿ ಜಮೀಲಾ, ಹಾಗೂ ರಂಗ್ ಬಿರಂಗಿ ಕನ್ನಡ ಸಿನಿಮಾ, ಗುಲಾಬ್ ಗಂಗ್, ಗನ್ಸ್ ಆಫ್ ಬನಾರಸ್ ಹಿಂದಿ ಸಿನಿಮಾದಲ್ಲಿಯೂ ನಟಿಸಿದ್ದಾರೆ. 2014ರಲ್ಲಿ ತೆರೆಕಂಡ ಗುಲಾನ್ ಗಂಗ್ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟಿಯರಾದ ಮಾಧುರಿ ದೀಕ್ಷಿತ್ ಹಾಗೂ ಜೂಹಿ ಚಾವ್ಲಾ ಅವರೊಡನೆ ತೆರೆಹಂಚಿಕೊಂಡಿದ್ದಾರೆ. ಈಗ ತನ್ವಿ ಅವರು ಲಕ್ಷ್ಮಿ ಬಾರಮ್ಮ ಧಾರವಾಹಿ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದಾರೆ.