Crime News: ಕಷ್ಟ ಪಟ್ಟು ಬೆವರು ಸುರಿಸಿ, ಪ್ರೀತಿಸಿ ಮದುವೆಯಾದ: ಪತ್ನಿ ಗರ್ಭಿಣಿ ಎಂದು ತಿಳಿದ ಕೂಡಲೇ ಏನು ಮಾಡಿದ್ದಾನೆ ಗೊತ್ತೇ? ಇದಕ್ಕೆ ಪ್ರೀತಿ ಬೇಕಿತ್ತಾ??
Crime News: ಪ್ರಪಂಚದಲ್ಲಿ ಈಗ ಪ್ರೀತಿಯ ಅರ್ಥವೇ ಬದಲಾಗಿ ಹೋಗಿದೆ. ಯಾರು ಕೂಡ ಪ್ರೀತಿ ಮಾಡುತ್ತಿಲ್ಲ, ಸ್ವಾರ್ಥಕ್ಕಾಗಿ ಒಬ್ಬರನ್ನು ಪ್ರೀತಿಸಿ, ಅವರ ಜೊತೆಗೆ ಡಿಂಗ್ ಡಾಂಗ್ ಆಡಿ ಸೀರಿಯಸ್ ಆಗುತ್ತಿದೆ ಎನ್ನಿಸಿದಾಗ, ಕೈಕೊಟ್ಟು ಓಡಿ ಹೋಗುತ್ತಾರೆ. ಇಂಥಹ ಹಲವು ಘಟನೆಗಳ ಬಗ್ಗೆ ನಾವು ದಿನಾ ಕೇಳುತ್ತಲೇ ಇರುತ್ತೇವೆ. ಇಂಥದ್ದೇ ಒಂದು ಘಟನೆ ಭುವನಗಿರಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದೆ..
ಹುಡುಗಿಯ ಹೆಸರು ಭಾರ್ಗವಿ, ಪಕ್ಕದ ಮನೆಯಲ್ಲಿದ್ದ ಮಣಿಕಂಠ ಎನ್ನುವ ಹುಡುಗ, ಈಕೆಯ ಹಿಂದೆ ಬಿದ್ದ., ಪ್ರೀತಿಸು ಎಂದು ಕಾಟ ಕೊಡುವುದಕ್ಕೆ ಶುರು ಮಾಡಿದರೆ. ಪ್ರೀತಿಸದೆ ಇದ್ದರೆ ನಿನ್ನನ್ನು ಮುಗಿಸಿ ಬಿಡುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡುವುದಕ್ಕೆ ಶುರು ಮಾಡಿದ. ಕೊನೆಗೆ ಆಕೆ ಒಪ್ಪಿಕೊಂಡು ಅವನನ್ನು ಪ್ರೀತಿಸಲು ಶುರು ಮಾಡಿದಳು. ಕೆಲ ಸಮಯದ ನಂತರ ಮನೆಯಲ್ಲಿ ತಮ್ಮಿಬ್ಬರ ಮದುವೆತೆ ಒಪ್ಪುವುದಿಲ್ಲ ಎಂದು ಹೇಳಿದಾಗ ಇಬ್ಬರಿಗೂ ಜಗಳವಾಗಿತ್ತು. ಆ ಸಮಯದಲ್ಲಿ ತನ್ನ ಜೀವನವನ್ನು ತಾನು ನೋಡಿಕೊಳ್ಳಬೇಕು ಎಂದು ಭಾರ್ಗವಿ ನಿರ್ಧರಿಸಿದಳು.
ಆ ಸಮಯಕ್ಕೆ ಭಾರ್ಗವಿ ತಂದೆ ಹುಡುಗನನ್ನು ನೋಡಿ, ಮದುವೆ ಗೊತ್ತು ಮಾಡಿದರು. ಭಾರ್ಗವಿ ಕೂಡ ಮದುವೆಗೆ ಒಪ್ಪಿಕೊಂಡಳು, ಮದುವೆಗೆ ಇನ್ನೆರಡು ದಿನ ಇರುವ ಹಾಗೆ ಮಣಿಕಂಠ ತನ್ನ ವರಸೆ ಶುರು ಮಾಡಿ, ತನ್ನನ್ನು ಮದುವೆಯಾಗಬೇಕು ಎಂದು ಬ್ಲ್ಯಾಕ್ ಮೇಲ್ ಮಾಡಿದ. ಕೊನೆಗೆ ಭಾರ್ಗಬಿ ಅವನನ್ನು ಮದುವೆಯಾದಳು. ಎರಡು ವರ್ಷ ಅವಳ ಜೊತೆಗೆ ಸಂಸಾರ ಮಾಡಿದ, ಆಕೆ ಗರ್ಭಿಣಿ ಎಂದು ಗೊತ್ತಾದಾಗ ಎಸ್ಕೇಪ್ ಆದ. ಮಗು ಹುಟ್ಟಿ 15 ತಿಂಗಳು ಕಳೆದರೂ ಕೂಡ ಬರಲಿಲ್ಲ. ಫೋನ್ ಮಾಡಿದರೆ, ನನಗೆ ನೀನು ನಿನ್ನ ಮಗು ಎರಡು ಬೇಡ ಎಂದು ಧಮ್ಕಿ ಹಾಕೋದಕ್ಕೆ ಶುರು ಮಾಡಿದ.
ಇದರಿಂದ ಬೇರೆ ಏನು ಮಾಡಬೇಕು ಎಂದು ಗೊತ್ತಾಗದೆ, ಭಾರ್ಗವಿ ಮಣಿಕಂಠನ ಮನೆ ಹತ್ತಿರ ಒಂದು ಪೆಟ್ರೋಲ್ ಕ್ಯಾನ್ ತೆಗೆದುಕೊಂಡು ಹೋಗಿ ಧರಣಿ ಕುಳಿತಿದ್ದಾಳೆ. ಒಂದು ವೇಳೆ ತನ್ನ ಜೊತೆಗೆ ಬಂದು ಇರದೇ ಹೋದರೆ, ಅವರ ಮನೆ ಎದುರಲ್ಲೇ ಪ್ರಾಣ ಬಿಡುವುದಾಗಿ ಹೇಳುತ್ತಿದ್ದಾಳೆ ಭಾರ್ಗವಿ. ಈ ವಿಚಾರಕ್ಕೆ ಈಗ ಪೊಲೀಸರ ಆಗಮನ ಆಗಿದ್ದು, ಹೇಗೆ ಬಗೆಹರಿಸುತ್ತಾರೆ ಎಂದು ಕಾದು ನೋಡಬೇಕಿದೆ.
Comments are closed.